‘ಆ ಪದ ಮತ್ತೆ ಬಳಸಲ್ಲ’: ಸುದೀಪ್ ಮುಂದೆ ಪ್ರಮಾಣ ಮಾಡಿದ ಮಂಜ

ಮನೆಯ ಹಲವು ಸ್ಪರ್ಧಿಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಬದಿದ್ದ. ಕೆಟ್ಟದಾಗಿ ವರ್ತಿಸಿದ್ದ, ಕ್ರೂರತನ ಮೆರೆದಿದ್ದ, ನಿಯಮಗಳನ್ನು ಮುರಿದಿದ್ದ ಇದೆಲ್ಲವನ್ನೂ ಪರಿಗಣಿಸಿ ಮಂಜನನ್ನು ಬಿಗ್​​ಬಾಸ್ ಹೊರಗೆ ಹಾಕಿದರು. ಹೀಗೆ ಹೊರ ತಳಲ್ಪಟ್ಟವರನ್ನು ಸುದೀಪ್ ವೇದಿಕೆ ಮೇಲೆ ಮಾತನಾಡಿಸಿರಲಿಲ್ಲ ಆದರೆ ಸುದೀಪ್ ಅವರು ಹೊರಗೆ ಬಂದ ಮಂಜ ಅವರನ್ನು ವೇದಿಕೆಗೆ ಕರೆಸಿ ಮಾತನಾಡಿಸಿದ್ದಲ್ಲದೆ, ಅವರಿಗೆ ಧೈರ್ಯ ತುಂಬವ, ಸಮಾಧಾನ ಮಾಡುವ ಕಾರ್ಯ ಮಾಡಿದರು.

‘ಆ ಪದ ಮತ್ತೆ ಬಳಸಲ್ಲ’: ಸುದೀಪ್ ಮುಂದೆ ಪ್ರಮಾಣ ಮಾಡಿದ ಮಂಜ
Sudeepa Manja

Updated on: Oct 11, 2026 | 10:41 PM

ಬಿಗ್​​ಬಾಸ್ ಕನ್ನಡ ಮನೆಯಿಂದ ಮಂಜನನ್ನು ನೇರವಾಗಿ ಹೊರಗೆ ಹಾಕಲಾಗಿದೆ. ಕಳೆದ ವಾರ ಮಂಜ ತೋರಿಸಿದ ಆಟಾಟೋಪಕ್ಕೆ ಪ್ರತಿಯಾಗಿ ಬಿಗ್​​ಬಾಸ್ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಮಂಜ, ಕಳೆದ ವಾರ ಯಶಸ್ ಸೇರಿದಂತೆ ಮನೆಯ ಹಲವು ಸ್ಪರ್ಧಿಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಬದಿದ್ದ. ಕೆಟ್ಟದಾಗಿ ವರ್ತಿಸಿದ್ದ, ಕ್ರೂರತನ ಮೆರೆದಿದ್ದ, ನಿಯಮಗಳನ್ನು ಮುರಿದಿದ್ದ ಇದೆಲ್ಲವನ್ನೂ ಪರಿಗಣಿಸಿ ಮಂಜನನ್ನು ಬಿಗ್​​ಬಾಸ್ ಹೊರಗೆ ಹಾಕಿದರು. ಹೀಗೆ ಹೊರ ತಳಲ್ಪಟ್ಟವರನ್ನು ಸುದೀಪ್ ವೇದಿಕೆ ಮೇಲೆ ಮಾತನಾಡಿಸಿರಲಿಲ್ಲ ಆದರೆ ಸುದೀಪ್ ಅವರು ಹೊರಗೆ ಬಂದ ಮಂಜ ಅವರನ್ನು ವೇದಿಕೆಗೆ ಕರೆಸಿ ಮಾತನಾಡಿಸಿದ್ದಲ್ಲದೆ, ಅವರಿಗೆ ಧೈರ್ಯ ತುಂಬವ, ಸಮಾಧಾನ ಮಾಡುವ ಕಾರ್ಯ ಮಾಡಿದರು.

‘ನೀವು ಬಹಳ ಚೆನ್ನಾಗಿ ಆಡುತ್ತಿದ್ದಿರಿ, ಹೊರಗೆ ಸಾಕಷ್ಟು ಅಭಿಮಾನಿಗಳನ್ನು, ಜನಪ್ರೀತಿ ಗಳಿಸಿದ್ದೀರಿ. ನಾನು ಸಹ ಪದೇ ಪದೇ ನಿಮಗೆ ಎಚ್ಚರಿಸುವ ಪ್ರಯತ್ನ ಮಾಡಿದೆ ಆದರೆ ನೀವು ಎಚ್ಚೆತ್ತುಕೊಳ್ಳಲಿಲ್ಲ’ ಎಂದರು ಸುದೀಪ್. ‘ನನ್ನ ಮಾತಿನಿಂದಲೇ ನಾನು ಇಲ್ಲಿಯವರೆಗೆ ಬಂದೆ, ನನ್ನ ಮಾತಿನಿಂದಲೇ ನಾನು ಹೊರಗೆ ಹೋಗುತ್ತಿದ್ದೇನೆ. ನನಗೆ ಇದನ್ನು ನಂಬಲು ಸಹ ಸಾಧ್ಯ ಆಗುತ್ತಿಲ್ಲ. ನಾನು ಬಹಳ ದೊಡ್ಡ ತಪ್ಪು ಮಾಡಿಬಿಟ್ಟೆ. ಹತ್ತು ವರ್ಷಗಳಿಂದ ಕಂಡ ಕನಸು ಬಿಗ್​​ಬಾಸ್, ಅದನ್ನು ನನ್ನ ಸ್ವಂತ ಕೈಯಿಂದ ಹಾಳು ಮಾಡಿಕೊಂಡು ಬಿಟ್ಟೆ’ ಎಂದು ಪಶ್ಚಾತ್ತಾಪ ಪಟ್ಟು ಕಣ್ಣೀರು ಹಾಕಿದರು ಮಂಜ.

ಧೈರ್ಯ ತುಂಬಿದ ಸುದೀಪ್ ಅವರು, ‘ಇರಲಿ, ನೀವು ಚೆನ್ನಾಗಿ ಆಡಿದ್ದೀರ. ಆದರೆ ನಾಲಗೆ ಮೇಲೆ ಹಿಡಿತ ಇರಬೇಕಿತ್ತು ಅಷ್ಟೆ. ಅದನ್ನು ಒಂದು ತಂದುಕೊಳ್ಳಿ, ನಿಮಗೆ ಸಾಕಷ್ಟು ಪ್ರತಿಭೆ ಇದೆ, ಒಳ್ಳೆಯ ಭವಿಷ್ಯ ಇದೆ. ಖಂಡಿತ ನೀವು ಹೊರಗಿನ ಪ್ರಪಂಚದಲ್ಲಿ ಏನಾದರೂ ಸಾಧಿಸುತ್ತೀರಿ. ಬಿಗ್​​ಬಾಸ್ ಗೆದ್ದರಷ್ಟೆ ಸಾಧನೆ ಅಲ್ಲ. ಬಿಗ್​​ಬಾಸ್ ಗೆಲ್ಲದೇ ಹೋದವರು ಸೋತವರೆಂದೂ ಅಲ್ಲ. ನೀವು ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ ಏನಾದರೂ ಸಾಧಿಸುತ್ತೀರ, ನಿಮಗೆ ಶಕ್ತಿ ಇದೆ’ ಎಂದು ಸುದೀಪ್ ಬೆನ್ನುತಟ್ಟಿದರು.

ಇದನ್ನೂ ಓದಿ:ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ

ಬಳಿಕ ಸುದೀಪ್ ಎದುರು ಪ್ರಮಾಣ ಮಾಡಿದ ಮಂಜ, ‘ನಾನು ಯಾವ ಪದಗಳನ್ನು ಬಳಸಿದ ಕಾರಣಕ್ಕೆ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದೆನೋ ಆ ಪದಗಳನ್ನು ನನ್ನ ಜೀವನ ಪರ್ಯಂತ ಇನ್ನು ಮುಂದೆ ಇನ್ಯಾರಿಗೂ ಬಳಸುವುದಿಲ್ಲ. ಆ ಪದಗಳನ್ನು ನನಗೇ ಯಾರಾದರೂ ಬಳಸಿದರೂ ಸಹ ನಾನು ಆ ಪದಗಳನ್ನು ಪ್ರತಿಯಾಗಿ ಬಳಕೆ ಮಾಡುವುದಿಲ್ಲ. ಇದು ನನ್ನ ಪ್ರತಿಜ್ಞೆ’ ಎಂದು ಮಂಜ ಪ್ರತಿಜ್ಞೆ ಮಾಡಿದರು. ಸುದೀಪ್ ಅವರು ಮಂಜನನ್ನು ಆಲಂಗಿಸಿಕೊಂಡು ಸಮಾಧಾನ ಮಾಡಿದ್ದು ಮಾತ್ರವೇ ಅಲ್ಲದೆ, ‘ನಿನ್ನ ಅಣ್ಣನ ಸ್ಥಾನದಲ್ಲಿ ನಾನು ಇರುತ್ತೀನಿ’ ಎಂದು ಭರವಸೆಯನ್ನು ಸಹ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us