ವಿನ್ನರ್ಗೆ ಸಿಗೋದು 50 ಲಕ್ಷ ಅಲ್ಲ, 25 ಲಕ್ಷ ರೂಪಾಯಿ; ಶಿಕ್ಷೆ ಕೊಟ್ಟ ಬಿಗ್ ಬಾಸ್
Bigg Boss Winner Prize Money: ಪ್ರತಿ ಬಾರಿ ಬಿಗ್ ಬಾಸ್ ವಿನ್ನರ್ಗೆ 50 ಲಕ್ಷ ರೂಪಾಯಿ ಸಿಗುತ್ತಿತ್ತು. ಆದರೆ, 50 ಲಕ್ಷ ರೂಪಾಯಿ ಇದ್ದ ಪ್ರೈಜ್ ಅಮೌಂಟ್ ಅನ್ನು 25 ಲಕ್ಷ ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇದನ್ನು ಕೇಳಿ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಬಿಗ್ ಬಾಸ್ನಲ್ಲಿ (Bigg Boss) ಈ ಬಾರಿ ಸಾಕಷ್ಟು ಟ್ವಿಸ್ಟ್ಗಳನ್ನು ನೀಡಲಾಗುತ್ತಿದೆ. ಕಳೆದ ವಾರವಷ್ಟೇ ಕಿಚ್ಚ ಸುದೀಪ್ ಅವರು ಫಿನಾಲೆ ಬಗ್ಗೆ ಹೇಳಿದ್ದರು. ವಿನ್ನರ್ಗೆ 50 ಲಕ್ಷ ರೂಪಾಯಿ ಜೊತೆ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ ಎಂದು ಘೋಷಣೆ ಮಾಡಿದ್ದರು. ಈಗ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದ್ದಾರೆ. 50 ಲಕ್ಷ ರೂಪಾಯಿ ಇದ್ದ ಪ್ರೈಜ್ ಅಮೌಂಟ್ ಅನ್ನು 25 ಲಕ್ಷ ರೂಪಾಯಿಗೆ ಇಳಿಕೆ ಮಾಡಿದ್ದಾರೆ. ಇದನ್ನು ಕೇಳಿ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಂದು ಆದೇಶ ಬಂತು. 25 ಸಾವಿರ ಪಾಯಿಂಟ್ನಿಂದ 20 ಲಕ್ಷ ಪಾಯಿಂಟ್ಸ್ ಮಧ್ಯೆ ಹಲವು ಬೋರ್ಡ್ಗಳಿದ್ದವು. ಇದನ್ನು ಒಬ್ಬೊಬ್ಬರು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದರು. ಅಲ್ಲದೆ, ಎಲ್ಲವೂ ಸ್ವಂತ ಆಯ್ಕೆ ಆಗಿರಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಆದರೆ, ವೋಟಿಂಗ್ ಮೂಲಕ ಈ ಪ್ರಕ್ರಿಯೆ ನಡೆಸಲಾಯಿತು. ಕನಿಷ್ಠ ಸಂಖ್ಯೆ ಅಂದರೆ 25 ಸಾವಿರ ಪಾಯಿಂಟ್ನ ಬೋರ್ಡ್ಅನ್ನು ವರ್ತೂರು ಸಂತೋಷ್ ಪಡೆದರು. ಅತಿ ಹೆಚ್ಚು ಪಾಯಿಂಟ್ಸ್ ಬೋರ್ಡ್ ಅಂದರೆ 20 ಲಕ್ಷ ಪಾಯಿಂಟ್ ಬೋರ್ಡ್ ತುಕಾಲಿ ಸಂತೋಷ್ಗೆ ಸಿಕ್ಕಿತು. ಈ ಬಗ್ಗೆ ಬಿಗ್ ಬಾಸ್ ಅಸಮಾಧಾನ ಹೊರಹಾಕಿದರು. ‘ಎಲ್ಲದಕ್ಕೂ ಬೆಲೆ ತೆರಲೇಬೇಕು’ ಎಂಬ ಆದೇಶ ಬಂತು.
ಈ ವಾರ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟರು. ಈ ವಾರ ಯಾರ್ಯಾರು ನಾಮಿನೇಟ್ ಆಗಿದ್ದಾರೋ ಅವರ ಕುತ್ತಿಗೆಯಲ್ಲಿರುವ ಮೊತ್ತವನ್ನು ಪ್ರೈಜ್ ಹಣದಲ್ಲಿ ಮೈನಸ್ ಮಾಡುವುದಾಗಿ ಬಿಗ್ ಬಾಸ್ ಘೋಷಿಸಿದರು. ಈ ವಾರ ಕಾರ್ತಿಕ್, ತುಕಾಲಿ ಸಂತೋಷ್, ಮೈಕಲ್, ವರ್ತೂರು ಸಂತೋಷ್, ಪ್ರತಾಪ್ ನಾಮಿನೇಟ್ ಆಗಿದ್ದಾರೆ. ಈ ಪೈಕಿ ತುಕಾಲಿ ಸಂತೋಷ್ ಅವರೇ 20 ಲಕ್ಷ ಪಾಯಿಂಟ್ಸ್ ಹೊಂದಿದ್ದರು. ನಾಮಿನೇಟ್ ಆದ ಸ್ಪರ್ಧಿಗಳ ಮೊತ್ತ ಸೇರಿದರೆ 25 ಲಕ್ಷ ಆಗುತ್ತದೆ. ಈ ಕಾರಣದಿಂದ ಬಿಗ್ ಬಾಸ್ 25 ಲಕ್ಷ ಕಳೆದು ಉಳಿದ 25 ಲಕ್ಷ ರೂಪಾಯಿ ಮಾತ್ರ ವಿಜೇತರಿಗೆ ಸಿಗಲಿದೆ ಎಂದರು.
ಇದನ್ನೂ ಓದಿ: ‘ಬಿಗ್ ಬಾಸ್ ವಾತಾವರಣ ಹಾಳುಮಾಡೋಣ’; ದುರಹಂಕಾರದಿಂದ ಪಣ ತೊಟ್ಟ ಮೈಕಲ್
ಇದನ್ನು ಕೇಳಿ ಸ್ಪರ್ಧಿಗಳು ಶಾಕ್ ಆದರು. ಇದರ ಜೊತೆಗೆ ಒಂದು ಟ್ವಿಸ್ಟ್ ನೀಡಲಾಯಿತು. ‘ಕಳೆದುಕೊಂಡಿದ್ದನ್ನು ಗಳಿಸಲು ಮತ್ತೆ ಅವಕಾಶ ಇದೆ. ಈ ವಾರದ ಟಾಸ್ಕ್ನ ಅದೇ ರೀತಿ ರೂಪಿಸಲಾಗಿದೆ. ಪ್ರತಿ ಟಾಸ್ಕ್ಗೆ ಒಂದು ಮೊತ್ತ ನಿಗದಿ ಮಾಡಲಾಗುತ್ತದೆ. ಟಾಸ್ಕ್ ಗೆದ್ದರೆ ಆ ಮೊತ್ತ ಮರಳುತ್ತದೆ’ ಎಂದರು ಬಿಗ್ ಬಾಸ್. ಇದನ್ನು ಕೇಳಿ ಸ್ಪರ್ಧಿಗಳು ಸ್ವಲ್ಪ ನಿರಾಳ ಆದರು. ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:16 am, Tue, 2 January 24