
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ 98 ದಿನಗಳು ಪೂರ್ಣವಾಗಿವೆ. ಪ್ರಸ್ತುತ ಬಿಗ್ಬಾಸ್ ಮನೆಯಲ್ಲಿ ಉಳಿದಿರುವ ಜನರೂ ಕಡಿಮೆ. ಉಳಿದಿರುವವರಲ್ಲಿ ಗಿಲ್ಲಿ ಈ ಬಾರಿಯ ವಿಜೇತ ಎನ್ನಲಾಗುತ್ತಿದೆ. ಪಕ್ಕಾ ಫಿನಾಲೆಗೆ ಬರುವ ಸ್ಪರ್ಧಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಗಿಲ್ಲಿ ಅದು ಹೇಗೆ ಇಷ್ಟು ಚೆನ್ನಾಗಿ ಆಡುತ್ತಿದ್ದಾರೆ. ಅದಕ್ಕಾಗಿ ಏನಾದರೂ ವಿಶೇಷ ತಯಾರಿ ಮಾಡಿಕೊಂಡು ಬಂದಿದ್ದಾರಾ? ಈ ಗುಟ್ಟನ್ನು ರಟ್ಟು ಮಾಡಿದ್ದಾರೆ ಸುದೀಪ್.
ಕಳೆದ ವಾರ ಗಿಲ್ಲಿ ಮನೆಯ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದವು. ಇದೀಗ ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಈ ಬಗ್ಗೆ ಚರ್ಚೆ ನಡೆಸಿದರು. ಆ ವೇಳೆ ಮನೆಯ ಯಾವೊಬ್ಬ ಸದಸ್ಯರೂ ಸಹ ಗಿಲ್ಲಿಯ ಕ್ಯಾಪ್ಟೆನ್ಸಿ ಹಾಗೂ ಉಸ್ತುವಾರಿ ಚೆನ್ನಾಗಿತ್ತು ಎನ್ನಲಿಲ್ಲ. ಆದರೆ ಅದೇ ಮಂದಿ, ಗಿಲ್ಲಿ ತಪ್ಪು ಮಾಡಿದಾಗ ಆತನನ್ನು ನೇರವಾಗಿ ಪ್ರಶ್ನೆ ಸಹ ಮಾಡಿರಲಿಲ್ಲ.
ಕ್ಯಾಪ್ಟೆನ್ಸಿ ಚರ್ಚೆ, ಇತರೆ ಸದಸ್ಯರು ಕ್ಯಾಪ್ಟನ್ಗಳಾಗಿದ್ದಾಗ ಗಿಲ್ಲಿಯ ವರ್ತನೆ, ಗಿಲ್ಲಿ ಕ್ಯಾಪ್ಟನ್ ಆಗಿದ್ದಾಗ ಅವರ ವರ್ತನೆ ಎರಡರ ವ್ಯತ್ಯಾಸದ ಬಗ್ಗೆ ಎಲ್ಲ ಮಾತನಾಡಿದ ಸುದೀಪ್, ಗಿಲ್ಲಿಗೆ ಪ್ರಶ್ನೆಯೊಂದು ಕೇಳಿದರು. ‘ಎಷ್ಟು ಬಿಗ್ಬಾಸ್ ಸೀಸನ್ ನೋಡಿಕೊಂಡು ಬಂದಿದ್ದೀರಿ’ ಎಂದು. ಅದಕ್ಕೆ ಗಿಲ್ಲಿ, ‘ನಾನು ಪ್ರತಿಯೊಂದು ಸೀಸನ್ನಿನ ಪ್ರತಿಯೊಂದು ಎಪಿಸೋಡ್ ನೋಡಿದ್ದೀನಿ’ ಎಂದರು. ನಿಮಗೆ ಇಷ್ಟವಾದ ಸೀಸನ್ ಯಾವುದು? ಎಂಬ ಪ್ರಶ್ನೆಗೆ, ‘ಹನುಮಂತು, ಮತ್ತು ಪ್ರಥಮ್’ ಇದ್ದ ಸೀಸನ್ ಎಂದರು ಗಿಲ್ಲಿ.
ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್ಬಾಸ್ ರ್ಯಾಪ್ ಸಾಂಗ್
ಅಲ್ಲಿಗೆ ಸುದೀಪ್ ಹೇಳಿದರು. ‘ಗಿಲ್ಲಿ, ಸ್ವಲ್ಪ ಹನುಮಂತು, ಸ್ವಲ್ಪ ಪ್ರಥಮ್ ಅವರ ವ್ಯಕ್ತಿತ್ವವನ್ನು, ಆಟದ ರೀತಿಯಲ್ಲಿ ಇಲ್ಲಿ ತೋರಿಸುತ್ತಿದ್ದಾರೆ ಅದು ತಪ್ಪೇನಲ್ಲ. ಗಿಲ್ಲಿ ಹಾಕುತ್ತಿರುವುದು ಬನಿಯನ್ನೇ ಆಗಿರಬಹುದು ಆದರೆ ಬದುಕುತ್ತಿರುವುದು ರಾಜನ ರೀತಿ’ ಎಂದರು. ಆ ಮೂಲಕ ಗಿಲ್ಲಿ, ಹನುಮಂತು ರೀತಿ, ಬಡವನ ಕಾರ್ಡ್ ಮತ್ತು ಪ್ರತಾಪ್ ರೀತಿ ಇನ್ನೋಸೆಂಟ್ ಕಾರ್ಡ್ ಅನ್ನು ಬೆರೆಸಿ ಆಟ ಆಡುತ್ತಿದ್ದಾರೆ. ಇತರೆ ಸ್ಪರ್ಧಿಗಳನ್ನು ಬಳಸಿ ಕಂಟೆಂಟ್ ತೆಗೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದರು. ಸುದೀಪ್ ಮಾತನ್ನು ಮನೆಯ ಇತರೆ ಸದಸ್ಯರು ಸಹ ಒಪ್ಪಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 pm, Sat, 3 January 26