ಬಿಗ್ ಬಾಸ್ ಮನೆಯಲ್ಲಿ ಅದ್ದೂರಿ ಪಾರ್ಟಿ; ಅವಕಾಶ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ ನಮ್ರತಾ

ಹೊಸ ವರ್ಷದ ಸಂದರ್ಭದಲ್ಲಿ ಪಾರ್ಟಿ ಇದೆ ಎಂದು ಬಿಗ್ ಬಾಸ್ ಘೋಷಿಸಿದರು. ‘ಈ ಪಾರ್ಟಿಯಲ್ಲಿ ಕೇವಲ ಆರು ಸದಸ್ಯರು ಮಾತ್ರ ಭಾಗವಹಿಸಬೇಕು. ಮೂರು ಸದಸ್ಯರು ಹೊರಗೆ ಇರಬೇಕು’ ಎಂದು ಬಿಗ್ ಬಾಸ್ ಆದೇಶ ನೀಡಿದರು. ಇದರಿಂದ ನಮ್ರತಾ ಹೊರಗೆ ಉಳಿದರು.

ಬಿಗ್ ಬಾಸ್ ಮನೆಯಲ್ಲಿ ಅದ್ದೂರಿ ಪಾರ್ಟಿ; ಅವಕಾಶ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ ನಮ್ರತಾ
ನಮ್ರತಾ
Follow us
ರಾಜೇಶ್ ದುಗ್ಗುಮನೆ
|

Updated on: Jan 03, 2024 | 6:55 AM

ಬಿಗ್ ಬಾಸ್​ನ 10ನೇ ಸೀಸನ್ ಕೊನೆಯ ಹಂತಕ್ಕೆ ಬಂದಿದೆ. ಇನ್ನು ನಾಲ್ಕು ವಾರಗಳಲ್ಲಿ ಬಿಗ್ ಬಾಸ್ (Bigg Boss) ಪೂರ್ಣಗೊಳ್ಳಲಿದೆ. ಬಿಗ್ ಬಾಸ್ ಮನೆಯಲ್ಲಿ ಪಾರ್ಟಿ ಒಂದನ್ನು ಆಯೋಜನೆ ಮಾಡಲಾಗಿತ್ತು. ಜೊತೆಗೆ ಷರತ್ತು ಕೂಡ ಹಾಕಲಾಗಿತ್ತು. ಈ ಪಾರ್ಟಿಯಲ್ಲಿ ನಮ್ರತಾ ಗೌಡ ಅವರಿಗೆ ಭಾಗವಹಿಸೋಕೆ ಅವಕಾಶ ಸಿಕ್ಕಿಲ್ಲ. ಈ ಕಾರಣಕ್ಕೆ ಅವರು ಕ್ಯಾಪ್ಟನ್ ತನಿಷಾ ಅವರನ್ನು ದೂಷಿಸಿ ಕಣ್ಣೀರು ಹಾಕಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ಪಾರ್ಟಿ ಇದೆ ಎಂದು ಬಿಗ್ ಬಾಸ್ ಘೋಷಿಸಿದರು. ‘ಈ ಪಾರ್ಟಿಯಲ್ಲಿ ಕೇವಲ ಆರು ಸದಸ್ಯರು ಮಾತ್ರ ಭಾಗವಹಿಸಬೇಕು. ಮೂರು ಸದಸ್ಯರು ಹೊರಗೆ ಇರಬೇಕು’ ಎಂದು ಬಿಗ್ ಬಾಸ್ ಆದೇಶ ನೀಡಿದರು. ಈ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶವನ್ನು ಕ್ಯಾಪ್ಟನ್ ತನಿಷಾಗೆ ನೀಡಲಾಯಿತು. ತನಿಷಾ ಅವರು ನಮ್ರತಾ, ಮೈಕಲ್ ಹಾಗೂ ವರ್ತೂರು ಸಂತೋಷ್ ಅವರನ್ನು ಹೊರಗಿಟ್ಟರು.

ಈ ನಿರ್ಧಾರದಿಂದ ನಮ್ರತಾ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ‘ಇದಕ್ಕೆಲ್ಲ ಯಾರು ಅಳುತ್ತಾರೆ’ ಎನ್ನುತ್ತಲೇ ವಾಶ್​ರೂಂಗೆ ಹೋಗಿ ಕಣ್ಣೀರು ಹಾಕಿದ್ದಾರೆ. ವಾಶ್​ರೂಂನಿಂದ ಮರಳಿದ ಬಳಿಕ ಅವರು ತನಿಷಾ ಜೊತೆ ಫನ್ ಆಗಿ ಜಗಳ ಮಾಡಿದ್ದಾರೆ. ‘ನಾನು ಖುಷಿಯಿಂದ ಇದೀನಿ ಎಂದು ಹೇಗೆ ಅಂದುಕೊಂಡೆ? ಹತ್ತಿರ ಬರಬೇಡ. ಬಂದರೆ ಹೊಡಯುತ್ತೇನೆ’ ಎಂದು ಹೇಳಿದರು ನಮ್ರತಾ. ‘ಇದಕ್ಕೆಲ್ಲ ಅಳಬಾರದು’ ಎಂದು ತನಿಷಾ ಧೈರ್ಯ ತುಂಬಿದರು.

ಇದನ್ನೂ ಓದಿ: ವಿನ್ನರ್​ಗೆ ಸಿಗೋದು 50 ಲಕ್ಷ ಅಲ್ಲ, 25 ಲಕ್ಷ ರೂಪಾಯಿ; ಶಿಕ್ಷೆ ಕೊಟ್ಟ ಬಿಗ್ ಬಾಸ್

ಈ ಪಾರ್ಟಿಯಲ್ಲಿ ತಿನ್ನಲು ಬಗೆಬಗೆಯ ತಿಂಡಿಗಳು ಇದ್ದವು. ಡ್ಯಾನ್ಸ್ ಮಾಡಲು ಸಾಂಗ್ ಹಾಕಲಾಯಿತು. ಸಂಗೀತಾ, ಪ್ರತಾಪ್, ತನಿಷಾ, ಕಾರ್ತಿಕ್, ತುಕಾಲಿ ಸಂತೋಷ್, ವಿನಯ್ ಅವರು ಇದನ್ನು ಎಂಜಾಯ್ ಮಾಡಿದರು. ‘ಎಣ್ಣೆ ಇಲ್ಲದ ಪಾರ್ಟಿಗೆ ಹೋದರೆಷ್ಟು, ಬಿಟ್ಟರೆಷ್ಟು’ ಎಂದರು ಮೈಕಲ್ ಅಜಯ್. ಜನವರಿ 2ರಂದು ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೋಡೋ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ