ಈ ವಾರ ಬಿಗ್​ಬಾಸ್ ಮನೆಯಿಂದ ಹೊರ ಹೋಗಿದ್ಯಾರು?

Bigg Boss: ಈ ವಾರ ಡಬಲ್ ಎಲಿಮಿನೇಷನ್ ಆಗಲಿದೆ ಎಂಬ ಪುಕಾರು ಹಬ್ಬಿತ್ತು. ಅಂದಹಾಗೆ ಈ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ಯಾರು?

ಈ ವಾರ ಬಿಗ್​ಬಾಸ್ ಮನೆಯಿಂದ ಹೊರ ಹೋಗಿದ್ಯಾರು?

Updated on: Dec 17, 2023 | 11:05 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಮನೆಯಲ್ಲಿ ಪ್ರಸ್ತುತ ಹಲವು ಸ್ಪರ್ಧಿಗಳಿದ್ದಾರೆ. ಒಬ್ಬರಿಗಿಂತಲೂ ಒಬ್ಬರು ಚೆನ್ನಾಗಿ ಆಡುತ್ತಿದ್ದಾ. ಇನ್ನು ಮುಂದೆ ಪ್ರತಿವಾರ ಹೊರ ಹೋಗುವವರು ಒಳ್ಳೆಯ ಸ್ಪರ್ಧಿಗಳೇ ಆಗಿರುತ್ತಾರೆ. ಈ ವಾರ ಡಬಲ್ ಎಲಿಮಿನೇಷನ್ ಆಗುತ್ತದೆ ಎಂಬ ಪುಕಾರು ಮಾಧ್ಯಮಗಳಲ್ಲಿ ಹರಡಿತ್ತು, ಹಾಗಾಗಿ ಈ ಬಾರಿಯ ಎಲಿಮಿನೇಷನ್​ ಬಗ್ಗೆ ಕುತೂಹಲ ದುಪ್ಪಟ್ಟಾಗಿತ್ತು, ಅಂದಹಾಗೆ ಈ ವಾರ ಹೊರಗೆ ಹೋಗಿದ್ದು ಯಾರು?

ವಿನಯ್, ಸಂಗೀತಾ, ಡ್ರೋನ್ ಪ್ರತಾಪ್, ತನಿಷಾ, ಮೈಖಲ್, ಸಿರಿ, ಪವಿ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ವಿನಯ್ ಅವರು ಸೇಫ್ ಆಗಿರುವುದಾಗಿ ಶನಿವಾರವೇ ಸುದೀಪ್ ಘೋಷಣೆ ಮಾಡಿದರು. ಅದಾದ ಬಳಿಕ ಭಾನುವಾರದ ಎಪಿಸೋಡ್​ನಲ್ಲಿ ಮೊದಲಿಗೆ ಸಂಗೀತಾರನ್ನು ಸೇಫ್ ಮಾಡಿದರು. ಅದಾದ ಬಳಿಕ ಡ್ರೋನ್ ಪ್ರತಾಪ್​ ಅವರನ್ನು ಸೇಫ್ ಮಾಡಿದರು. ಕೊನೆಗೆ ಉಳಿದಿದ್ದು ಮೈಖಲ್, ಸಿರಿ ಮತ್ತು ಪವಿ ಅವರುಗಳು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಪಾಸ್ ಯಾರು? ಫೇಲ್ ಯಾರು? ಜಸ್ಟ್ ಪಾಸ್ ಆದವರ್ಯಾರು?

ಬಳಿಕ ಸುದೀಪ್ ಅವರು ಮೈಖಲ್ ಅವರು ಸೇವ್ ಆಗಿರುವುದಾಗಿ ಹೇಳಿದರು. ಅಂತಿಮವಾಗಿ ಉಳಿದಿದ್ದು ಸಿರಿ ಮತ್ತು ಪವಿ. ಇಬ್ಬರಲ್ಲಿ ಈ ವಾರ ಪವಿ ಅವರು ಮನೆಗೆ ಹೋಗಲಿದ್ದಾರೆ ಎಂದರು. ಸಿರಿ ಅವರು ಈ ವಾರ ಮನೆಯಲ್ಲಿಯೇ ಉಳಿದರು. ಸಿರಿ ಅವರಿಗೆ ಈ ವಾರ ಮನೆಯಲ್ಲಿ ಶಿಸ್ತು ಕಾಪಾಡುವ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಅದನ್ನು ಪೂರೈಸಲು ಒಂದು ವಾರ ಕಾಲಾವಕಾಶ ಸಿರಿ ಅವರಿಗೆ ದೊರೆತಂತಾಗಿದೆ.

ಎಲಿಮಿನೇಷನ್ ಜೊತೆಗೆ ಸುದೀಪ್ ಅವರು ಕ್ಯಾಪ್ಟನ್ಸಿ ಟಾಸ್ಕ್​ಗೂ ಚಾಲನೆ ನೀಡಿದರು. ಕ್ಯಾಪ್ಟನ್ ರೂಂಗೆ ನಾನೇ ಹಾಕಿಸಿದ್ದ ಬೀಗವನ್ನು ನಾನೇ ತೆಗೆಸುತ್ತಿದ್ದೇನೆ. ಈ ವಾರದಿಂದ ಕ್ಯಾಪ್ಟೆನ್ಸಿ ಟಾಸ್ಕ್​ಗೆ ಮತ್ತೆ ಚಾಲನೆ ಕೊಡುತ್ತಿದ್ದೇನೆ. ಮುಂದಿನ ವಾರ ಯಾರು ಕ್ಯಾಪ್ಟನ್ ಆಗುತ್ತಾರೆಯೋ ಅವರು ಕ್ಯಾಪ್ಟನ್ ರೂಂನ ಬೀಗ ತೆಗೆಯಬೇಕು. ಎಲ್ಲರೂ ಸಹ ಟಾಸ್ಕ್​ನಲ್ಲಿ ಗೆದ್ದು ಕ್ಯಾಪ್ಟನ್ ಆದ ವ್ಯಕ್ತಿಗೆ ಆ ಹುದ್ದೆಗೆ ಗೌರವ ನೀಡಬೇಕು ಎಂದು ಸಹ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us