AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾನವಿ ಕತ್ತಿನ ಮೇಲೆ ಕಾಲಿಟ್ಟ ಪ್ರಶಾಂತ್; ನಿಜಕ್ಕೂ ತಪ್ಪು ಯಾರದ್ದು?

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವೇಳೆ ಆಟದ ಭರದಲ್ಲಿ ಸ್ಪರ್ಧಿ ಪ್ರಶಾಂತ್ ಅವರು ಗಾನವಿ ಕತ್ತಿನ ಮೇಲೆ ಕಾಲಿಟ್ಟ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಉದ್ದೇಶಪೂರ್ವಕವಲ್ಲದ ಅವಘಡವಾದರೂ, ಸ್ಪರ್ಧಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏನಾಯಿತು ಎಂಬ ಬಗ್ಗೆ ಇಲ್ಲಿದೆ ವಿವರ.

ಗಾನವಿ ಕತ್ತಿನ ಮೇಲೆ ಕಾಲಿಟ್ಟ ಪ್ರಶಾಂತ್; ನಿಜಕ್ಕೂ ತಪ್ಪು ಯಾರದ್ದು?
ಬಿಗ್ ಬಾಸ್ Image Credit source: Colors Kannada
ರಾಜೇಶ್ ದುಗ್ಗುಮನೆ
|

Updated on:Nov 12, 2026 | 7:34 AM

Share

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ರೋಚಕ ಟಾಸ್ಕ್ ವೇಳೆ ಅನಾಹುತ
  • ಗಾನವಿ ಕತ್ತಿನ ಮೇಲೆ ಕಾಲಿಟ್ಟ ಪ್ರಶಾಂತ್
  • ಗೆಲುವಿನ ಹುಚ್ಚಿನಲ್ಲಿ ಮೈಮರೆತ ಸ್ಪರ್ಧಿಗಳು

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ಕಾವು ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ತಾರಕಕ್ಕೇರಿದೆ. ಈ ವಾರದ ಟಾಸ್ಕ್ ವೇಳೆ ಪ್ರಶಾಂತ್ ಮತ್ತು ಗಾನವಿ ನಡುವೆ ದೊಡ್ಡ ಮಟ್ಟದ ಕಿರಿಕ್ ನಡೆದಿದೆ. ಆಟದ ಭರದಲ್ಲಿ ಗಾನವಿ ಅವರ ಕತ್ತಿನ ಮೇಲೆ ಪ್ರಶಾಂತ್ ಕಾಲಿಟ್ಟಿದ್ದು, ಮನೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ಘಟನೆಯ ಬೆನ್ನಲ್ಲೇ ಮನೆಯಲ್ಲಿ ನಿಜಕ್ಕೂ ತಪ್ಪು ಯಾರದ್ದು ಎಂಬ ಚರ್ಚೆ ಶುರುವಾಗಿದೆ.

ಬಿಗ್ ಬಾಸ್ ನೀಡಿದ್ದ ಟಾಸ್ಕ್ ಪ್ರಕಾರ, ಎದುರಾಳಿ ತಂಡದ ನಾಯಕರ ಫೋಟೋಗೆ ಬಣ್ಣ ಬಳಿಯಬೇಕಿತ್ತು. ಯಾವ ತಂಡದ ನಾಯಕರ ಫೋಟೋಗೆ ಹೆಚ್ಚು ಬಣ್ಣ ಬಳಿಯಲಾಗುತ್ತದೆಯೋ ಆ ತಂಡ ಸೋತಂತೆ ಎಂದು ನಿಯಮವಿತ್ತು. ಈ ಆಟದಲ್ಲಿ ಗಾನವಿ ಅವರು ಪ್ರಶಾಂತ್ ಅವರ ವಿರುದ್ಧದ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದರು. ಟಾಸ್ಕ್ ಶುರುವಾಗುತ್ತಿದ್ದಂತೆಯೇ ಎರಡೂ ತಂಡಗಳ ಸದಸ್ಯರು ಫೋಟೋ ರಕ್ಷಿಸಿಕೊಳ್ಳಲು ಮತ್ತು ಎದುರಾಳಿ ಫೋಟೋಗೆ ಬಣ್ಣ ಬಳಿಯಲು ಮುಗಿಬಿದ್ದರು.

ಯಶಸ್ ಅವರ ಫೋಟೋಗೆ ಬಣ್ಣ ಬಳಿಯಲು ಗಾನವಿ ಪ್ರಯತ್ನಿಸುತ್ತಿದ್ದಾಗ ತಾಂಡವ್ ಅದನ್ನು ತಡೆಯಲು ಮುಂದಾದರು. ಇದೇ ವೇಳೆ ಗಾನವಿ ತಂಡದ ಧನುಷ್ ಅವರು ಕೂಡ ಯಶಸ್ ಫೋಟೋಗೆ ಬಣ್ಣ ಬಳಿಯಲು ಬಂದರು. ಈ ವೇಳೆ ಧನುಷ್ ಅವರನ್ನು ತಡೆಯಲು ಪ್ರಶಾಂತ್ ವೇಗವಾಗಿ ಓಡಿಬಂದರು. ಈ ನೂಕುನುಗ್ಗಲಿನ ನಡುವೆ ಆಯತಪ್ಪಿದ ಪ್ರಶಾಂತ್, ಗೊತ್ತಿಲ್ಲದೆ ಕೆಳಗೆ ಬಿದ್ದಿದ್ದ ಗಾನವಿ ಅವರ ಕತ್ತಿನ ಮೇಲೆ ಮಂಡಿ ಊರಿದ್ದಾರೆ.

ಪ್ರಶಾಂತ್ ಅವರ ಮಂಡಿ ಕತ್ತಿನ ಮೇಲೆ ಬೀಳುತ್ತಿದ್ದಂತೆಯೇ ಗಾನವಿ ತೀವ್ರ ನೋವಿನಲ್ಲಿ ಒದ್ದಾಡಿದ್ದಾರೆ. ಈ ಘಟನೆಯಿಂದ ತೀವ್ರ ಬೇಸರಗೊಂಡ ಗಾನವಿ, ಇಂತಹ ಅಪಾಯಕಾರಿ ರೀತಿಯಲ್ಲಿ ಆಟವಾಡಲು ನಾನು ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರು ಹಾಕುತ್ತಾ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಬದಲಾಗಿ ಆಟದ ಭರದಲ್ಲಿ ಗೊತ್ತಿಲ್ಲದೆ ಸಂಭವಿಸಿದ ಅವಘಡ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ

ಬಿಗ್ ಬಾಸ್ ಮನೆಯಲ್ಲಿ ದೈಹಿಕ ಬಲ ಪ್ರದರ್ಶಿಸುವ ಟಾಸ್ಕ್‌ಗಳನ್ನು ನೀಡಿದಾಗ ಇಂತಹ ಅವಘಡಗಳು ಸಂಭವಿಸುವುದು ಹೊಸದೇನಲ್ಲ. ಗೆಲ್ಲಲೇಬೇಕು ಎಂಬ ಛಲದಲ್ಲಿ ಸ್ಪರ್ಧಿಗಳು ಮೈಮರೆತು ಆಡುವಾಗ ಸಣ್ಣಪುಟ್ಟ ಏಟುಗಳಾಗುವುದು ಸಾಮಾನ್ಯ. ಆದರೆ, ಆಟದ ಭರದಲ್ಲಿ ಸಹ ಸ್ಪರ್ಧಿಗಳ ಸುರಕ್ಷತೆಯನ್ನು ಮರೆಯಬಾರದು ಎಂಬುದು ವೀಕ್ಷಕರ ಅಭಿಪ್ರಾಯ. ಈ ಘಟನೆಗೆ ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Thu, 12 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು: ಜೆಡಿಎಸ್​​ ಶಾಸಕ ಆಕ್ರೋಶ
ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು: ಜೆಡಿಎಸ್​​ ಶಾಸಕ ಆಕ್ರೋಶ
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್