‘ಈ ವರ್ಷ ನಿಮಗೆ ದೊಡ್ಡ ರಾಜಯೋಗ ಇದೆ’; ವಿನಯ್ಗೆ ಹೇಳಿದ ಭವಿಷ್ಯದ ಅರ್ಥವೇನು?
ವಿನಯ್ ಜೊತೆ ಹಲವರು ಸ್ಪರ್ಧೆಯಲ್ಲಿದ್ದಾರೆ. ಈ ಮಧ್ಯೆ ವಿನಯ್ಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರಿಂದ ಸ್ಫೂರ್ತಿದಾಯಕ ಮಾತು ಸಿಕ್ಕಿದೆ.
ವಿನಯ್ ಗೌಡ ಅವರು ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಈಶ್ವರನ ಪಾತ್ರ ಮಾಡಿ ಅವರು ಗಮನ ಸೆಳೆದರು. ಅವರು ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಅವರಿಗೆ ಈ ವರ್ಷ ರಾಜಯೋಗ ಇದೆಯಂತೆ. ಬಿಗ್ ಬಾಸ್ ಮನೆಗೆ ಬಂದ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ವಿನಯ್ನ (Vinay Gowda) ನೋಡಿ ಈ ರೀತಿಯ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ವಿನಯ್ ಗೌಡ ಅವರು ಬಿಗ್ ಬಾಸ್ ಗೆಲ್ಲಬೇಕು ಎಂದು ಕನಸು ಕಾಣುತ್ತಾ ಬರುತ್ತಿದ್ದಾರೆ. ಅವರು ಆರಂಭದಲ್ಲಿ ಆನೆ ಎನಿಸಿಕೊಂಡಿದ್ದರು. ಫಿನಾಲೆಯಲ್ಲಿ ಸುದೀಪ್ ಪಕ್ಕ ತಾವು ನಿಲ್ಲಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಆಟ ಬದಲಾಗಿದೆ. ವಿನಯ್ ಜೊತೆ ಹಲವರು ಸ್ಪರ್ಧೆಯಲ್ಲಿದ್ದಾರೆ. ಈ ಮಧ್ಯೆ ವಿನಯ್ಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರಿಂದ ಸ್ಫೂರ್ತಿದಾಯಕ ಮಾತು ಸಿಕ್ಕಿದೆ.
‘ನಿಮಗೆ ಶುಕ್ರ ದೆಸೆ ಇದೆ. ನಿಮ್ಮ ಜೀವನದಲ್ಲಿ ಸುಖ, ಸೌಕರ್ಯ ಪ್ರಾಪ್ತಿ ಆಗೋದು ಪತ್ನಿಯಿಂದ ಮಾತ್ರ. ನೋವು ಹಾಗೂ ಕಷ್ಟ ಹೆಣ್ಣಿನಿಂದನೇ ಅನುಭವಿಸಿರುತ್ತೀರಿ. ಹೆಂಡತಿ ಬಿಗಿ ಹಿಡಿತದಲ್ಲಿ ನಿಮ್ಮ ಬದುಕು ಸರಾಗವಾಗಿ ನಡೆಯುತ್ತಿದೆ. ಆ ಹಿಡಿತ ಕೊಂಚ ತಪ್ಪಿದರೂ ಬದುಕು ಅಲ್ಲೋಲಕಲ್ಲೋಲ. ಆ ಬಗ್ಗೆ ಜಾಗೃತಿ ಇರಲಿ. ನೀವು ಅಲಂಕಾರ ಮಾಡೋದು ಮಾತ್ರ ಅಲ್ಲ, ನಿಮ್ಮ ಜೊತೆ ಇರುವವರೂ ಅಲಂಕಾರ ಮಾಡಿಕೊಳ್ಳಬೇಕು ಎನ್ನುವ ಆಸೆ ನಿಮ್ಮದು’ ಎಂದಿದ್ದಾರೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ.
ಇದನ್ನೂ ಓದಿ: ವಿನ್ನರ್ಗೆ ಸಿಗೋದು 50 ಲಕ್ಷ ಅಲ್ಲ, 25 ಲಕ್ಷ ರೂಪಾಯಿ; ಶಿಕ್ಷೆ ಕೊಟ್ಟ ಬಿಗ್ ಬಾಸ್
‘ನಿಮ್ಮ ಕಿವಿಯ ಎರಡೂ ಕಡೆಯಲ್ಲಿ ಅದೃಷ್ಟದ ಮಚ್ಚೆ ಇದೆ. 2024ರಲ್ಲಿ ದೊಡ್ಡ ರಾಜಯೋಗ ಇದೆ. ಅದು ಬದಲಾವಣೆಯ ಯೋಗ. ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದಾಗುತ್ತದೆ. ಎಲ್ಲವೂ ಶುಭದಾಯಕವಾಗಿದೆ’ ಎಂದರು ಗುರೂಜಿ. ಇದನ್ನು ಕೇಳಿ ವಿನಯ್ ಹಾಗೂ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ. ಈ ಬಾರಿ ಬಿಗ್ ಬಾಸ್ ಗೆಲ್ಲೋದು ವಿನಯ್ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ