ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ಯಾರು?

|

Updated on: Dec 19, 2023 | 11:41 PM

Bigg Boss: ಫಿನಾಲೆಗೆ ಹತ್ತಿರವಾಗುತ್ತಲೂ ಮನೆಯ ಸದಸ್ಯರು ನಾಮಿನೇಷನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಈ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿರುವವರು ಯಾರು?

ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ಯಾರು?
Follow us on

ವಾರಗಳು ಕಳೆದಂತೆ ಬಿಗ್​ಬಾಸ್ (BiggBoss) ಸ್ಪರ್ಧಿಗಳ ನಡುವೆ ಸ್ಪರ್ಧೆ ಕಾವೇರಿದೆ. ಪ್ರತಿ ವಾರವೂ ಒಬ್ಬ ಸ್ಪರ್ಧಿ ಇನ್ನೊಬ್ಬರನ್ನು ಮನೆಯಿಂದ ಹೊರಗೆ ಕಳಿಸಲು, ಟಾಸ್ಕ್​ಗಳಲ್ಲಿ ಗೆದ್ದೇ ತೀರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಕಳೆದ ವಾರ ತುಸು ಮೈಲ್ಡ್ ಆದ ಟಾಸ್ಕ್​ ಅನ್ನು ಬಿಗ್​ಬಾಸ್ ನೀಡಿದ್ದರು. ಹಾಗಾಗಿ ಮನೆಯಲ್ಲಿ ತುಸು ಶಾಂತಿ ನೆಲೆಸಿತ್ತು. ಆದರೆ ಈ ವಾರ ಹಾಗಿರುವುದಿಲ್ಲ ಎಂಬುದನ್ನು ಸುದೀಪ್ ವೀಕೆಂಡ್​ನಲ್ಲಿಯೇ ಸುಳಿವು ನೀಡಿದ್ದರು. ಅಂತೆಯೇ ಈ ವಾರ ನಾಮಿನೇಷನ್ ಪ್ರಕ್ರಿಯೆ ಭಿನ್ನವಾಗಿತ್ತು.

ಮರದ ಪೆಟ್ಟಿಗೆಯೊಂದನ್ನು ಮಾಡಿ ಅದರಲ್ಲಿ ಒಂದು ಕುರ್ಚಿ ಹಾಕಲಾಗಿತ್ತು. ಪ್ರತಿ ಸದಸ್ಯರು ಆ ಕುರ್ಚಿಯಲ್ಲಿ ಕೂರಬೇಕಿತ್ತು. ಅವರನ್ನು ನಾಮಿನೇಟ್ ಮಾಡಿದವರು ಕುರ್ಚಿಯಲ್ಲಿ ಕೂತ ವ್ಯಕ್ತಿಯ ಮೇಲೆ ಕಪ್ಪು ಬಣ್ಣದ ಟಾರ್ ರೀತಿ ಕಾಣುವ ನೀರು ಸುರಿಯಬೇಕಿತ್ತು. ನಮ್ರತಾ ಅವರನ್ನು ಹೊರತುಪಡಿಸಿ ಮನೆಯ ಬಹುತೇಕ ಸದಸ್ಯರು ಒಬ್ಬರಲ್ಲ, ಒಬ್ಬರಿಂದ ನಾಮಿನೇಟ್ ಆಗಿ ಮೈಮೇಲೆ ಕಪ್ಪು ನೀರು ಸುರಿಸಿಕೊಂಡರು.

ಪ್ರತಿ ಬಾರಿ ನಾಮಿನೇಟ್ ಆಗುತ್ತಿರುವ ಸಂಗೀತಾ, ಈ ಬಾರಿಯೂ ನಾಮಿನೇಟ್ ಆದರು, ಅವರಿಗೆ ಅವರ ಪರಮ ವೈರಿ ವಿನಯ್ ಅವರೇ ಬಕೆಟ್ ತುಂಬಾ ಕಪ್ಪು ನೀರು ತೆಗೆದು ಸುರಿದರು. ಕಾರ್ತಿಕ್ ಅವರನ್ನು ನಾಮಿನೇಟ್ ಮಾಡುವುದಾಗಿ ಮೈಖಲ್ ಹೇಳಿದರು. ಆದರೆ ಅವರು ಕೊಟ್ಟ ಕಾರಣ ಮೈಖಲ್​ಗೆ ಹಿಡಿಸಲಿಲ್ಲ. ಬಳಿಕ ಮೈಖಲ್ ಬಂದಾಗ ಕಾರ್ತಿಕ್ ಸಹ ನಾಮಿನೇಟ್ ಮಾಡಿ ಅವರ ಮೈಮೇಲೆ ಬಣ್ಣ ಕಪ್ಪು ನೀರು ಸುರಿದರು.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

ಸಂಗೀತಾರನ್ನು, ತುಕಾಲಿ, ವಿನಯ್, ನಮ್ರತಾ, ಮೈಖಲ್ ಅವರುಗಳು ನಾಮಿನೇಟ್ ಮಾಡಿದರು. ಡ್ರೋನ್ ಪ್ರತಾಪ್ ಅನ್ನು ವಿನಯ್, ತುಕಾಲಿ, ಮೈಖಲ್ ಅವರು ನಾಮಿನೇಟ್ ಮಾಡಿದರು. ಅಂತಿಮವಾಗಿ ಅವಿ, ಸಂಗೀತಾ, ಮೈಖಲ್, ಪ್ರತಾಪ್, ಸಿರಿ ಅವರುಗಳು ಈ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆದರು. ನಾಮಿನೇಟ್ ಮಾಡುವ ಅವಾಶವೂ ಸಹ ಕಡಿಮೆ ಜನಕ್ಕೆ ಈ ಬಾರಿ ಇತ್ತು. ಇನ್ನು ನಮ್ರತಾಗೆ ವಿಶೇಷ ಅಧಿಕಾರ ಇದ್ದು, ಅದನ್ನು ಬಳಸಿ ಅವರು ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ಆ ಅಧಿಕಾರ ಬಳಸಿದ ನಮ್ರತಾ ನೇರವಾಗಿ ವರ್ತೂರು ಸಂತು ಅವರನ್ನು ನಾಮಿನೇಟ್ ಮಾಡಿದರು. ಬರೋಬ್ಬರಿ ನಾಲ್ಕು ವಾರದ ಬಳಿಕ ವರ್ತೂರು ಸಂತೋಷ್ ಅವರು ನಾಮಿನೇಟ್ ಆದಂತಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ