ತುಕಾಲಿ ಸಂತು ಮೇಲೆ ಪ್ರೀತಿ ಶುರುವಾಗಿರುವುದು ಯಾರಿಗೆ?

Bigg Boss: ಬಿಗ್​ಬಾಸ್ ಮನೆಯಲ್ಲಿ ಮತ್ತೊಂದು ಲವ್ ಸ್ಟೋರಿ ಶುರುವಾಗುವಂತಿದೆ. ಮದುವೆಯಾಗಿರುವ ತುಕಾಲಿಗೆ ಆಫರ್ ಒಂದು ದೊರೆತಿದೆ.

ತುಕಾಲಿ ಸಂತು ಮೇಲೆ ಪ್ರೀತಿ ಶುರುವಾಗಿರುವುದು ಯಾರಿಗೆ?
Follow us
ಮಂಜುನಾಥ ಸಿ.
|

Updated on: Jan 03, 2024 | 11:35 PM

ಬಿಗ್​ಬಾಸ್ (BiggBoss)​ ಮನೆಯಲ್ಲಿ ಪ್ರೀತಿ-ಪ್ರೇಮದ ಮಾತುಗಳು ಸಾಮಾನ್ಯ. ಕೆಲವರಂತೂ ಬಿಗ್​ಬಾಸ್ ಮನೆಯಲ್ಲಿ ಪ್ರೀತಿಸಿ ಹೊರಬಂದು ವಿವಾಹವೂ ಆಗಿದ್ದಾರೆ. ನಿವೇದಿತಾ-ಚಂದನ್ ಶೆಟ್ಟಿ, ದಿವ್ಯಾ ಉರುಡುಗ-ಅರವಿಂದ್ ಇದಕ್ಕೆ ಉದಾಹರಣೆ. ಈ ಬಾರಿಯೂ ಸಹ ಬಿಗ್​ಬಾಸ್​ ಮನೆಯಲ್ಲಿ ಮೂರು ಲವ್ ಸ್ಟೋರಿಗಳು ಶುರುವಾಗಿದ್ದವು. ಆದರೆ ಮೂರೂ ಲವ್​ ಸ್ಟೋರಿಗಳು ಅರ್ಧದಲ್ಲೇ ಮುಗಿದು ಸಹ ಹೋಗಿವೆ. ಆದರೆ ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಮತ್ತೆ ಪ್ರೀತಿ ಮಾತು ಶುರುವಾಗಿದೆ. ಅದು ನಮ್ರತಾ ಹಾಗೂ ತುಕಾಲಿ ಸಂತು ನಡುವೆ!

ನಮ್ರತಾಗೆ ಮನೆಯ ಎಲ್ಲ ಸದಸ್ಯರೊಟ್ಟಿಗೆ ಸಲುಗೆ ಇದೆ. ಎಲ್ಲರೊಟ್ಟಿಗೆ ಚೆನ್ನಾಗಿ ಬೆರೆತು, ನಗುತ್ತಾ, ನಗಿಸುತ್ತಾ ಮನೆಯಲ್ಲಿದ್ದಾರೆ. ಬುಧವಾರದ ಎಪಿಸೋಡ್​ನಲ್ಲಿ ತುಕಾಲಿ ಸಂತು, ಸ್ನಾನಕ್ಕೆ ಹೋಗುವ ಮುನ್ನ ಶರ್ಟ್ ಬಿಚ್ಚಿ, ಕನ್ನಡಿ ಮುಂದೆ ನಿಂತು, ‘ಆಹಾ ನಾನು ಎಷ್ಟೋಂದು ಸುಂದರವಾಗಿದ್ದೀನಿ, ನನ್ನ ಸೌಂದರ್ಯ ನೋಡಿದರೆ ನನ್ನ ಮೇಲೆ ನನಗೇ ಲವ್ ಆಗುತ್ತೆ, ಎನ್ನುತ್ತಾ ತಮಗೆ ತಾವೇ ಮುತ್ತುಕೊಟ್ಟುಕೊಂಡರು.

ಇದನ್ನು ನೋಡಿದ ನಮ್ರತಾ, ‘ತುಕಾಲಿ ನೀವು ಹೀಗೆಯೇ ಇದ್ದರೆ ನಿಮ್ಮ ಮೇಲೆ ನನಗೆ ಲವ್ ಆಗಿಬಿಡುತ್ತದೆ’ ಎಂದರು. ನಮ್ರತಾರ ಈ ಮಾತಿನಿಂದ ಖುಷಿಯಾದ ತುಕಾಲಿ ಸಂತು, ಮನೆಯೆಲ್ಲ ಓಡಾಡಿ ಖುಷಿ ಪಟ್ಟರು, ದೂರದಲ್ಲಿ ನಿಂತಿದ್ದ ಮನೆಯ ‘ಪ್ಲೇ ಬಾಯ್’ ಕಾರ್ತಿಕ್ ಅನ್ನು ಕರೆದು, ‘ಲೋ ಗ್ಯಾಸ್ಟ್ರಿಕ್ (ಕಾರ್ತಿಕ್) ನಮ್ರತಾಗೆ ನನ್ನ ಮೇಲೆ ಲವ್ ಆಗಿದೆಯಂತೆ’ ಎಂದು ಕೂಗಿ ಹೇಳಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೇ? ಚರ್ಚೆ ಹುಟ್ಟುಹಾಕಿದ ಸಂಗೀತಾ

ಅದಾದ ಕೆಲ ಹೊತ್ತಿನ ಬಳಿಕ, ಕಾರ್ತಿಕ್, ನಮ್ರತಾ ಬಳಿ ಫ್ಲರ್ಟ್ ಮಾಡುತ್ತಿದ್ದರು, ಅವರನ್ನು ‘ಪಠಾಯಿ’ಸುವ ಶೈಲಿಯಲ್ಲಿ ಮಾತನಾಡುತ್ತಿದ್ದರು. ಆಗ ನಮ್ರತಾ, ‘ಇಷ್ಟು ದಿನ ನೀವು ನನ್ನಿಂದ ದೂರ ಇದ್ದಿರಿ, ಈ ರೀತಿ ಫ್ಲರ್ಟ್ ಮಾಡುವ ಪ್ರಯತ್ನ ಮಾಡಿರಲಿಲ್ಲ, ಈಕೇಗೆ’ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಕಾರ್ತಿಕ್, ‘ಸ್ನೇಹಿತ್ ಇದ್ದನಲ್ಲ ಅದಕ್ಕೆ ಬರುತ್ತಿರಲಿಲ್ಲ, ನಾನು ಬಂದಾಗೆಲ್ಲ ಅವನು ಮಧ್ಯಕ್ಕೆ ಬಂದು ಬಿಡುತ್ತಿದ್ದ’ ಎಂದರು. ಅಲ್ಲಿಯೇ ಇದ್ದ ತನಿಷಾ ಸಹ, ‘ಜೊತೆಗೆ ಡ್ಯಾನ್ಸ್ ಮಾಡಲು ಸಹ ಬಿಡುತ್ತಿರಲಿಲ್ಲ, ಮಧ್ಯ ಬಂದು ಬಿಡುತ್ತಿದ್ದ’ ಎಂದರು.

ಅಂದಹಾಗೆ ಬಿಗ್​ಬಾಸ್ ಮನೆಯಲ್ಲಿ ಆರಂಭದಲ್ಲಿ ಕಾರ್ತಿಕ್ ಹಾಗೂ ಸಂಗೀತಾ ನಡುವೆ ಬಹಳ ಆತ್ಮೀಯತೆ ಇತ್ತು. ಇಬ್ಬರೂ ಸದಾ ಒಟ್ಟಿಗೆ ಇರುತ್ತಿದ್ದರು. ಆದರೆ ಬರ-ಬರುತ್ತಾ ಸಂಗೀತಾ ಹಾಗೂ ಕಾರ್ತಿಕ್ ಜಗಳ ಮಾಡಿಕೊಂಡು ದೂರಾದರು. ಸಂಗೀತಾರ ಅಮ್ಮ ಸಹ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಇದ್ದ ಆತ್ಮೀಯತೆಯನ್ನು ಪ್ರೀತಿಯೇನೋ ಎಂಬ ಅನುಮಾನ ವ್ಯಕ್ತಪಡಿಸಿದರು.

ನಮ್ರತಾ ಹಾಗೂ ಸ್ನೇಹಿತ್ ನಡುವೆ ಸಹ ವಿಶೇಷ ಬಂಧ ಇತ್ತು. ಸ್ನೇಹಿತ್ ಹಲವು ಬಾರಿ ನಮ್ರತಾ ಬಳಿ ಪ್ರೀತಿ ವಿಷಯ ಹೇಳಿಕೊಂಡರು. ನಮ್ರತಾ ಸಹ ‘ಬಿಗ್​ಬಾಸ್ ಮನೆಯ ಹೊರಗೆ ಆಗಿದ್ದಿದ್ದರೆ ಎಸ್ ಅಂದುಬಿಡುತ್ತಿದ್ದೆ’ ಎಂದು ಸಹ ಹೇಳಿದರು. ಆದರೆ ಸ್ನೇಹಿತ್​ರ ಆಟ ಕೆಲವೇ ವಾರಗಳಿಗೆ ಮುಗಿದು ಅವರು ಮನೆಯಿಂದ ಹೊರಗೆ ಹೋದರು. ನಮ್ರತಾ ಈಗಲೂ ಆಡುತ್ತಿದ್ದಾರೆ.

ಇನ್ನು ಮೈಖಲ್ ಹಾಗೂ ಇಶಾನಿ ನಡುವೆಯೂ ಒಂದು ಲವ್ ಸ್ಟೋರಿ ಪ್ರಾರಂಭವಾಗಿತ್ತು. ಇಬ್ಬರೂ ಪರಸ್ಪರ ತಾವು ಬಾಯ್​ಫ್ರೆಂಡ್-ಗರ್ಲ್​ಫ್ರೆಂಡ್ ಎಂದು ಘೋಷಣೆ ಮಾಡಿಕೊಂಡರು. ಪರಸ್ಪರ ಅಪ್ಪಿಕೊಂಡು ಡ್ಯಾನ್ಸ್ ಮಾಡುತ್ತಾ ಆರಾಮವಾಗಿ ಕಾಲ ಕಳೆಯುತ್ತಿದ್ದರು. ಆದರೆ ಇಶಾನಿ ಸಹ ಬೇಗನೆ ಮನೆಯಿಂದ ಹೊರಗೆ ಹೋಗಬೇಕಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ