
ಬಿಗ್ ಬಾಸ್ ಮನೆಯಲ್ಲಿ ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆಗಿದ್ದಾರೆ. ಈ ವಾರ ಯಾವುದೇ ವೋಟಿಂಗ್ ಲೈನ್ ತೆಗೆದಿರಲಿಲ್ಲ. ಆದಾರೂ ಇಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ಈ ಬಾರಿಯ ಬಿಗ್ ಬಾಸ್ ‘ಎಕ್ಸ್ಪೆಕ್ಟ್ ದಿ ಅನ್ ಎಕ್ಸ್ಪೆಕ್ಟೆಡ್’ ಥೀಮ್ನಲ್ಲಿ ಮೂಡಿ ಬಂದಿದೆ. ಊಹಿಸದ ರೀತಿಯಲ್ಲಿ ಕಳೆದ ವಾರ ರಜತ್ ಹಾಗೂ ಚೈತ್ರಾ ಮನೆಯಿಂದ ಹೊರ ಹೋಗಿದ್ದಾರೆ. ಇವರ ಎಲಿಮಿನೇಷನ್ಗೆ ಕಾರಣ ಏನು ಎಂಬುದನ್ನು ಸುದೀಪ್ ತಿಳಿಸಿದ್ದಾರೆ.
ರಜತ್ ಹಾಗೂ ಚೈತ್ರಾ ಮೊದಲು ಅತಿಥಿಯಾಗಿ ಬಂದರು. ನಂತರ ಅವರನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂದು ಪರಿಗಣಿಸಿ ಬಿಗ್ ಬಾಸ್ ಮನೆಯಲ್ಲೇ ಇಟ್ಟುಕೊಳ್ಳಾಯಿತು. ಅವರು ಸ್ಪರ್ಧಿಗಳಲ್ಲ, ಅತಿಥಿಗಳು ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇತ್ತು. ಆದರೆ, ಯಾರೊಬ್ಬರಿಂದಲೂ ಸ್ಪಷ್ಟನೆ ಸಿಕ್ಕಿರಲಿಲ್ಲ. ಸುದೀಪ್ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಜತ್ ಹಾಗೂ ಚೈತ್ರಾ ಆಟವನ್ನು ಸುದೀಪ್ ಹೊಗಳಿದ್ದಾರೆ.
‘ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಒಂದು ಸ್ಫೂರ್ತಿ ಬರಲಿ ಎಂಬ ಕಾರಣಕ್ಕೆ ನಾವು ಇಬ್ಬರನ್ನು ವೈಲ್ಡ್ ಕಾರ್ಡ್ ಆಗಿ ತಂದೆವು. ಆದರೆ, ಅವರು ಅತಿಥಿಗಳು ಅಷ್ಟೇ. ಮನೆಯಲ್ಲಿ ಇದ್ದಷ್ಟೂ ದಿನ ಈ ವಿಷಯವನ್ನು ಅವರು ಹೇಳಿಲ್ಲ. ಅತಿಥಿ ಎಂಬುದು ಅವರಿಗೆ ಗೊತ್ತಿದ್ದ ಕಾರಣ ಎಲ್ಲರ ಜೊತೆ ಒಳ್ಳೆಯ ರೀತಿಯಲ್ಲಿ ಇರಲು ಪ್ರಯತ್ನಿಸಬಹುದಿತ್ತು. ಆದರೆ, ಅವರು ಆ ರೀತಿ ಮಾಡಲೇ ಇಲ್ಲ. ಚೆನ್ನಾಗಿ ಆಡಿದರು’ ಎಂದು ಸುದೀಪ್ ಮೆಚ್ಚುಗೆ ಸೂಚಿಸಿದರು. ಅವರ ಬಂದ ಕೆಲಸ ಮುಗಿದಿದ್ದರಿಂದ ಹೊರಕ್ಕೆ ಕರೆಸಲಾಯಿತು.
ಇದನ್ನೂ ಓದಿ: ಬಿಗ್ಬಾಸ್ ಕನ್ನಡ 12: ವೋಟಿಂಗ್ ಇಲ್ಲದೆ ಇಬ್ಬರು ಹೊರಕ್ಕೆ: ಯಾರದು?
ಈ ರೀತಿಯ ಅವಕಾಶ ಸಿಗೋದು ತುಂಬಾನೇ ಅಪರೂಪ. ಚೈತ್ರಾ ಹಾಗೂ ರಜತ್ ಇಂತಹ ಅವಕಾಶ ಪಡೆದು ಖುಷಿಯಾಗಿದ್ದಾರೆ. ಅವರು ತಮ್ಮ ನೂರರಷ್ಟು ಎಫರ್ಟ್ನ ಹಾಕಿದ್ದಾರೆ. ರಜತ್ ಅವರು ಸಾಕಷ್ಟು ಜನರ ಬಳಿ ಕಿತ್ತಾಟ ಮಾಡಿಕೊಂಡಿದ್ದಾರೆ. ಚೈತ್ರಾ ಇರುವಷ್ಟೇ ದಿನದಲ್ಲಿ ಕಳಪೆ, ಉತ್ತಮ ಪಡೆದಿದ್ದೂ ಅಲ್ಲದೆ ಕ್ಯಾಪ್ಟನ್ ಕೂಡ ಆಗಿದ್ದಾರೆ. ಇದು ಅವರು ಮಾಡಿದ ಅಪರೂಪದ ಸಾಧನೆ ಎಂದರೂ ತಪ್ಪಾಗಲಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:14 am, Mon, 22 December 25