‘ಇಲ್ಲೇ ಪ್ಯಾಂಟ್​ ಬಿಚ್ಚಲಾ, ಚೆಡ್ಡಿ ಬಿಚ್ಚಲಾ ಎಂದು ಕೇಳ್ತಾರೆ’; ಜಗದೀಶ್ ಬಗ್ಗೆ ಹಂಸಾ ಅಸಮಾಧಾನ

ಬ್ಲೈಂಡ್ಸ್ ಡೌನ್ ಆದಾಗ ಅದರಲ್ಲಿ ಇಣುಕಿ ಯಾರೂ ನೋಡಬಾರದು ಎಂಬುದು ಬಿಗ್ ಬಾಸ್​ನ ಮೂಲ ನಿಯಮ. ಈ ನಿಯಮಗಳನ್ನು ಮುರಿದರೆ ಬಿಗ್ ಬಾಸ್ ಎಂದಿಗೂ ಸಹಿಸೋದಿಲ್ಲ. ಈಗ ದೊಡ್ಮನೆಯಲ್ಲಿ ಈ ಘಟನೆ ನಡೆದು ಹೋಗಿದೆ. ಮಾನಸಾ, ಶಿಶಿರ್ ಹಾಗೂ ಮೋಕ್ಷಿತಾ ಅವರು ಬ್ಲೈಂಡ್ಸ್ ಡೌನ್ ಆದಾಗ ಇಣುಕಿ ನೋಡಿದ್ದರು. ಇದಕ್ಕೆ ಶಿಕ್ಷೆ ಸಿಕ್ಕಿದೆ.

‘ಇಲ್ಲೇ ಪ್ಯಾಂಟ್​ ಬಿಚ್ಚಲಾ, ಚೆಡ್ಡಿ ಬಿಚ್ಚಲಾ ಎಂದು ಕೇಳ್ತಾರೆ’; ಜಗದೀಶ್ ಬಗ್ಗೆ ಹಂಸಾ ಅಸಮಾಧಾನ
ಹಂಸ-ಜಗದೀಶ್

Updated on: Oct 09, 2024 | 8:41 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹಂಸ ಅವರ ಅತಿರೇಕದ ವರ್ತನೆ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರು ಎಲ್ಲರ ವಿರುದ್ಧ ಸಿಡಿದೆದ್ದಿದ್ದಾರೆ. ಸುಖಾಸುಮ್ಮನೆ ಕಿರಿಕ್ ಮಾಡಿಕೊಳ್ಳುತ್ತಾರೆ. ಹಂಸ ಬಗ್ಗೆ ಅವರಿಗೆ ಸಾಕಷ್ಟು ಅಸಮಾಧಾನ ಇದೆ. ಹೀಗಿರುವಾಗಲೇ ಹಂಸ ಅವರು ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಬ್ಲೈಂಡ್ಸ್ ಡೌನ್ ಆದಾಗ ಅದರಲ್ಲಿ ಇಣುಕಿ ಯಾರೂ ನೋಡಬಾರದು ಎಂಬುದು ಬಿಗ್ ಬಾಸ್​ನ ಮೂಲ ನಿಯಮ. ಈ ನಿಯಮಗಳನ್ನು ಮುರಿದರೆ ಬಿಗ್ ಬಾಸ್ ಎಂದಿಗೂ ಸಹಿಸೋದಿಲ್ಲ. ಈಗ ದೊಡ್ಮನೆಯಲ್ಲಿ ಈ ಘಟನೆ ನಡೆದು ಹೋಗಿದೆ. ಮಾನಸಾ, ಶಿಶಿರ್ ಹಾಗೂ ಮೋಕ್ಷಿತಾ ಅವರು ಬ್ಲೈಂಡ್ಸ್ ಡೌನ್ ಆದಾಗ ಇಣುಕಿ ನೋಡಿದ್ದರು. ಅದೇ ರೀತಿ ಜಗದೀಶ್ ಅವರು ಬ್ಲೈಂಡ್ಸ್ ಒಳಗೆ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡಿದ್ದಾರೆ.

‘ಬಟ್ಟೆ ಚೇಂಜ್ ಮಾಡುವ ಕಾರಣಕ್ಕೆ ನಾನು ಬ್ಲೈಂಡ್ಸ್ ಒಳಗೆ ಹೋಗಿದ್ದೆ. ನಾನು ಅಲ್ಲಿ ಏನನ್ನೂ ನೋಡಿಲ್ಲ’ ಎಂದು ಜಗದೀಶ್ ಅವರು ಹೇಳಿದರು. ‘ಬೇರೆಯವರಿಗೆ ತೊಂದರೆ ಕೊಡೋದು ಬೇಡ. ನಿಮಗೆ ನೀವು ಏನು ಬೇಕಾದರೂ ಮಾಡಿಕೊಳ್ಳಿ. ಬೇಕಿದ್ರೆ ಬಿಗ್ ಬಾಸ್​ಗೆ ಹೇಳಿ ಚಾಕು ಬೇಕಿದ್ದರೂ ಹಾಕಿಕೊಳ್ಳಿ’ ಎಂದು ಉಗ್ರಂ ಮಂಜು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ‘ಯಾವ ಸೀಮೆಯ ಕ್ಯಾಪ್ಟನ್ ನೀವು?’; ಹಂಸಾ ವಿರುದ್ಧ ಸಿಡಿದೆದ್ದ ಚೈತ್ರಾ ಕುಂದಾಪುರ

ಆ ಬಳಿಕ ಮಾತನಾಡಿದ ಹಂಸ, ‘ನಾನು ಎಷ್ಟು ಅಂತ ಹೇಳೋದು? ಕೇಳಿದ್ರೆ ಇಲ್ಲೇ ಪ್ಯಾಂಟ್​ ಬಿಚ್ಚಲಾ, ಚೆಡ್ಡಿ ಬಿಚ್ಚಲಾ’ ಎಂದು ಕೇಳ್ತಾರೆ ಎದು ಅಸಮಾಧಾನ ಹೊರಹಾಕಿದ್ದಾರೆ. ಇದು ಜಗದೀಶ್ ಅವರಿಗೆ ಹೇಳಿದ ಮಾತು. ಜಗದೀಶ್ ಅವರು ಹಂಸಗೆ ಟಾರ್ಚರ್ ನೀಡಲೇಬೇಕು ಎನ್ನವು ನಿರ್ಧಾರಕ್ಕೆ ಬಂದಿದ್ದಾರೆ. ಈ ಕಾರಣದಿಂದ ಅವರು ಈ ರೀತಿ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:40 am, Wed, 9 October 24