ಬಿಗ್​ಬಾಸ್ ಮೇಲೆ ಆರೋಪ, ಗೆದ್ದಿದ್ದ ಲಕ್ಷ ರೂಪಾಯಿ ಕಳೆದುಕೊಂಡ ಸ್ಪರ್ಧಿಗಳು

Bigg Boss: ಬಿಗ್​ಬಾಸ್ ನೀಡಿದ್ದ ಟಾಸ್ಕ್​ನಲ್ಲಿ ತಪ್ಪು ಹುಡುಕಿದ ಮನೆ ಮಂದಿ, ಬಿಗ್​ಬಾಸ್​ ಗೆ ಚಾಲೆಂಜ್ ಮಾಡಿ, ಗೆದ್ದಿದ್ದ ಲಕ್ಷ ರೂಪಾಯಿ ಹಣವನ್ನು ಸೋತಿದ್ದಾರೆ.

ಬಿಗ್​ಬಾಸ್ ಮೇಲೆ ಆರೋಪ, ಗೆದ್ದಿದ್ದ ಲಕ್ಷ ರೂಪಾಯಿ ಕಳೆದುಕೊಂಡ ಸ್ಪರ್ಧಿಗಳು
Follow us
ಮಂಜುನಾಥ ಸಿ.
|

Updated on: Jan 02, 2024 | 11:40 PM

ಬಿಗ್​ಬಾಸ್ (BiggBoss) ಮನೆಯಲ್ಲಿನ ಟಾಸ್ಕ್​ಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿರುತ್ತವೆ. ಮನೆಯಲ್ಲಿರುವ ಬಹುತೇಕ ಎಲ್ಲರೂ ಆಡಬಹುದಾದ ಆಟಗಳನ್ನೇ ಡಿಸೈನ್ ಮಾಡಲಾಗಿರುತ್ತಾದೆ. ಶಕ್ತಿ ಪ್ರದರ್ಶಿಸುವ ಟಾಸ್ಕ್​ಗಳಾದರೆ ಸ್ವತಃ ಬಿಗ್​ಬಾಸ್ ಪುರುಷರು, ಸ್ತ್ರೀಯರ ಗುಂಪುಗಳನ್ನು ಮಾಡಿ ಸಮಾನ ಬಲ ಇರುವಂತೆ ನೋಡಿಕೊಳ್ಳುತ್ತಾರೆ. ಇದೀಗ ಮಂಗಳವಾರದ ಎಪಿಸೋಡ್​ನಲ್ಲಿ ಟಾಸ್ಕ್​ ನೀಡುವಾಗ ಬಿಗ್​ಬಾಸ್​ನಿಂದ ತಪ್ಪಾಗಿದೆ ಎಂದು ಸ್ಪರ್ಧಿಗಳು ಆರೋಪ ಮಾಡಿ, ಕೊನೆಗೆ ಗೆದ್ದಿದ್ದ ಒಂದು ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ಆಗಿದ್ದಿಷ್ಟು, ಟಾಸ್ಕ್​ ಅನ್ನು ನೀಡುವ ಮೊದಲೇ ಆಡುವ ಆರು ಜನರನ್ನು ಕಾರಣಗಳೊಟ್ಟಿಗೆ ಆಯ್ಕೆ ಮಾಡುವಂತೆ ಬಿಗ್​ಬಾಸ್ ತನಿಷಾಗೆ ಸೂಚಿಸಿದರು. ತಾನು ನೀಡುತ್ತಿರುವ ಕಾರಣವನ್ನು ಮನೆಯ ಇತರೆ ಸ್ಪರ್ಧಿಗಳು ನೋಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲದ ತನಿಷಾ, ಕಾರ್ತಿಕ್, ಸಂಗೀತಾ, ತುಕಾಲಿ ಸಂತು ಅವರನ್ನು ಹೊರಗಿಟ್ಟು, ತಾವು, ವಿನಯ್, ಮೈಖಲ್, ವರ್ತೂರು ಸಂತು ಹಾಗೂ ನಮ್ರತಾ ಅವರನ್ನು ಆಯ್ಕೆ ಮಾಡಿಕೊಂಡರು. ಬಳಿಕ ವಿನಯ್ ಹಾಗೂ ತಾವು, ವರ್ತೂರು-ಮೈಖಲ್, ನಮ್ರತಾ-ಡ್ರೋನ್ ಪ್ರತಾಪ್ ಜೋಡಿಯಾಗಿ ಟಾಸ್ಕ್ ಆಡುವುದಾಗಿಯೂ ಘೋಷಿಸಿದರು.

ತೂತುಗಳಿರುವ ಉದ್ದನೆಯ ಹಲಗೆಯೊಂದರ ಮೇಲೆ ಎರಡು ದಾರಗಳಿಂದ ಮಾಡಿದ ಹಿಡಿಯನ್ನು ಬಳಸಿ ಚೆಂಡನ್ನು ಎಲ್ಲ ರಂಧ್ರಗಳಿಂದ ದಾಟಿಸಿ ಮೇಲಿರುವ ರಂಧ್ರಕ್ಕೆ ದಾಟಿಸುವ ಟಾಸ್ಕ್ ನೀಡಲಾಯ್ತು. ಆ ಟಾಸ್ಕ್​ ಅನ್ನು ಮಾಡಲು 20 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಮೈಖಲ್-ವರ್ತೂರು ಬಹಳ ನಿಧಾನಕ್ಕೆ ಆಡಿದರು, ಬಳಿಕ ವಿನಯ್ ಹಾಗೂ ತನಿಷಾ ಆಡಿದರು. ಮೈಖಲ್ ಹಾಗೂ ನಮ್ರತಾ ತುಸು ವೇಗವಾಗಿ ಆಡಿದರಾದರೂ ಚೆಂಡನ್ನು ಗುರಿಮುಟ್ಟಿಸುವ ಮೊದಲೇ ಸಮಯ ಮುಗಿಯಿತು. ಅಲ್ಲಿಗೆ ಮನೆಯು 1 ಲಕ್ಷ ರೂಪಾಯಿ ಹಣ ಗೆದ್ದಿತು.

ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿ ಮೇಲೆ ಕಳ್ಳತನದ ಆರೋಪ, ಪ್ರಕರಣ ದಾಖಲು

ಟಾಸ್ಕ್ ಮುಗಿದ ಬಳಿಕ ಹೊರಗೆ ಕೂತಿದ್ದ ಸಂಗೀತಾ, ಮೈಖಲ್ ಹಾಗೂ ವರ್ತೂರಿಗೆ ನೀಡಿದ್ದ ಬೋರ್ಡ್​ನಲ್ಲಿ ದೋಷವಿದೆ ಎಂದರು. ವಿನಯ್ ಸೇರಿದಂತೆ ಮನೆಯ ಇತರೆ ಸ್ಪರ್ಧಿಗಳು ಸಹ ಅದನ್ನು ಅನುಮೋದಿಸಿದರು. ಬಳಿಕ ಬಿಗ್​ಬಾಸ್, ಸರಿ ಹಾಗಿದ್ದರೆ ನಿಮಗೆ ಇನ್ನೊಂದು ಅವಕಾಶ ನೀಡುತ್ತಿದ್ದೇವೆ, 7 ನಿಮಿಷದಲ್ಲಿ ಚೆಂಡನ್ನು ಹಾಕಿ ಐದು ಲಕ್ಷ ಹಣ ಗೆಲ್ಲಿ, ಸೋತರೆ ಒಂದು ಲಕ್ಷ ಹಣ ಕಳೆದುಕೊಳ್ಳುತ್ತೀರಿ ಎಂದರು. ವಿನಯ್ ಹಾಗೂ ಸಂಗೀತಾ ಬೇಡ ಎಂದರಾದರೂ ಇತರರು ಒಪ್ಪಿ ಮತ್ತೆ ಆಡಿ, ಟಾಸ್ಕ್ ಸೋತು, ಲಕ್ಷ ರೂಪಾಯಿ ಹಣ ಕಳೆದುಕೊಂಡರು.

ಬಳಿಕ ಮಾತನಾಡಿದ ಬಿಗ್​ಬಾಸ್, ಆಟದಲ್ಲಿ ಸೋತಾಗ ಅದನ್ನು ಒಪ್ಪಿಕೊಂಡು ಮುಂದೆ ಸಾಗಿ, ಸೋಲಿಗೆ ಕಾರಣ ಹುಡುಕಿ, ಬೇರೆಯವರನ್ನು ದೂಷಿಸಿದರೆ ನಿಮ್ಮ ವ್ಯಕ್ತಿತ್ವ ವೀಕ್ಷಕರ ಎದುರು ಕಳಪೆಯಾಗುತ್ತದೆ ಎಂದರು. ಅಲ್ಲಿಗೆ ಮನೆಯವರಿಗೆ ತಾವು ಮಾಡಿದ ತಪ್ಪಿನ ಅರಿವಾಯ್ತು ಆದರೆ ಅಷ್ಟರಲ್ಲಾಗಲೆ ಗೆದ್ದಿದ್ದ ಹಣವನ್ನು ಕಳೆದುಕೊಂಡಿದ್ದಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ