
ಗಿಲ್ಲಿ, ಬಿಗ್ಬಾಸ್ (Bigg Boss) ಮನೆಯಲ್ಲಿ ಏಕೈಕ ಎಂಟರ್ಟೈನ್ಮೆಂಟ್ ಮೆಟಿರಿಯಲ್. ಕೆಲವರಿಗೆ ಅವರು ಹಾಸ್ಯ ಮಾಡುವ ರೀತಿ ಮುಜುಗರ ಅಥವಾ ಇರಿಟೇಟಿಂಗ್ ಎನ್ನಿಸಬಹುದು, ವ್ಯಂಗ್ಯ ಮಾಡಿ ಅದನ್ನು ಹಾಸ್ಯ ಎನ್ನುತ್ತಾರೆ ಎಂದು ಸಹ ಕೆಲವರು ದೂರಿರುವುದು ಉಂಟು. ಆದರೆ ಅವರೊಬ್ಬ ಒಳ್ಳೆಯ ಕಮಿಡಿಯನ್ ಎಂಬುದನ್ನು ಅಲ್ಲಗಳೆಯಲಾಗದು. ಅದರಲ್ಲೂ ಅವರು ಸ್ಪಾಂಟೇನಿಯಸ್ ಆಗಿ ಹೊಡೆಯುವ ಡೈಲಾಗ್ಗಳು ಎಂಥಹವರಿಗೂ ನಗು ತರಿಸುತ್ತವೆ. ನಿನ್ನೆಯ ಎಪಿಸೋಡ್ನಲ್ಲಿಯೂ ಹೀಗೆಯೇ ಆಗಿದೆ.
ಬಿಗ್ಬಾಸ್ ಮನೆಗೆ ಉಗ್ರಂ ಮಂಜು, ಮೋಕ್ಷಿತಾ, ಚೈತ್ರಾ ಕುಂದಾಪುರ, ರಜತ್ ಮತ್ತು ತ್ರಿವಿಕ್ರಮ್ ಅವರುಗಳು ಅತಿಥಿಗಳಾಗಿ ಬಂದಿದ್ದಾರೆ. ಮೊದಲ ದಿನವೇ ಗಿಲ್ಲಿ ಹಾಗೂ ಉಗ್ರಂ ಮಂಜು, ರಜತ್ ನಡುವೆ ಕಿರಿಕ್ ಆಯ್ತು. ಗಿಲ್ಲಿಯ ಕಾಲೆಳೆಯುವ ಕಾಮಿಡಿ ಇಬ್ಬರಿಗೂ ಇಷ್ಟವಾಗಲಿಲ್ಲ. ಗಿಲ್ಲಿಗೆ ಇಬ್ಬರೂ ಎಚ್ಚರಿಕೆ ಕೊಟ್ಟರು. ಮನೆ ಮಂದಿಯೂ ಸಹ ಕೇಳಿ ಕೊಂಡಿದ್ದರಿಂದ ಗಿಲ್ಲಿ ತುಸು ಮೌನಕ್ಕೆ ಜಾರಿದ್ದರು. ತಮ್ಮ ಎಂದಿನ ಹಾಸ್ಯಮಯ ಪ್ರವೃತ್ತಿ ಬಿಟ್ಟು ತುಸು ಗಂಭೀರವಾಗಿದ್ದರು.
ಆದರೆ ನಿನ್ನೆಯ ಎಪಿಸೋಡ್ನಲ್ಲಿ ಬಿಗ್ಬಾಸ್ನ ಆದೇಶದಂತೆ ಅತಿಥಿಗಳನ್ನು ರಂಜಿಸಬೇಕಿತ್ತು. ಮನೆಯ ಮಹಿಳೆಯರು ಫ್ಯಾಷನ್ ಶೋ ಮಾಡಿದರು. ರಘು ಮತ್ತು ರಕ್ಷಿತಾ ಭಾವುಕ ನಾಟಕವೊಂದನ್ನು ಮಾಡಿ ಎಲ್ಲರನ್ನೂ ಭಾವುಕಗೊಳಿಸಿದರು. ಅಭಿ ಮತ್ತು ಸ್ಪಂದನಾ ಧಾರಾವಾಹಿ ಸೀನ್ ಒಂದನ್ನು ರೀಕ್ರಿಯೇಟ್ ಮಾಡಿದರು. ಅಶ್ವಿನಿ, ಜಾನ್ವಿ ಮತ್ತು ಸ್ಪಂದನಾ ತಮಾಷೆಯ ಸ್ಕಿಟ್ ಒಂದನ್ನು ಮಾಡಿ ನಗಿಸಿದರು. ಗಿಲ್ಲಿ, ಏಕವ್ಯಕ್ತಿ ಪ್ರದರ್ಶನ ನೀಡಿದರು.
ಇದನ್ನೂ ಓದಿ:ಮದುವೆ ಆಗ್ತೀಯ ಎಂದ ತ್ರಿವಿಕ್ರಮ್: ರಕ್ಷಿತಾ ಹೇಳಿದ್ದೇನು?
ಮೊದಲಿಗೆ ‘ಮುಂಗಾರು ಮಳೆ’ ಸಿನಿಮಾದ ‘ಟೈಮ್ ಅನ್ನೋದು ಪಕ್ಕಾ 420’ ಡೈಲಾಗ್ ಅನ್ನು ಬಿಗ್ಬಾಸ್ ಮನೆಗೆ ಸಮೀಕರಿಸಿ ಡೈಲಾಗ್ ಹೇಳಿದರು. ‘ನನಗೆ ಕ್ಯಾಫ್ಟೆನ್ಸಿ ಸಿಗುತ್ತೆ, ಜಾರ್ ಆಫ್ ಫೋಟೊ ಫ್ರೇಂ ಸಿಗುತ್ತೆ ಅಂದುಕೊಂಡಿದ್ದೆ, ಆ ಟೈಮ್ ಬರಲೇ ಇಲ್ಲ’ ಎಂದು ಶುರು ಮಾಡಿದ ಗಿಲ್ಲಿ, ಅತಿಥಿಗಳ ಹೆಸರೇಳಿ, ಅವರನ್ನೂ ತಮ್ಮ ಡೈಲಾಗ್ ಒಳಗೆ ಸೇರಿಕೊಂಡು ಕಾಮಿಡಿ ಮಾಡಿದರು. ಗಿಲ್ಲಿಯ ಡೈಲಾಗ್ಗೆ ಅತಿಥಿಗಳು ಚಪ್ಪಾಳೆ ಹೊಡೆದರು.
ಬಳಿಕ ಮತ್ತೊಂದು ಡೈಲಾಗ್ ಹೊಡೆದ ಗಿಲ್ಲಿ, ಡೈಲಾಗ್ ಹೇಳುವ ಮುಂಚೆಯೇ ಅತಿಥಿಗಳಿಗೆ ಕೈಮುಗಿದು, ‘ಈ ಡೈಲಾಗ್ ಯಾವುದೇ ವ್ಯಕ್ತಿಗೆ, ಪ್ರಾಣಿಗೆ ಸಂಬಂಧಿಸಿದ್ದಲ್ಲ’ ಎಂದು ಡಿಸ್ಕೇಮರ್ ಹೇಳಿದರು. ಬಳಿಕ, ‘ಬಿಬಿ ಪ್ಯಾಲೆಸ್ಗೆ ಬಂದೆ ಕುಲುಮೇಲಿ ಬಿದ್ದಂಗಾಯ್ತು, ಆರ್ಡರ್ ಕೇಳಿದ್ಕೆ ಬಡುದ್ರು, ಟಿಪ್ಸ್ ಕೇಳಿದ್ಕೆ ತಟ್ಟುದ್ರು, ತಟ್ಟಿ, ತಟ್ಟಿ ಬಡ್ದು, ಬಡ್ದು ಈಗ ಕಬ್ಣ ಕತ್ತಿ ಆಗೈತೆ, ಈ ಕತ್ತಿಗೆ ಗೊತ್ತಿರೋದು ಒಂದೇ, ಕೇಳಿದ್ದನ್ನು ಸಪ್ಲೈ ಮಾಡೋದಷ್ಟೆ’ ಎಂದರು. ಗಿಲ್ಲಿ ಕೊನೆಯಲ್ಲಿ ಕೊಟ್ಟ ಟ್ವಿಸ್ಟ್ಗೆ ಅತಿಥಿಗಳು ಸೇರಿದಂತೆ ಇಡೀ ಮನೆ ಮಂದಿ ನಕ್ಕರು. ಗಿಲ್ಲಿ ಮೇಲೆ ಸಿಟ್ಟಾಗಿದ್ದ ರಜತ್, ಉಗ್ರಂ ಮಂಜು ಸಹ ಚಪ್ಪಾಳೆ ತಪ್ಪಿ ಅಭಿನಂದಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ