AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ನಿಘಂಟಿಗೆ ಹೊಸ ಶಬ್ದ ಸೇರಿಸಿದ್ರಿ; ಬರ್ತಿದ್ದಂತೆ ಧ್ರುವಂತ್​ಗೆ ಕ್ಲಾಸ್ ತೆಗೆದುಕೊಂಡ ಸುದೀಪ್

ಸುದೀಪ್ ಅವರು ಬರುತ್ತಿದ್ದಂತೆ ಧ್ರುವಂತ್ ಬಳಿ ಪ್ರಶ್ನೆ ಮಾಡಿದ್ದಾರೆ. ‘ಹೇಳಿ ಧ್ರುವಂತ್ ಅವರೇ’ ಎಂದರು. ಏನು ಹೇಳಬೇಕು ಎಂದು ಧ್ರುವಂತ್ ಮರು ಪ್ರಶ್ನೆ ಮಾಡಿದರು. ‘ಈ ಸೀಸನ್​ ಅವರು ತುಂಬಾನೇ ಬುದ್ಧಿವಂತರು’ ಎಂದರು ಸುದೀಪ್. ಆಗ ‘ಗಾಂಚಾಲಿ ಬಗ್ಗೆನಾ’ ಎಂದು ಧ್ರುವಂತ್ ಪ್ರಶ್ನೆ ಮಾಡಿದರು.

ಕನ್ನಡ ನಿಘಂಟಿಗೆ ಹೊಸ ಶಬ್ದ ಸೇರಿಸಿದ್ರಿ; ಬರ್ತಿದ್ದಂತೆ ಧ್ರುವಂತ್​ಗೆ ಕ್ಲಾಸ್ ತೆಗೆದುಕೊಂಡ ಸುದೀಪ್
ಧ್ರುವಂತ್-ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 29, 2025 | 9:45 PM

Share

ಈ ವಾರ ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ವಿಚಾರಗಳು ನಡೆದವು. ಇದರಲ್ಲಿ ಧ್ರುವಂತ್ ಅವರು ಬಳಕೆ ಮಾಡಿದ ಶಬ್ದ ಕೂಡ ಒಂದು. ಜಗಳ ಆಡುವಾಗ ಅವರು ‘T* ಗಾಂಚಾಲಿ ಎಂಬ ಪದ ಬಳಸಿದ್ದರು. ಸಿಟ್ಟಲ್ಲಿ ಅದನ್ನು ಹೇಳಿದ್ದರು. ಈ ವಿಷಯದ ಬಗ್ಗೆ ಧನುಷ್ ಪ್ರಶ್ನೆ ಮಾಡಿದ್ದರು. ಆಗ ‘ನಾನು ಬಳಸ್ತೀನಿ ಏನಿವಾಗ’ ಎಂದು ಧ್ರುವಂತ್ ಅವರು ಹೇಳಿದ್ದರು. ವಾರಾಂತ್ಯದಲ್ಲಿ ಈ ವಿಷಯ ಚರ್ಚೆ ಆಗಿದೆ.

ಸುದೀಪ್ ಅವರು ಬರುತ್ತಿದ್ದಂತೆ ಧ್ರುವಂತ್ ಬಳಿ ಪ್ರಶ್ನೆ ಮಾಡಿದ್ದಾರೆ. ‘ಹೇಳಿ ಧ್ರುವಂತ್ ಅವರೇ’ ಎಂದರು. ಏನು ಹೇಳಬೇಕು ಎಂದು ಧ್ರುವಂತ್ ಮರು ಪ್ರಶ್ನೆ ಮಾಡಿದರು. ‘ಈ ಸೀಸನ್​ ಅವರು ತುಂಬಾನೇ ಬುದ್ಧಿವಂತರು’ ಎಂದರು ಸುದೀಪ್. ಆಗ ‘ಗಾಂಚಾಲಿ ಬಗ್ಗೆನಾ’ ಎಂದು ಧ್ರುವಂತ್ ಪ್ರಶ್ನೆ ಮಾಡಿದರು.

‘ಟಿ ಗಾಂಚಾಲಿ ಶಬ್ದ ಬಳಸಿದೆ. ಟಿ ಗಾಂಚಾಲಿ ಎಂದರೆ ತಲೆ ಗಾಂಚಾಲಿ ಎಂದಾಗಬಹುದು’ ಎಂದರು ಧ್ರುವಂತ್. ‘ಮನೆಯಲ್ಲಿ ಎಲ್ಲರೂ ಅದೇ ಶಬ್ದ ಬಳಸಬಹುದಾ? ತಲೆ ಕೊಬ್ಬು, ತಲೆ ಗಾಂಚಾಲಿ ಎಂದೇ ಹೇಳಬಹುದೇ? ಅದನ್ನು ನಿಮಗೆ ಬಳಸಬಹುದಾ. ಕನ್ನಡ ನಿಘಂಟಿಗೆ ಹೊಸ ಶಬ್ದ ಸೇರಿಸಿದ್ರಿ’ ಎಂದು ಸುದೀಪ್ ಹೇಳಿದರು. ‘ಓಕೆ ಸರ್’ ಎಂದು ಧ್ರುವಂತ್ ಹೇಳಿದರು. ಆಗ ‘ನಾಟ್ ಓಕೆ’ ಎಂದರು ಸುದೀಪ್.

‘ಪುಶ್ ಆಯ್ತು.ಟ್ರಿಗರ್ ಆಯ್ತು’ ಎಂದು ಸ್ಪಷ್ಟನೆ ನೀಡಲು ಬಂದರು ಧ್ರುವಂತ್. ‘ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಎಲ್ಲರಿಗೂ ಪುಶ್ ಮಾಡ್ತಾರೆ. ಎಲ್ಲರೂ ಟ್ರಿಗರ್ ಮಾಡ್ತಾರೆ. ನೀವು ಏನು ಕೊಡ್ತೀರೋ ಅದಕ್ಕೆ 10 ಪಟ್ಟು ಬರುತ್ತದೆ. ನಿಮಗೇ ತಿರುಗುತ್ತದೆ’ ಎಂದಿದ್ದಾರೆ ಕಿಚ್ಚ.

ಇದನ್ನೂ ಓದಿ: ಅತಿಥಿಗಳು ಕೇವಲ ಅತಿಥಿಗಳಲ್ಲ: ಟ್ವಿಸ್ಟ್ ಕೊಟ್ಟ ಸುದೀಪ್

‘ನಿಮಗೆ ಯಾರಾದರೂ ಬಂದು ಹೀಗೆ ಮಾತನಾಡಿದ್ರೆ ಹೇಗನಿಸುತ್ತದೆ? ತಲೆ ಗಾಂಚಲಿ ವಿಚಾರ ಬೇಡ. ಮತ್ತೊಮ್ಮೆ ಇದನ್ನು ಮಾತನಾಡಿದರೆ ಟಿ ಎಂದರೆ ಏನು ಎಂದು ಹೇಳುವ ತನಕ ಬಿಡಲ್ಲ’ ಎಂದರು ಸುದೀಪ್. ‘ನಂಗೆ ಗೊತ್ತು ಆ ಶಬ್ದದ ಅರ್ಥ ಎಲ್ಲರಿಗೂ ಗೊತ್ತಿದೆ ಎಂದು. ಅಶ್ವಿನಿ ಅವರಿಗೂ ಇದರ ಅರ್ಥ ತಿಳಿದಿದೆ’ ಎಂದರು ಕಿಚ್ಚ. ನಂತರ ಈ ವಿಷಯವನ್ನು ಅಲ್ಲಿಯೇ ಬಿಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:44 pm, Sat, 29 November 25