ಮನೆಗೆ ಬಂದು ಸ್ಪರ್ಧಿಗಳ ಭವಿಷ್ಯ ನುಡಿದ ಗುರೂಜಿ, ಪ್ರತಾಪ್​ಗೆ ಹೇಳಿದ್ದೇನು?

|

Updated on: Jan 02, 2024 | 11:26 PM

Bigg Boss: ಹೊಸ ವರ್ಷದಂದು ಬಿಗ್​ಬಾಸ್ ಮನೆಗೆ ಬಂದಿದ್ದ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಮನೆಯ ಸದಸ್ಯರ ಭವಿಷ್ಯ ನುಡಿದರು. ಯಾರಿಗೆ ಏನು ಹೇಳಿದರು? ಯಾರ ಭವಿಷ್ಯ ಹೇಗಿದೆ?

ಮನೆಗೆ ಬಂದು ಸ್ಪರ್ಧಿಗಳ ಭವಿಷ್ಯ ನುಡಿದ ಗುರೂಜಿ, ಪ್ರತಾಪ್​ಗೆ ಹೇಳಿದ್ದೇನು?
ಡ್ರೋನ್ ಪ್ರತಾಪ್
Follow us on

ಬಿಗ್​ಬಾಸ್ (BiggBOss) ಮನೆಯಲ್ಲಿ ಹೊಸ ವರ್ಷವನ್ನು ಕೆಲವರು ಸಂಭ್ರಮದಿಂದ ಆಚರಿಸಿದ್ದಾರೆ. ಇನ್ನು ಕೆಲವರಿಗೆ ಸಂಭ್ರಮದಿಂದ ವಂಚಿತರಾಗಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಆಯೋಜಿಸಲಾಗಿತ್ತು. ಅದಕ್ಕೆ ಆರು ಮಂದಿಯನ್ನು ಕ್ಯಾಪ್ಟನ್ ಆರಿಸಬೇಕಿತ್ತು. ತನಿಷಾ, ತನ್ನನ್ನೂ ಸೇರಿದಂತೆ ಸಂಗೀತಾ, ಕಾರ್ತಿಕ್, ವಿನಯ್, ಪ್ರತಾಪ್, ತುಕಾಲಿ ಅವರುಗಳನ್ನು ಆರಿಸಿದರು. ಅವರು ಮಾತ್ರವೇ ಪಾರ್ಟಿ ಮಾಡಿದರು. ಬಳಿಕ ಹೊಸ ವರ್ಷದಂದು ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅತಿಥಿಯಾಗಿ ಬಂದು ಸ್ಪರ್ಧಿಗಳ ಭವಿಷ್ಯ ನುಡಿದರು.

ಮನೆಗೆ ಬರುತ್ತಿದ್ದಂತೆ ವಿನಯ್​ಗೆ ನಿಮ್ಮ ಕಿವಿಯಲ್ಲಿ ಅದೃಷ್ಟದ ಮಚ್ಚೆಗಳಿವೆ ಎಂದರು. ಬಳಿಕ ತುಕಾಲಿಗೆ ನಿಮಗೆ ಗಾಯವಾಗಿದ್ದು ಅದರ ಮಚ್ಚೆ ಜೀವನ ಪರ್ಯಂತ ಇರಲಿವೆ ಎಂದರು. ಅದಾದ ಬಳಿಕ ಮನೆಯಲ್ಲಿನ ದೇವಿ ವಿಗ್ರಹಕ್ಕೆ ಪೂಜೆ ಮಾಡಿದರು. ಮನೆಯ ಹೆಣ್ಣು ಮಕ್ಕಳಿಂದ ಸೀರೆಯನ್ನು ದೇವಿಗೆ ಸೀರೆ ಅರ್ಪಿಸಿದರು. ಕೆಲ ಹಿತವಚನಗಳನ್ನು ಸ್ಪರ್ಧಿಗಳಿಗೆ ಗುರೂಜಿ ಹೇಳಿದರು. ಗುರೂಜಿಯ ಮಾತು ಕೇಳಿ ವರ್ತೂರು ಸಂತೋಷ್ ಕಣ್ಣೀರು ಹಾಕಿದರು. ಬಳಿಕ ಸ್ಪರ್ಧಿಗಳನ್ನು ಒಬ್ಬೊಬ್ಬರನ್ನಾಗಿ ಕರೆದು ಎಲ್ಲರ ಭವಿಷ್ಯ ಹೇಳಿದರು.

ಮೊದಲಿಗೆ ಬಂದ ಸಂಗೀತಾಗೆ, ನಿಮ್ಮ ವೃತ್ತಿ ಜೀವನ ಒಮ್ಮೆ ಮೇಲೆ ಒಮ್ಮೆ ಕೆಳಗೆ ಆಗುತ್ತಿರುತ್ತದೆ ಎಂದರು. 2025ರಲ್ಲಿ ನಿಮ್ಮ ಮದುವೆ ಆಗಿಯೇ ತೀರುತ್ತದೆ. ನೀವು ಮದುವೆ ಆದ ಬಳಿಕ ಬಹಳ ಚೆನ್ನಾಗಿರಲಿದ್ದೀರಿ ಎಂದರು. ಸಂಗೀತಾಗೆ ಹಿಂದೊಮ್ಮೆ ನಂಬಿಕೆ ದ್ರೋಹ ಆಗಿದೆಯೆಂದು ಅದು ಬಹಳ ಮನಸ್ಸಿನಲ್ಲಿ ಕಾಡುತ್ತಿದೆ ಎಂದರು. ಯಾವುದನ್ನು ಬೇಡ ಎಂದುಕೊಳ್ಳುತ್ತೀರೋ ಅದೇ ಆಗುತ್ತದೆ ಎಂದರು ಸಹ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಹಾವು-ಏಣಿ ಆಟ ಆಡಿಸಿದ ಸುದೀಪ್, ಯಾರು ಹಾವು-ಯಾರು ಏಣಿ?

ವರ್ತೂರು ಸಂತೋಷ್​ಗೆ, ನಿಮಗೆ ಈ ವರ್ಷದ ಆರು ತಿಂಗಳು ಸಮಸ್ಯೆ ಇದೆ. ಅದಾದ ಬಳಿಕ ಎಲ್ಲವೂ ಸರಾಗವಾಗುತ್ತದೆ. ನೀವು ಕಾಲಿನಲ್ಲಿ ಟ್ಯಾಟೂ ಹಾಕಿಕೊಂಡಿದ್ದೀರಿ, ಅದನ್ನು ಹಾಕಿಕೊಂಡಾಗಿನಿಂದಲೂ ನಿಮಗೆ ಸಮಸ್ಯೆ ಶುರುವಾಗಿದೆ. ಅದನ್ನು ಮೊದಲು ತೆಗೆಸಿ ಎಂದರು. ನಿಮ್ಮ ಪೂರ್ವಿಕರ ಪುಣ್ಯದಿಂದ ನೀವು ಚೆನ್ನಾಗಿದ್ದೀರಿ, ನೀವು ನಿಮ್ಮದೇ ಆದ ಗುರುತು ಸಂಪಾದನೆ ಮಾಡಿಕೊಳ್ಳಿ. ಮೊದಲ ಕೆಲ ತಿಂಗಳು ಸಮಸ್ಯೆಯ ಬಳಿಕ ಆ ನಂತರ ಎಲ್ಲವೂ ಚೆನ್ನಾಗಿ ಇರಲಿದೆ ಎಂದರು.

ನಮ್ರತಾ ಅವರನ್ನು ಉದ್ದೇಶಿಸಿ, ನೀವು ಅದೃಷ್ಟವಂತರು. ನಿಮ್ಮ ಅದೃಷ್ಟದ ಮಚ್ಚೆಗಳು ಬಲಭಾಗದಲ್ಲಿವೆ ಎಂದರು. ಹಿಂದೆ ಆದ ಬೇಸರದಿಂದ ಹೊರಗೆ ಬರಬೇಕಿದೆ. ನಿಮ್ಮ ಬಾಳೊಳಗೆ ಒಬ್ಬರ ಪ್ರವೇಶ ಆಗುತ್ತದೆ ಅದರಿಂದ ಎಲ್ಲವೂ ಸರಿ ಹೋಗಲಿದೆ. ವೃತ್ತಿಯಲ್ಲಿಯೂ ಏಳ್ಗೆ ಕಾಣಲಿದ್ದೀರಿ ಎಂದರು.

ವಿನಯ್ ಅನ್ನು ಉದ್ದೇಶಿಸಿ, ನಿಮಗೆ ಮಹಿಳೆಯಿಂದಲೇ ಸಮಸ್ಯೆ, ಮಹಿಳೆಯಿಂದಲೇ ಏಳ್ಗೆ, ಪತ್ನಿಯ ಮಾತು ಕೇಳಿ, ಅವರನ್ನು ಖುಷಿಯಾಗಿರಿಸಿ ನೀವು ಖುಷಿಯಾಗಿರುತ್ತೀರಿ. ನಿಮ್ಮ ವೃತ್ತಿ ಜೀವನದಲ್ಲಿ ನೀವು ಅಂದುಕೊಂಡಿರದ ರೀತಿಯಲ್ಲಿ ತಿರುವು ಬರಲಿದೆ. ವೃತ್ತಿ ಬದುಕಿನಲ್ಲಿ ಬಹಳ ಎತ್ತರಕ್ಕೆ ಏರಲಿದ್ದೀರಿ. ನಿಮಗೆ ಅದೃಷ್ಟ ಚೆನ್ನಾಗಿದೆ ಎಂದರು. ಕಾರ್ತಿಕ್​ಗೆ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬೆನ್ನು ನೋವಿನ ಸಮಸ್ಯೆ ಇದೆ. ಆಸೆ ಸಾಕಷ್ಟಿದೆ, ಸಂಪಾದನೆಯೂ ಇದೆ ಆದರೆ ಖರ್ಚು ಸಹ ಆಗಿ ಬಿಡುತ್ತದೆ. ಬಂದ ಹಣ ನಿಮ್ಮ ಬಳಿ ನಿಲ್ಲುವುದಿಲ್ಲ. ಸಂಕಲ್ಪ ಮಾಡಿ ನಿಲ್ಲಿ ಎಂದು ಸಲಹೆ ನೀಡಿದರು.

ಬಳಿಕ ಬಂದ ಡ್ರೋನ್ ಪ್ರತಾಪ್​ಗೆ, ‘‘ನನಗೆ ಹೇಳಲು ಬೇಸರವಾಗುತ್ತದೆ. ನೀನು ಕುಟುಂಬಕ್ಕೆ ಹತ್ತಿರ ಹೋದರೆ ನಿನಗೆ ಸಮಸ್ಯೆ ಆಗುತ್ತದೆ. ಈಗ ಇರುವಂತೆ ಕುಟುಂಬದಿಂದ ದೂರ ಉಳಿಯುವುದೇ ಒಳಿತು. ನಿನಗೆ ಶಕ್ತಿ ಸಾಮರ್ಥ್ಯ ಇದೆ, ಹಾಗೆಯೇ ನೋವುಗಳೂ ಸಹ ಇವೆ. ರಾತ್ರಿ ನಿದ್ದೆ ಬರುವುದಿಲ್ಲ. ನಿನಗೆ ಇಲ್ಲಿಗಿಂತಲೂ ಹೊರದೇಶದಲ್ಲಿ ಏಳ್ಗೆ ಇದೆ. ಪ್ರಯತ್ನ ಮಾಡು, ಪ್ರಯತ್ನ ಮಾಡುವುದನ್ನು ನಿಲ್ಲಿಸಬೇಡ’’ ಎಂದು ಸಲಹೆ ನೀಡಿದರು. ಗುರುಗಳ ಮಾತು ಕೇಳಿ ಡ್ರೋನ್ ಪ್ರತಾಪ್ ಅತ್ತು ಬಿಟ್ಟರು. ಮೈಖಲ್, ತನಿಷಾ ಹಾಗೂ ತುಕಾಲಿಗೆ ಏನು ಭವಿಷ್ಯ ನುಡಿದರು ಎಂಬುದನ್ನು ತೋರಿಸಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ