ಬಿಗ್​ಬಾಸ್​ ಸ್ಪರ್ಧಿಗಳಿಗೆ ಉಡುಗೊರೆ ಕಳಿಸಿದ ಜನ, ಯಾರಿಗೆ ಏನು ಸಿಕ್ತು?

|

Updated on: Oct 13, 2024 | 7:39 AM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳಿಗೆ ವೀಕ್ಷಕರು ಕೆಲವು ಉಡುಗೊರೆಗಳನ್ನು ಕಳಿಸಿದ್ದಾರೆ. ಮನೆಯಲ್ಲಿ ಅವರ ವ್ಯಕ್ತಿತ್ವ, ಸ್ಥಾನವನ್ನು ಆಧರಿಸಿ ಈ ಉಡುಗೊರೆಗಳನ್ನು ನೀಡಲಾಗಿದ್ದು, ಯಾರಿಗೆ ಯಾವ ಉಡುಗೊರೆ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

ಬಿಗ್​ಬಾಸ್​ ಸ್ಪರ್ಧಿಗಳಿಗೆ ಉಡುಗೊರೆ ಕಳಿಸಿದ ಜನ, ಯಾರಿಗೆ ಏನು ಸಿಕ್ತು?
Follow us on

ಬಿಗ್​ಬಾಸ್ ಸ್ಪರ್ಧಿಗಳು ಮನೆಯೊಳಗೆ ಹೋದ ಬಳಿಕ ಹೊರಗಿನ ಜಗತ್ತಿನ ಜೊತೆಗೆ ಸಂಬಂಧ ಕಡಿದುಕೊಳ್ಳುತ್ತಾರೆ. ವಾರಾಂತ್ಯದಲ್ಲಿ ಮಾತನಾಡಲು ಸಿಗುವ ಸುದೀಪ್ ಬಿಟ್ಟರೆ ಇನ್ಯಾರೊಟ್ಟಿಗೂ ಸಂಪರ್ಕ ಇರುವುದಿಲ್ಲ. ಆದರೆ ಕಳೆದ ಸೀಸನ್​ನಲ್ಲಿ ಸುದೀಪ್, ಜನರಿಂದ ಸ್ಪರ್ಧಿಗಳಿಗೆ ಪತ್ರ ಬರೆಸಿದ್ದರು, ಉಡುಗೊರೆಗಳನ್ನು ಕಳಿಸಿದ್ದರು. ಆ ಉಡುಗೊರೆಗಳು ಸ್ಪರ್ಧಿಗಳಲ್ಲಿ ಹೊಸ ಸ್ಪೂರ್ತಿ ತುಂಬಿತ್ತು. ಈ ಸೀಸನ್​ನಲ್ಲಿಯೂ ಸಹ ಎರಡನೇ ವಾರದಲ್ಲಿಯೇ ಸ್ಪರ್ಧಿಗಳಿಗೆ ಜನರಿಂದ ಉಡುಗೊರೆ ಮತ್ತು ಸಂದೇಶ ದೊರಕಿದೆ. ಅಂದಹಾಗೆ ಮನೆಯ ಯಾವ ಸ್ಪರ್ಧಿಗೆ ಯಾವ ಉಡುಗೊರೆ ಸಿಕ್ತು? ಇಲ್ಲಿದೆ ಮಾಹಿತಿ.

ಬಿಗ್​ಬಾಸ್ ಕನ್ನಡ ಸೀಸನ್ 11 ರ ಎರಡನೇ ವಾರಾಂತ್ಯದ ಪಂಚಾಯ್ತಿಯಲ್ಲಿ ಸುದೀಪ್ ಅವರು ಜನ ಸ್ಪರ್ಧಿಗಳಿಗೆ ಕಳಿಸಿರುವ ಉಡುಗೊರೆ ಮತ್ತು ಸಂದೇಶಗಳನ್ನು ಹಂಚಿಸಿದರು. ಧನರಾಜ್​ಗೆ ಗಾಳಿ ಹೊಡೆಯುವ ಪಂಪ್ ನೀಡಾಯ್ತು. ಇಲ್ಲಿ ನಿಮಗೆ ನೀವೇ ಗಾಳಿ ಹೊಡೆದುಕೊಂಡು ಮುಂದೆ ಸಾಗಬೇಕು ಎಂಬ ಸಂದೇಶವನ್ನು ನೀಡಲಾಯ್ತು. ಚಿನ್ನದ ಸುರೇಶ್ ಅವರಿಗೆ ಟೋಪಿ ನೀಡಲಾಯ್ತು. ಹೆಸರು ಮಾಡಿರುವವರ ಮಧ್ಯೆ, ಹೆಸರು ಇಲ್ಲದೆ ಬಂದಿದ್ದೀರಿ, ಹೆಸರು ಮಾಡಿಕೊಂಡು ಹೊರಗೆ ಹೋಗಿ ಎಂದು ಸಂದೇಶವನ್ನು ಅವರಿಗೆ ಕೊಡಲಾಗಿತ್ತು. ಲಾಯರ್ ಜಗದೀಶ್​ಗೆ ಕೆಂಪು ಬಣ್ಣದ ಬನಿಯನ್ ಚಡ್ಡಿ ಕೊಡಲಾಗಿತ್ತು. ಚೆನ್ನಾಗಿ ಆಡುತ್ತಿದ್ದೀರಿ, ಹೆಚ್ಚು ಫುಟೇಜ್ ನಿಮಗೆ ಸಿಗಲಿ, ಆದರೆ ಜಗಳ ಮಾಡುವುದೊಂದೇ ಆಟವಲ್ಲ ಎಂಬ ಸಂದೇಶ ನೀಡಲಾಯ್ತು. ಕಂಟೆಂಟ್ ಕ್ರಶ್ ಆಗಿದ್ದೀರ ಎಂದು ಪ್ರಶಂಸೆಯೂ ಜಗದೀಶ್​ಗೆ ಸಿಕ್ತು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಕತೆ, ಯಾರ ಹೃದಯ ಒಡೆಯಲಿದೆ?

ಉಗ್ರಂ ಮಂಜುಗೆ ಮೈಕು ನೀಡಲಾಯ್ತು. ಇನ್ನೂ ಸದ್ದು ಬರಬೇಕು ಎಂಬ ಸಂದೇಶವನ್ನು ನೀಡಲಾಯ್ತು. ಅನುಷಾಗೆ ಚಾರ್ಜರ್ ಕೊಡಲಾಯ್ತು. ಇಲ್ಲಿ ನಿಮಗೆ ನೀವೇ ಚಾರ್ಜ್ ಮಾಡಿಕೊಂಡು ಮುಂದೆ ಸಾಗುತ್ತಿರಬೇಕು, ಮತ್ತು ಸದಾ ಚಾರ್ಜ್ ಆಗಿಯೇ ಇರಬೇಕು ಎಂಬ ಸಂದೇಶ ಅದರಲ್ಲಿತ್ತು. ಐಶ್ವರ್ಯಾಗೆ ಬೊಂಬೆ ಸಿಕ್ಕಿತು. ಐಶ್ವರ್ಯಾಗೆ ಸಾಕಷ್ಟು ಪಾಸಿಟಿವ್ ಆದ ಸಂದೇಶವನ್ನು ಜನ ಕಳಿಸಿದ್ದರು. ವೋಟ್ ಹಾಕಲು ನಾವಿದ್ದೀವಿ ನೀವು ಆಡುತ್ತಾ ಹೋಗಿ ಎಂಬ ಸಂದೇಶ ಅದರಲ್ಲಿತ್ತು. ಹಂಸಾಗೆ ಮೆದುಳಿದ ಚಿತ್ರದ ಜೊತೆಗೆ ಬೆಂಡೇಕಾಯಿ ಕಳಿಸಿದ್ದರು. ಮೆದುಳಿಗೆ ಬೆಂಡೇಕಾಯಿ ಬಹಳ ಒಳ್ಳೆಯದು ತಿನ್ನಿ ಎಂಬ ಸಂದೇಶವನ್ನು ಕೊಟ್ಟಿದ್ದರು. ಆ ಮೂಲಕ ಮೆದುಳನ್ನು ತುಸು ಹೆಚ್ಚಾಗಿ ಬಳಸಿ ಎಂದಿತ್ತು ಸಂದೇಶ.

ಧರ್ಮ ಕೀರ್ತಿರಾಜ್​ಗೆ ಬೈನಾಕ್ಯುಲರ್​ ನೀಡಲಾಗಿತ್ತು. ನಮ್ಮ ಹೀರೋ ಎಂದು ಒಳಗೆ ಕಳಿಸಿಕೊಟ್ಟರೆ ಒಳಗೆ ಹೋಗಿ ಎಲ್ಲೋ ಕಳೆದು ಹೋಗಿದ್ದೀರಿ, ಮೊದಲು ನಿಮ್ಮನ್ನು ನೀವು ಹುಡುಕಿಕೊಳ್ಳಿ. ಆಚೆ ಇದ್ದಾಗ ನಿಮಗೆ ಚಪ್ಪಾಳೆ ತಟ್ಟಿದಂತೆ, ಈಗಲೂ ಚಪ್ಪಾಳೆ ತಟ್ಟಲು ರೆಡಿಯಾಗಿದ್ದೇವೆ ಎಂಬ ಸಂದೇಶ ಕೊಡಲಾಗಿತ್ತು. ಭವ್ಯಾಗೆ ಕ್ಯಾಲುಕ್ಯುಲೇಟರ್ ನೀಡಲಾಗಿತ್ತು. ಲೆಕ್ಕಾಚಾರದ ಆಟ ಬಹಳ ಇಂಪಾರ್ಟೆಂಟು ಎಂಬ ಸಂದೇಶ ಅದರಲ್ಲಿತ್ತು. ಚೈತ್ರಾ ಕುಂದಾಪುರಗೆ ಇದ್ದಿಲು ನೀಡಲಾಗಿತ್ತು. ಫೈರ್ ಬ್ರ್ಯಾಂಡ್​ ಎಂದುಕೊಂಡು ಒಳಗೆ ಕಳಿಸಿದರೆ, ಫೈರ್ ಎಲ್ಲ ಆರಿಸಿಕೊಂಡು ತಣ್ಣಗಾಗಿದ್ದೀರಿ, ಬೆಂಕಿ ಹಚ್ಚಿ ಎಂಬ ಸಂದೇಶ ನೀಡಲಾಯ್ತು.

ತ್ರಿವಿಕ್ರಮ್​ಗೆ ವಿಷಲ್ ಕೊಡಲಾಯ್ತು. ಒಳ್ಳೆಯ ಸೌಂಡ್​ ಮಾಡುತ್ತೆ ಎಂದು ತೆಗೆದುಕೊಂಡ ವಿಷಲ್​ ಸೌಂಡೇ ಮಾಡುತ್ತಿಲ್ಲ. ದಯವಿಟ್ಟು ಸೌಂಡ್ ಮಾಡಿ ಎಂಬ ಸಂದೇಶ ನೀಡಲಾಗಿತ್ತು. ಮಾನಸಾಗೆ ಕನ್ನಡಿ ನೀಡಲಾಯ್ತು. ನಿಮ್ಮನ್ನು ನೀವು ಹುಡುಕಿಕೊಳ್ಳುವ ಪ್ರಯತ್ನ ಮಾಡಿ, ನಿಮ್ಮನ್ನು ನೀವು ಅರಿತುಕೊಳ್ಳಿ ಎಂಬ ಸಂದೇಶ ಅದರ ಜೊತೆ ಇತ್ತು. ರಂಜಿತ್​ಗೆ ಆಮೆಯ ಬೊಂಬೆ ನೀಡಲಾಯ್ತು. ಆನೆ ಆಗುತ್ತೀರ ಎಂದು ಒಳಗೆ ಕಳಿಸಿದ್ದೀವಿ ನೀವು ಆಮೆ ಆಗಲು ಹೊರಟಿದ್ದೀರಿ ಎಂಬ ಖಾರವಾದ ಸಂದೇಶ ಅದರ ಜೊತೆಗೆ ಇತ್ತು. ಗೌತಮಿಗೆ ಮಾಸ್ಕ್ ನೀಡಲಾಯ್ತು. ಮುಗುಳುನಗೆಯ ಮುಖವಾಡ ತೆಗೆದು ನೀವು ನೀವಾಗಿ ಆಟವಾಡಿ ಎಂಬ ಸಂದೇಶ ಅದರ ಜೊತೆಗೆ ಇತ್ತು. ಮೋಕ್ಷಿತಾಗೆ ಸಿಹಿ ಮತ್ತು ಖಾರ ಕೊಡಲಾಯ್ತು. ನೀವು ಬಹಳ ಸಿಹಿಯಾಗಿದ್ದೀರ. ಆಗಾಗ್ಗೆ ಖಾರವೂ ಆಗಬೇಕಾಗುತ್ತದೆ ಎಂಬ ಸಂದೇಶ ಅದರ ಜೊತೆಗೆ ಇತ್ತು. ಶಿಶಿರ್​ಗೆ ಹೀರೋ ಎಂದು ಬರೆದಿರುವ ಕೂಲಿಂಗ್ ಗ್ಲಾಸು ಕೊಡಲಾಗಿತ್ತು. ನೀವು ಕೆಲವರನ್ನು ಹಿಂದಿಟ್ಟು ಹೀರೋ ಆಗಿದ್ದೀರ. ಆದರೆ ಅವರು ಬಹಳ ಹಿಂದೆ ಏನಿಲ್ಲ, ನಿಮ್ಮ ಹಿಂದೆಯೇ ಇದ್ದಾರೆ ಎಚ್ಚರ ಎಂಬ ಸಂದೇಶ ಜೊತೆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ