AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 13 highlights: ಬಿಗ್​​ಬಾಸ್ ವೇದಿಕೆ ಮೇಲೆ ಏನೇನಾಯ್ತು?

Bigg Boss Kannada Season 13 Live Updates: ಬಿಗ್​​ಬಾಸ್ ಕನ್ನಡ ಸೀಸನ್ 13 ಶುರುವಾಗಿದೆ. ಸುದೀಪ್ ಅವರು ಸ್ಪರ್ಧಿಗಳಿಗೆ ಸ್ವಾಗತ ಕೋರುತ್ತಿದ್ದು, ಒಬ್ಬೊಬ್ಬರನ್ನಾಗಿ ಬಿಗ್​​ಬಾಸ್ ಮನೆಗೆ ಕಳುಹಿಸುತ್ತಿದ್ದಾರೆ. ಬಿಗ್​​ಬಾಸ್ ಗ್ರ್ಯಾಂಡ್ ಇನ್ಯಾಗುರೇಶನ್ ನಲ್ಲಿ ನಡೆಯುವ ಸಂಗತಿಗಳ ಕ್ಷಣ-ಕ್ಷಣದ ಮಾಹಿತಿ ಇಲ್ಲಿ ಲಭ್ಯವಿದೆ....

Bigg Boss Kannada 13 highlights: ಬಿಗ್​​ಬಾಸ್ ವೇದಿಕೆ ಮೇಲೆ ಏನೇನಾಯ್ತು?
Bigg Boss Kannada Live
ಮಂಜುನಾಥ ಸಿ.
|

Updated on:Sep 06, 2026 | 11:30 PM

Share

ಬಿಗ್​​ಬಾಸ್ ಕನ್ನಡ ಸೀಸನ್ 13 ಶುರುವಾಗಿದೆ. ಸುದೀಪ್ ಅವರು ಅಧಿಕೃತವಾಗಿ ಬಿಗ್​​ಬಾಸ್​​ಗೆ ಆರಂಭ ನೀಡಿದ್ದು, ಜಾಲಿವುಡ್​ನ ಸ್ಟುಡಿಯೋದ ಒಳಗೆ ನಿರ್ಮಾಣ ಮಾಡಲಾಗಿರುವ ಬಿಗ್​​ಬಾಸ್ ಮನೆಗೆ ಸ್ಪರ್ಧಿಗಳನ್ನು ಒಬ್ಬೊಬ್ಬರನ್ನಾಗಿ ಕಳಿಸುತ್ತಿದ್ದಾರೆ. ಈ ಬಾರಿ ಫ್ಲೈಟ್ ಥೀಮ್​​ನಲ್ಲಿ ಬಿಗ್​​ಬಾಸ್ ಮನೆ ವಿನ್ಯಾಸ ಮಾಡಲಾಗಿದ್ದು, ಪ್ರಪಂಚದ ಏಳು ಅಚ್ಚರಿಗಳನ್ನು ಬಿಗ್​​ಬಾಸ್ ಮನೆಯೊಳಗೆ ನಿರ್ಮಿಸಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಹಲವು ಕ್ಷೇತ್ರಗಳಿಂದ, ಹಲವು ವ್ಯಕ್ತಿತ್ವದ ಸ್ಪರ್ಧಿಗಳು ಬಿಗ್​​ಬಾಸ್ ಮನೆ ಪ್ರವೇಶಿಸಲಿದ್ದಾರೆ. ಬಿಗ್​​ಬಾಸ್ ಮನೆಯ ಕ್ಷಣ-ಕ್ಷಣದ ಮಾಹಿತಿ ಇಲ್ಲಿ ಲಭ್ಯವಿದೆ.

LIVE NEWS & UPDATES

The liveblog has ended.
  • 06 Sep 2026 11:23 PM (IST)

    ಬಿಗ್​​ಬಾಸ್​​ಗೆ ಬಂದ ಮಾಡರ್ನ್ ಮಹಾಕವಿ ಮಂಜು

    ಅಗ್ನಿಪರೀಕ್ಷೆಯಿಂದ ಈ ಬಾರಿ ನಾಲ್ವರು ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೂವರನ್ನು ಜನರು ಆಯ್ಕೆ ಮಾಡಿದ್ದರೆ ನಾಲ್ಕನೇ ಸ್ಪರ್ಧಿಯನ್ನು ಅಗ್ನಿಪರೀಕ್ಷೆ ಜ್ಯೂರಿಗಳು ಆಯ್ಕೆ ಮಾಡಿದ್ದು, ಮಾಡರ್ನ್ ಮಹಾಕವಿ ಮಂಜು ಅವರು ಬಿಗ್​​ಬಾಸ್ ಮನೆಗೆ ಹೋಗಿದ್ದಾರೆ.

  • 06 Sep 2026 11:10 PM (IST)

    ಬಿಗ್​​ಬಾಸ್ ವೇದಿಕೆಗೆ ಬಂದ ಅಗ್ನಿಪರೀಕ್ಷೆ ಜೂರಿಗಳು

    ಅಗ್ನಿಪರೀಕ್ಷೆ ನಡೆಸಿಕೊಟ್ಟ ಜ್ಯೂರಿಗಳಾದ ವಿನಯ್, ಚಂದನ್ ಗೌಡ, ಶ್ರುತಿ ಅವರುಗಳನ್ನು ಸುದೀಪ್ ಅವರು ಬಿಗ್​​ಬಾಸ್ ವೇದಿಕೆಗೆ ಆಹ್ವಾನಿಸಿದ್ದು, ಅವರು ಮಾಡಿದ ಕಾರ್ಯವನ್ನು ಕೊಂಡಾಡಿದರು. ವಿನಯ್ ಅವರಿಗೆ ತುಸು ಕಾಲೆಳೆದರು ಸಹ.

  • 06 Sep 2026 11:06 PM (IST)

    ಯುವ ನಟ ಯಶಸ್ ಕೃಷ್ಣ ಎಂಟ್ರಿ

    ಯುವ ನಟ ಯಶಸ್ ಕೃಷ್ಣ ಅವರು ಧಾರಾವಾಹಿ ನಟ. ಎಂಜಿನಿಯರಿಂಗ್ ಓದಿದ ಅವರು ನಟ ಆಗಬೇಕೆಂದು ಹಠತೊಟ್ಟು ನಟ ಆದವರು. ಮಂಡ್ಯ ಮೂಲದ ಯಶಸ್ ಕೃಷ್ಣ, ಇದೀಗ ಅವರು ಬಿಗ್​​ಬಾಸ್​​ಗೆ ಬಂದಿದ್ದಾರೆ.

  • 06 Sep 2026 10:49 PM (IST)

    ಅಗ್ನಿಪರೀಕ್ಷೆಯಿಂದ ಆಯ್ಕೆಯಾದ ಮೂರನೇ ಸ್ಪರ್ಧಿ

    ಅಗ್ನಿಪರೀಕ್ಷೆಯಲ್ಲಿ ಆಯ್ಕೆಯಾದ ಮೂರನೇ ಸ್ಪರ್ಧಿ ಧನುಶ್. ಈಗಾಗಲೇ ಇಬ್ಬರು ಬಿಗ್​​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮೂರನೇ ಮತ್ತು ಕೊನೆಯ ಸ್ಪರ್ಧಿ ಧನುಶ್ ಅವರು ಎಂಟ್ರಿ ಕೊಟ್ಟಿದ್ದರು. ಇವರು ಅಗ್ನಿಪರೀಕ್ಷೆಯಲ್ಲಿ ತಮ್ಮ ಗಿನ್ನೀಸ್ ದಾಖಲೆಯನ್ನು ಸಹ ಹರಿದು ಹಾಕಿದ್ದರು.

  • 06 Sep 2026 10:41 PM (IST)

    ಬಿಗ್​​ಬಾಸ್ ಮನೆಗೆ ವೈಷ್ಣವಿ ಎಂಟ್ರಿ

    ನಟಿ ವೈಷ್ಣವಿ ಕೌಂಡಿನ್ಯ ಅವರು ಬಿಗ್​​ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ತಾವು ಎಳವೆಯಿಂದಲೇ ಎದುರಿಸಿದ ಸವಾಲುಗಳ ಬಗ್ಗೆ ವೈಷ್ಣವಿ ಮಾತನಾಡಿದ್ದಾರೆ. ಜೊತೆಗೆ ತಮಗೆ ಓಸಿಡಿ ಸಮಸ್ಯೆ ಇರುವ ಬಗ್ಗೆಯೂ ಹೇಳಿದ್ದಾರೆ. ಜೊತೆಗೆ ತಮಗೆ ಬೇಗ ಸಿಟ್ಟು ಬರುತ್ತದೆ ಎಂದೂ ಸಹ ಹೇಳಿದ್ದಾರೆ.

  • 06 Sep 2026 10:31 PM (IST)

    ‘ಜೋಡಿ ಹಕ್ಕಿ’ ಖ್ಯಾತಿಯ ತಾಂಡವ್

    ‘ಜೋಡಿ ಹಕ್ಕಿ’ ಸೇರಿದಂತೆ ಹಲವಾರು ಧಾರಾವಾಹಿ ಮತ್ತು ಕೆಲ ಸಿನಿಮಾಗಳಲ್ಲೂ ನಟನೆ ಮಾಡಿರುವ ತಾಂಡವ್ ರಾಮ್ ಅವರು ಬಿಗ್​​ಬಾಸ್​​ ಕನ್ನಡ ಸೀಸನ್ 13ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ತಾಂಡವ್ ರಾಮ್ ಅವರು ಶೂಟೌಟ್ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದರು.

  • 06 Sep 2026 10:23 PM (IST)

    ಅಗ್ನಿಪರೀಕ್ಷೆ ಗೆದ್ದ ಎರಡನೇ ಸ್ಪರ್ಧಿ

    ಅಗ್ನಿಪರೀಕ್ಷೆ ಗೆದ್ದ ಎರಡನೇ ಸ್ಪರ್ಧಿ ಲಿಖಿತ್ ಗೋಂಧಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ಪ-ಮಕ್ಕಳಿಬ್ಬರು ಅಗ್ನಿಪರೀಕ್ಷೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಕೊನೆಗೆ ಮಗ ಲಿಖಿತ್ ಅವರು ಬಿಗ್​​ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

  • 06 Sep 2026 10:12 PM (IST)

    ಬಿಗ್​​ಬಾಸ್​​ ಮನೆಗೆ ಬಂದ ‘ಶ್ರಾವಣಿ’

    ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯ ನಾಯಕಿ ‘ಶ್ರಾವಣಿ’ ಪಾತ್ರದಲ್ಲಿ ನಟಿಸಿರುವ ಆಸಿಯಾ ಫಿರ್ದೋಸ್ ಅವರು ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

  • 06 Sep 2026 09:52 PM (IST)

    ಅಗ್ನಿಪರೀಕ್ಷೆ ಗೆದ್ದ ಕಿರಣ್ ಶಾಸ್ತ್ರಿ

    ಈ ಬಾರಿ ಸಾಮಾನ್ಯರು ಸಹ ಬಿಗ್​​ಬಾಸ್​​ಗೆ ಹೋಗುವ ಅವಕಾಶ ಇತ್ತು. ಅವರಿಗೆ ಅಗ್ನಿಪರೀಕ್ಷೆ ಆಯೋಜಿಸಲಾಗಿತ್ತು. ಅದರಲ್ಲಿ ಗೆದ್ದ ಮೊದಲ ಸ್ಪರ್ಧಿ ಕಿರಣ್ ಶಾಸ್ತ್ರಿ. ಉತ್ತರ ಕರ್ನಾಟಕ ಮೂಲದ ಕಿರಣ್ ಶಾಸ್ತ್ರಿ ಅವರು ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ.

  • 06 Sep 2026 09:34 PM (IST)

    ಎರಡನೇ ಬಾರಿ ಬಂದ ಓಂ ಪ್ರಕಾಶ್ ರಾವ್

    ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಎರಡನೇ ಬಾರಿ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಈ ಹಿಂದೆ ಅನಾರೋಗ್ಯದಿಂದಾಗಿ ಅವರು ಹೊರಗೆ ಹೋಗಿದ್ದರು. ಈಗ ಮತ್ತೆ ಮರಳಿ ಬಂದಿದ್ದಾರೆ. ಸುದೀಪ್ ಅವರು ಪ್ರೀತಿಯಿಂದ ಸ್ವಾಗತಿಸಿದರು ಸುದೀಪ್.

  • 06 Sep 2026 09:27 PM (IST)

    ಸುದೀಪ್ ಹಾಸ್ಯಕ್ಕೆ ನಗುವೋ ನಗು

    ಏಳನೇ ಸ್ಪರ್ಧಿಯಾಗಿ ಕಾವ್ಯಾ ಗೌಡ ಬಿಗ್​​ಬಾಸ್ ಮನೆಗೆ ಹೋದರು. ಈ ವೇಳೆ ಸುದೀಪ್ ಅವರು ಮಾಡಿದ ಹಾಸ್ಯಕ್ಕೆ ವೀಕ್ಷಕರು ನಕ್ಕು ಸುಸ್ತಾದರು. ಆದರೆ ಕಾವ್ಯಾ ಗೌಡ ಮಾತ್ರ ಏನೂ ಅರ್ಥವಾಗದೆ ಪೆಚ್ಚಾದರು.

  • 06 Sep 2026 09:16 PM (IST)

    ನಟಿ ಕಾವ್ಯಾ ಗೌಡ ಎಂಟ್ರಿ

    ಬಿಗ್​​ಬಾಸ್ ಮನೆಯ ಏಳನೇ ಸ್ಪರ್ಧಿ ಯಾಗಿ ನಟಿ ಕಾವ್ಯಾ ಗೌಡ ಅವರು ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಾವ್ಯಾ ಗೌಡ ಅವರು ವೇದಿಕೆ ಬರುತ್ತಿದ್ದಂತೆ ಸುದೀಪ್ ಅವರು ನಗುಇನ ಅಲೆಯನ್ನೇ ಎಬ್ಬಿಸಿದರು. ನಗು-ನಗುತ್ತಾ ಬಿಗ್​​ಬಾಸ್ ಮನೆ ಪ್ರವೇಶಿಸಿದರು ಕಾವ್ಯಾ ಗೌಡ.

  • 06 Sep 2026 09:05 PM (IST)

    ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟ ಸಂಗೀತಾ ಭಟ್

    ಸಿನಿಮಾ ನಟಿ ಸಂಗೀತಾ ಭಟ್ ಅವರು ಆರನೇ ಸ್ಪರ್ಧಿಯಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಂಗೀತಾ ಭಟ್ ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ನಟನೆ ಮಾಡಿದ್ದಾರೆ. ಚಿತ್ರರಂಗದಿಂದ ದೂರಾಗಿದ್ದ ಸಂಗೀತ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.

  • 06 Sep 2026 08:39 PM (IST)

    ಬಿಗ್​​ಬಾಸ್​​ಗೆ ಕಾಲಿಟ್ಟ ನಟ ಗಗನ್ ಚಿನ್ನಪ್ಪ

    ನಟ ಗಗನ್ ಚಿನ್ನಪ್ಪ ಬಿಗ್​​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಮಂಗಳಗೌರಿ’, ‘ಸೀತಾರಾಮ’ ಸೇರಿದಂತೆ ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿರುವ ಗಗನ್ ಚಿನ್ನಪ್ಪ ಇದೀಗ ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ನಾನು ಯಾರನ್ನೂ ಕೇರ್ ಮಾಡುವವನಲ್ಲ ಎಂದು ಗಗನ್ ಚಿನ್ನಪ್ಪ ಹೇಳಿದ್ದಾರೆ.

  • 06 Sep 2026 08:33 PM (IST)

    ಚಪ್ಪಾಳೆ ಗಿಟ್ಟಿಸಿದ ಸುದೀಪ್ ಕಾರ್ಯ

    ಮಗಳನ್ನು ಕಳಿಸಿಕೊಡಲು ವಿನಯಾ ಪ್ರಸಾದ್ ಅವರು ಆಗಮಿಸಿದ್ದರು. ಪ್ರೇಕ್ಷಕರ ಸಾಲಿನಲ್ಲಿ ವಿನಯಾ ಪ್ರಸಾದ್ ಕೂತಿದ್ದರು. ಇದನ್ನು ಗಮನಿಸಿದ ಸುದೀಪ್ ಅವರು, ಕೂಡಲೇ ಹೋಗಿ ವಿನಯಾ ಪ್ರಸಾದ್ ಅವರಿಗೆ ನಮಸ್ಕರಿಸಿದರು ಜೊತೆಗೆ ಅವರನ್ನು ವೇದಿಕೆ ಕರೆತಂದರು. ಸುದೀಪ್ ಅವರ ಈ ಕಾರ್ಯಕ್ಕೆ ಭಾರಿ ಕರತಾಡನ ವ್ಯಕ್ತವಾಯ್ತು.

  • 06 Sep 2026 08:30 PM (IST)

    ವಿನಯಾ ಪ್ರಸಾದ್ ಪುತ್ರಿ ಪ್ರಥಮಾ ಪ್ರಸಾದ್

    ವಿನಯಾ ಪ್ರಸಾದ್ ಪುತ್ರಿ, ಪ್ರಥಮಾ ಪ್ರಸಾದ್ ಅವರು ಬಿಗ್​​ಬಾಸ್ ಮನೆಗೆ ಕಾಲಿರಿಸಿದ್ದಾರೆ. ಪ್ರಥಮಾ ಪ್ರಸಾದ್ ಅವರು ನಟಿ, ನೃತ್ಯಕಲಾವಿದೆ, ಹಾಡುಗಾರ್ತಿ ಹೀಗೆ ಬಹುಮುಖ ಪ್ರತಿಭೆ ಆಗಿದ್ದಾರೆ. ತಮ್ಮನ್ನು ತಾವು ಜಗತ್ತಿಗೆ ತೋರಿಸಲೆಂದು ಬಿಗ್​​ಬಾಸ್​​ಗೆ ಬರ್ತಿದ್ದಾರಂತೆ ನಟಿ.

  • 06 Sep 2026 08:25 PM (IST)

    ಮಸ್ಕತ್​​ನಲ್ಲಿ ಹುಟ್ಟಿದ ಸೌಂದರ್ಯಾ ಶೆಟ್ಟಿ ಬಿಗ್ ಬಾಸ್​ಗೆ ಎಂಟ್ರಿ

  • 06 Sep 2026 08:11 PM (IST)

    ಬಿಗ್​ಬಾಸ್ ಮೂರನೇ ಸ್ಪರ್ಧಿ

    ಬಿಗ್​​ಬಾಸ್ ಮೂರನೇ ಸ್ಪರ್ಧಿಯಾಗಿ ಅವಿನಾಶ್ ಎಂಟ್ರಿ ಕೊಟ್ಟಿದ್ದಾರೆ. ಭಿನ್ನ ವ್ಯಕ್ತಿತ್ವದ ಅವಿನಾಶ್ ಅವರು. ತಾವು ಸೋತವನು, ಸ್ವಾತಂತ್ರ್ಯ ಪ್ರೇಮಿ ಎಂದು ತಮ್ಮನ್ನು ಪರಿಚಯ ಮಾಡಿಕೊಂಡ ಅವಿನಾಶ್. ಬಿಗ್​​ಬಾಸ್ ವೇದಿಕೆ ಮೇಲೆ ಹಾಡೊಂದನ್ನು ಸಹ ಹಾಡಿ ಗಮನ ಸೆಳೆದರು.

  • 06 Sep 2026 07:54 PM (IST)

    ಬಿಗ್​​ಬಾಸ್ ಎರಡನೇ ಸ್ಪರ್ಧಿ ಸೌಂದರ್ಯ

    ಬಿಗ್​​ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಸೌಂದರ್ಯ ಶೆಟ್ಟಿ ಅವರು ಎಂಟ್ರಿ ಕೊಟ್ಟಿದ್ದಾರೆ. ಹುಟ್ಟಿದ್ದು ಮಸ್ಕತ್ ಅಲ್ಲಿ, ಮೂಲ ಮಂಗಳೂರು, ಈಗಿರುವುದು ಮುಂಬೈನಲ್ಲಿ. ಸಖತ್ ಜಾಲಿ ಹುಡುಗಿ ಸೌಂದರ್ಯ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

  • 06 Sep 2026 07:32 PM (IST)

    ಮೊದಲ ಸ್ಪರ್ಧಿಯಾಗಿ ಜಗ್ಗು ಮಮ್ಮಿ ಎಂಟ್ರಿ

    ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದ ಹಾಸ್ಯನಟ ಜಗ್ಗು ಮಮ್ಮಿ (ಜಗದೀಶ ಎಂಬಿ) ಅವರು ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಜಗದೀಶ್ ಅವರು ‘ಲವ್ ಮಾಕ್ಟೆಲ್ 3’ ಸಿನಿಮಾನಲ್ಲಿ ನಟಿಸಿದ್ದಾರೆ. ಇದೀಗ ಎರಡನೇ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.  ವೇದಿಕೆ ಮೇಲೆ ಸುದೀಪ್ ಅವರು ಜಗ್ಗು ಅವರನ್ನು ಸಖತ್ ಆಗಿ ಕಾಲೆಳೆದಿದ್ದಾರೆ.

    Jaggu

    Jaggu

  • 06 Sep 2026 07:21 PM (IST)

    ಒಂದೇ ತೆರೆಯ ಮೇಲೆ ನಾಲ್ಕು ಬಿಗ್​​ಬಾಸ್ ನಿರೂಪಕರು

    ಕನ್ನಡ, ತೆಲುಗು, ತಮಿಳು, ಮಲಯಾಳಂ ಬಿಗ್​ಬಾಸ್ ರಿಯಾಲಿಟಿ ಶೋ ಒಟ್ಟಿಗೆ ಪ್ರಾರಂಭ ಆಗುತ್ತಿದ್ದು, ಇದೇ ಮೊದಲ ಬಾರಿಗೆ ನಾಲ್ಕೂ ಭಾಷೆಯ ಬಿಗ್​​ಬಾಸ್​ ಶೋನ ನಿರೂಪಕರಾದ ಸುದೀಪ್, ಮೋಹನ್​​ಲಾಲ್, ವಿಜಯ್ ಸೇತುಪತಿ, ನಾಗಾರ್ಜುನ ಅಕ್ಕಿನೇನಿ ಅವರುಗಳು ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡು, ಪರಸ್ಪರರಿಗೆ ಹಾರೈಸಿದರು.

  • 06 Sep 2026 07:09 PM (IST)

    ಬಿಗ್​ಬಾಸ್ ಮನೆಗೆ ಚಾಲನೆ

    ಬಿಗ್​ಬಾಸ್ ಕನ್ನಡ ಸೀಸನ್ 13ಕ್ಕೆ ಅದ್ಧೂರಿ ಚಾಲನೆ, ಕಿಚ್ಚ ಸುದೀಪ್ ಅವರು ಮನೆಯ ಪರಿಚಯ ಮಾಡಿಸುವ ಮೂಲಕ ಈ ಬಾರಿಯ ಸೀಸನ್​​ಗೆ ಚಾಲನೆ ನೀಡಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ವಿಶ್ವದ ಅದ್ಭುತ ಮಾನ್ಯುಮೆಂಟ್​​ಗಳನ್ನು ಮರು ಸೃಷ್ಟಿಸಲಾಗಿದೆ.

    Bigg Boss House

    Bigg Boss House

  • 06 Sep 2026 06:07 PM (IST)

    ಅಪರೂಪದ ಘಟನೆ

    ಈ ಬಾರಿ ಬಿಗ್​​ಬಾಸ್​​ನಲ್ಲಿ ಅಪರೂಪದ ಘಟನೆ ನಡೆಯಲಿದೆ. ನಾಲ್ಕು ಭಾಷೆಯ ಬಿಗ್​​ಬಾಸ್​ ಶೋ ಒಟ್ಟಿಗೆ ಆರಂಭ ಆಗುತ್ತಿದ್ದು, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯ ಬಿಗ್​​ಬಾಸ್​​ ಏಕಕಾಲಕ್ಕೆ ಪ್ರಾರಂಭ ಆಗುತ್ತಿದೆ. ನಾಲ್ಕೂ ಶೋಗಳ ನಾಲ್ಕೂ ಜನ ನಿರೂಪಕರು ಒಟ್ಟಿಗೆ ಕಿರುತೆರೆಯ ಮೇಲೆ ಕಾಣಿಸಿಕೊಳ್ಳಲಿರುವುದು ವಿಶೇಷ.

  • 06 Sep 2026 06:02 PM (IST)

    ಓಂ ಪ್ರಕಾಶ್ ರಾವ್

    ಖ್ಯಾತ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸಹ ಈ ಬಾರಿ ಬಿಗ್​​ಬಾಸ್ ಸ್ಪರ್ಧಿ ಆಗಿ ಬಿಗ್​​ಬಾಸ್ ಮನೆಗೆ ಹೋಗುತ್ತಿದ್ದಾರೆ. ಈ ಹಿಂದೆಯೂ ಒಮ್ಮೆ ಬಿಗ್​​ಬಾಸ್ ಮನೆಗೆ ಓಂ ಪ್ರಕಾಶ್ ಹೋಗಿದ್ದರು ಆದರೆ ಅನಾರೋಗ್ಯದಿಂದ ಹೊರಗೆ ಬಂದಿದ್ದರು.

  • 06 Sep 2026 06:00 PM (IST)

    ಕಾವ್ಯಾ ಗೌಡ ಮತ್ತು ಸಂಗೀತಾ ಭಟ್

    ಕಾವ್ಯಾ ಗೌಡ ಮತ್ತು ನಟಿ ಸಂಗೀತಾ ಭಟ್ ಅವರುಗಳು ಬಿಗ್​​ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಸಂಗೀತಾ ಭಟ್​ ಅವರ ಪತಿ ಸುದರ್ಶನ್​​ ಅವರು ಪತ್ನಿಯನ್ನು ಬೀಳ್ಕೊಡಲು ಆಗಮಿಸಿದ್ದರು. ಅಂದಹಾಗೆ ಅವರ ಆನ್​​ ಸ್ಕ್ರೀನ್ ಪತ್ನಿ ಕಾವ್ಯಾ ಸಹ ಬಿಗ್​​ಬಾಸ್​​ ಸ್ಪರ್ಧಿ ಆಗಿದ್ದಾರೆ.

Published On - Sep 06,2026 5:59 PM

Follow Us