AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ ಕತೆಯಲ್ಲಿ ಸುದೀಪ್ ಚರ್ಚೆ ಮಾಡಬೇಕಾದ ವಿಷಯ ಯಾವುದು? ಇದೆ ದೊಡ್ಡ ಪಟ್ಟಿ

ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯ ವಿವಾದಿತ ವಿಷಯಗಳನ್ನು ಚರ್ಚಿಸಲಿದ್ದಾರೆ. ಗಿಲ್ಲಿಯ ಮಿತಿಮೀರಿದ ಮಾತುಗಳು, ಅತಿಥಿಗಳ ನಡೆ, ಅಭಿಷೇಕ್ ಕಾರ್ಯನಿರ್ವಹಣೆ ಮತ್ತು ಧ್ರುವಂತ್ 'ಟಿ ಕೊಬ್ಬು' ಪದ ಬಳಕೆಯು ಪ್ರಮುಖ ಚರ್ಚೆಗೆ ಬರಲಿವೆ. ವಾರಪೂರ್ತಿ ನಡೆದ ತಪ್ಪುಗಳಿಗೆ ನ್ಯಾಯ ಒದಗಿಸಲು ಸುದೀಪ್ ಸಜ್ಜಾಗಿದ್ದಾರೆ.

ವಾರದ ಕತೆಯಲ್ಲಿ ಸುದೀಪ್ ಚರ್ಚೆ ಮಾಡಬೇಕಾದ ವಿಷಯ ಯಾವುದು? ಇದೆ ದೊಡ್ಡ ಪಟ್ಟಿ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Nov 29, 2025 | 7:05 AM

Share

ವೀಕೆಂಡ್ ಬಂತು ಎಂದರೆ ಕಿಚ್ಚ ಸುದೀಪ್ (Sudeep) ಅವರು ಬರುತ್ತಾರೆ. ವಾರ ಪೂರ್ತಿ ನಡೆದ ತಪ್ಪುಗಳಿಗೆ ಸುದೀಪ್ ಅವರು ವಾರದ ಕತೆಯಲ್ಲಿ ನ್ಯಾಯ ಒದಗಿಸುತ್ತಾರೆ. ಈ ವಾರದ ಪಂಚಾಯ್ತಿ ಇಂದು (ನವೆಂಬರ್ 29) ನಡೆಯಲಿದೆ. ಸುದೀಪ್ ಅವರು ಸಾಕಷ್ಟು ವಿಚಾರಗಳನ್ನು ಮಾತನಾಡಲಿದ್ದಾರೆ. ಈ ವಾರ ಅತಿಥಿಗಳು ಬಂದಿದ್ದರು. ಅವರು ನಡೆದುಕೊಂಡ ರೀತಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಇನ್ನು, ಮನೆಯಲ್ಲಿ ಗಿಲ್ಲಿ ನಡೆ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಹಾಗಾದರೆ ವೀಕೆಂಡ್​ನಲ್ಲಿ ಚರ್ಚೆ ಆಗಲೇಬೇಕಾದ ವಿಷಯಗಳು ಏನು? ಆ ಬಗ್ಗೆ ಇಲ್ಲಿದೆ ವಿವರ.

ಗಿಲ್ಲಿ ನಡೆದುಕೊಂಡ ರೀತಿ

ಈ ಬಾರಿ ಗಿಲ್ಲಿ ಅವರು ನಡೆದುಕೊಂಡ ರೀತಿ ಚರ್ಚೆಗೆ ಗ್ರಾಸವಾಗಿದೆ. ಮನೆಗೆ ಬಂದ ಅತಿಥಿಗಳು ಅತಿಯಾಗಿ ಆಡಿದರು ಎಂಬುದು ಎಷ್ಟು ನಿಜವೋ ಕೆಲವು ಸಂದರ್ಭದಲ್ಲಿ ಗಿಲ್ಲಿ ಆಡಿದ ಮಾತುಗಳು ಮಿತಿಮೀರಿತ್ತು ಎಂಬುದು ಅಷ್ಟೇ ನಿಜ. ಮಂಜು ಬಳಿ ‘ಎಷ್ಟನೇ ಮದುವೆ’ ಎಂದು ಕೇಳಿದ್ದು, ಪದೇ ಪದೇ ‘ಬಿಟ್ಟಿ ತಿನ್ನೋಕೆ ಬಂದಿದ್ದೀರಾ’ ಎಂದು ಹೇಳಿದ್ದು ವೀಕೆಂಡ್​ನಲ್ಲಿ ಚರ್ಚೆಯ ಪ್ರಮುಖ ವಿಷಯ ಆಗಿರಲಿದೆ. ಹಾಸ್ಯದ ಹೆಸರಲ್ಲಿ ಗಿಲ್ಲಿ ಮಿತಿಮೀರಿ ನಡೆದುಕೊಂಡಿದ್ದನ್ನು ಸುದೀಪ್ ಪ್ರಶ್ನೆ ಮಾಡಲಿದ್ದಾರೆ.

ಅತಿಥಿಗಳಿಗೂ ಇದೆ ಮಂಗಳಾರತಿ?

ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳಿಗೂ ಮಂಗಳಾರತಿ ಇದೆಯೇ ಎಂಬ ಪ್ರಶ್ನೆ ಮೂಡಿದೆ. ಇಲ್ಲಿ ಗಿಲ್ಲಿಯದ್ದು ಎಷ್ಟು ತಪ್ಪಿದೆಯೋ ಅತಿಥಿಗಳು ಕೂಡ ಅಷ್ಟೇ ತಪ್ಪನ್ನು ಮಾಡಿದ್ದರು. ಇದನ್ನು ಸುದೀಪ್ ಅವರು ಪ್ರಶ್ನೆ ಮಾಡೋ ಸಾಧ್ಯತೆ ಇದೆ.

ಅಭಿಷೇಕ್ ನಡೆ

ಅಭಿಷೇಕ್ ಅವರು ಈ ವಾರ ಮ್ಯಾನೇಜರ್ ಆಗಿದ್ದರು. ಅವರು ಪಾಯಿಂಟ್ಸ್​ನ ಸರಿಯಾಗಿ ಹಂಚಿಕೆ ಮಾಡಿಲ್ಲ ಎನ್ನುವ ಆರೋಪ ಇದೆ. ಇದನ್ನು ಸುದೀಪ್ ಅವರು ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ರೆಸಾರ್ಟ್​ನ ಲೋಕಲ್ ಬಾರ್ ಮಾಡಿದ್ರು’; ರಜತ್​ಗೆ ಸುದೀಪ್ ಕ್ಲಾಸ್​ ತೆಗೆದುಕೊಂಡ ವಿಡಿಯೋ ವೈರಲ್

ಟಿ ಕೊಬ್ಬು

ಧ್ರುವಂತ್ ಅವರು ಈ ವಾರ ಟಿ ಕೊಬ್ಬು ಎಂಬ ಪದ ಬಳಕೆ ಮಾಡಿದ್ದಾರೆ. ಇದು ಒಳ್ಳೆಯ ಪದ ಅಲ್ಲ. ಹೀಗಾಗಿ, ಇಂತಹ ರಿಯಾಲಿಟಿ ಶೋನಲ್ಲಿ ಅದನ್ನು ಬಳಕೆ ಮಾಡೋದು ಎಷ್ಟು ಸರಿ ಎಂಬುದು ಪ್ರಶ್ನೆ. ಹೀಗಾಗಿ, ಈ ಬಗ್ಗೆ ಸುದೀಪ್ ಪ್ರಶ್ನೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​
ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್
ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್