ಬಿಗ್​ ಬಾಸ್ ಮನೆಯಲ್ಲಿ ಎಲ್ಲರ ಮುಖವಾಡ ಬಯಲು; ಸ್ಪರ್ಧಿಗಳಿಗೆ ಶಾಕ್

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಕೆಲವು ವಿಡಿಯೋ ಪ್ರದರ್ಶನ ಮಾಡಲಾಗಿದೆ. ಅದರಿಂದಾಗಿ ಹಲವು ಸ್ಪರ್ಧಿಗಳ ಮುಖವಾಡ ಕಳಚಿ ಬಿದ್ದಿದೆ. ಗಗನ್ ಚಿನ್ನಪ್ಪ, ಸೌಂದರ್ಯಾ ಶೆಟ್ಟಿ, ಜಗದೀಶ್, ಪ್ರಶಾಂತ್, ಧನುಷ್ ಮುಂತಾದವರು ಬೆನ್ನ ಹಿಂದೆ ಆಡಿದ ಮಾತುಗಳು ಈಗ ಬಟಾಬಯಲಾಗಿವೆ.

ಬಿಗ್​ ಬಾಸ್ ಮನೆಯಲ್ಲಿ ಎಲ್ಲರ ಮುಖವಾಡ ಬಯಲು; ಸ್ಪರ್ಧಿಗಳಿಗೆ ಶಾಕ್
BBK 13
Image Credit source: Colors Kannada

Updated on: Oct 19, 2026 | 10:42 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ 43 ದಿನಗಳು ಕಳೆದಿವೆ. ದೊಡ್ಮನೆಯಲ್ಲಿ ಜಗಳಗಳು ಸಹಜ. ಒಬ್ಬರ ಬಗ್ಗೆ ಇನ್ನೊಬ್ಬರು ಆರೋಪಗಳನ್ನು ಮಾಡುವುದು ಸಹಜ. ಮುಂದೆ ಚೆನ್ನಾಗಿದ್ದು, ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುವುದು ಕೂಡ ಸಹಜ. ಬೆನ್ನ ಹಿಂದೆ ಮಾತನಾಡಿದ್ದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಆದರೆ ಬಿಗ್ ಬಾಸ್ ಒಂದು ಚಟುವಟಿಕೆ ಮೂಲಕ ಎಲ್ಲವನ್ನೂ ಈಗ ಬಯಲು ಮಾಡಿದ್ದಾರೆ. ಬೆನ್ನ ಹಿಂದೆ ಮಾತನಾಡಿದವರ ವಿಡಿಯೋವನ್ನು ಪ್ರದರ್ಶನ ಮಾಡಲಾಗಿದೆ. ಅದರಿಂದ ಎಲ್ಲ ಸ್ಪರ್ಧಿಗಳಿಗೆ ಶಾಕ್ ಆಗಿದೆ.

ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರು ಪರಮ ಆಪ್ತರಾಗಿದ್ದಾರೆ. ಆದರೆ ತಾಂಡವ್ ರಾಮ್ ಬಗ್ಗೆ ಸೌಂದರ್ಯಾ ಅವರು ಗಗನ್ ಬಳಿ ಕೆಟ್ಟದಾಗಿ ಮಾತನಾಡಿದ್ದರು. ‘ತಾಂಡವ್ ಅವರು ಈ ಮನೆಯ ಅತಿ ದೊಡ್ಡ ಮೂರ್ಖ’ ಎಂದು ಹೇಳಿದ್ದರು. ಆ ವಿಡಿಯೋವನ್ನು ಎಲ್ಲರ ಎದುರಲ್ಲಿ ಪ್ರದರ್ಶನ ಮಾಡಲಾಯಿತು. ಸೌಂದರ್ಯಾ ಅವರು ಇಷ್ಟೆಲ್ಲ ಕೆಟ್ಟದಾಗಿ ಮಾತನಾಡಿದಾಗ ಗಗನ್ ಕಿಂಚಿತ್ತೂ ವಿರೋಧ ವ್ಯಕ್ತಪಡಿಸಲಿಲ್ಲ ಎಂಬುದು ಗೊತ್ತಾದ ಬಳಿಕ ತಾಂಡವ್ ತೀವ್ರ ಬೇಸರ ಮಾಡಿಕೊಂಡರು.

Loading...

ಪ್ರಶಾಂತ್ ಮತ್ತು ಧನುಷ್ ಅವರು ಗಾನವಿ ಬಗ್ಗೆ ಮಾತನಾಡಿಕೊಂಡಿದ್ದರು. ‘ಗಾನವಿ ಡವ್, ಡ್ರಾಮಾ ಮಾಡುತ್ತಾಳೆ’ ಎಂದು ಅವರಿಬ್ಬರು ಮಾತನಾಡಿದ್ದರು. ಆ ವಿಡಿಯೋವನ್ನು ಪ್ಲೇ ಮಾಡಿದಾಗ ಗಾನವಿ ಅವರಿಗೆ ಅಚ್ಚರಿ ಆಯಿತು. ಧನುಷ್ ಅವರು ತಮ್ಮ ಬಗ್ಗೆ ಆ ರೀತಿ ಮಾತನಾಡಿದ್ದನ್ನು ಪ್ರಶ್ನಿಸಿ ಗಾನವಿ ಅವರು ಜಗಳ ಮಾಡಿದರು. ಆಗ ಮಾತಿನ ಚಕಮಕಿ ನಡೆಯಿತು.

ಈ ಮೊದಲು ಸೌಂದರ್ಯಾ ಹಾಗೂ ಯಶಸ್ ಅವರು ಆಪ್ತವಾಗಿ ಕಾಣಿಸಿಕೊಂಡಾಗ ಅವರಿಬ್ಬರ ಬಗ್ಗೆ ಪ್ರಶಾಂತ್ ಹಾಗೂ ಜಗದೀಶ್ ಅವರು ಗೊಣಗಿದ್ದರು. ‘ಅವರ ಬಗ್ಗೆ ಮಾತನಾಡಲು ಅಸಹ್ಯ ಎನಿಸುತ್ತಿದೆ’ ಎಂದು ಜಗದೀಶ್ ಅವರು ಹೇಳಿದ್ದರು. ಜಗದೀಶ್ ಅವರು ಈ ರೀತಿ ಮಾತನಾಡುತ್ತಾರೆ ಎಂಬುದನ್ನು ನಿರೀಕ್ಷಿಸಿರದ ಎಲ್ಲ ಸ್ಪರ್ಧಿಗಳಿಗೆ ಅಚ್ಚರಿ ಆಯಿತು.

ಇದನ್ನೂ ಓದಿ: ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ

ಈ ರೀತಿ ವಿಡಿಯೋಗಳನ್ನು ಪ್ರದರ್ಶನ ಮಾಡಿದ ಬಳಿಕ ಸಹ-ಸ್ಪರ್ಧಿಗಳ ಬಗ್ಗೆ ಇದ್ದ ಅಭಿಪ್ರಾಯ ಎಲ್ಲರಿಗೂ ಬದಲಾಗಿದೆ. ತಮ್ಮ ಆಪ್ತರು ಎಂದುಕೊಂಡಿದ್ದವರೇ ಬೆನ್ನ ಹಿಂದೆ ಈ ರೀತಿಯೆಲ್ಲ ಮಾತನಾಡಿಕೊಳ್ಳುತ್ತಾರೆ ಎಂಬುದು ಸ್ಪರ್ಧಿಗಳಿಗೆ ಗೊತ್ತಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲರ ವರ್ತನೆಗಳು ಬದಲಾಗುವ ಸಾಧ್ಯತೆ ಇದೆ. ಜಗಳಗಳು ಕೂಡ ಹೆಚ್ಚುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us