ಬಿಗ್ ಬಾಸ್​ಗೆ ಎಂಟ್ರಿ ಕೊಡೋ ಸ್ಪರ್ಧಿಗಳು ಇವರೇ ನೋಡಿ; ವಿಡಿಯೋದಲ್ಲೇ ರಿವೀಲ್

ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಗ್ರ್ಯಾಂಡ್ ಓಪನಿಂಗ್ ಶೂಟಿಂಗ್ ಸೆಪ್ಟೆಂಬರ್ 5ರಂದು ನಡೆಯಲಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ನೂತನ ಪ್ರೋಮೋಗಳ ಆಧಾರದ ಮೇಲೆ ಸೌಂದರ್ಯ ಶೆಟ್ಟಿ, ಆಸಿಯಾ ಫಿರ್ದೋಸ್, ಡ್ರ್ಯಾಗನ್ ಮಂಜು ಸೇರಿದಂತೆ ಪ್ರಮುಖ ಸೆಲೆಬ್ರಿಟಿ ಸ್ಪರ್ಧಿಗಳ ಹೆಸರುಗಳು ಈಗ ಬಹಿರಂಗವಾಗಿವೆ.

ಬಿಗ್ ಬಾಸ್​ಗೆ ಎಂಟ್ರಿ ಕೊಡೋ ಸ್ಪರ್ಧಿಗಳು ಇವರೇ ನೋಡಿ; ವಿಡಿಯೋದಲ್ಲೇ ರಿವೀಲ್
ಬಿಗ್ ಬಾಸ್ ಕನ್ನಡ

Updated on: Sep 05, 2026 | 7:17 AM

ಮುಖ್ಯಾಂಶಗಳು

  • ಪ್ರೋಮೋದಲ್ಲಿ ಸಿಕ್ತು ಸುಳಿವು
  • ದೊಡ್ಮನೆಗೆ ಎಂಟ್ರಿ ಕೊಡ್ತಿರೋ ಗ್ಲಾಮರಸ್ ತಾರೆಗಳು
  • ಈ ಬಾರಿ ಬಿಗ್ ಬಾಸ್‌ನಲ್ಲಿರಲಿದೆ ಅಚ್ಚರಿಯ ಆಟ

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಎಲ್ಲಾ ಸ್ಪರ್ಧಿಗಳು ದೊಡ್ಮನೆ ಒಳಗೆ ತೆರಳಲಿದ್ದು, ಅದರ ಪ್ರಸಾರ ಭಾನುವಾರ ನಡೆಯಲಿದೆ. ಈಗಾಗಲೇ ತಿಳಿಸಿರುವಂತೆ ಅಗ್ನಿಪರೀಕ್ಷೆಯಿಂದ 3 ಸ್ಪರ್ಧಿಗಳು ಬಿಗ್ ಬಾಸ್​ಗೆ ತೆರಳಲಿದ್ದಾರೆ. ಇದರ ಜೊತೆಗೆ 15 ಸೆಲೆಬ್ರಿಟಿಗಳು ಇರಲಿದ್ದಾರೆ. ಅವರು ಯಾರು ಎನ್ನುವ ಪ್ರಶ್ನೆಗೆ ಭಾಗಶಃ ಉತ್ತರ ಸಿಕ್ಕಿದೆ.

ಬಿಗ್ ಬಾಸ್​ಗೆ ಯಾರೆಲ್ಲ ಹೋಗುತ್ತಾರೆ ಎಂಬ ವಿಷಯವಾಗಿ ಕಲರ್ಸ್ ಕನ್ನಡ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಕೆಲವರ ಮುಖವನ್ನು ಭಾಗಶಃ ತೋರಿಸಲಾಗಿದ್ದು, ಇದನ್ನು ನೋಡಿಯೇ ಉತ್ತರ ಕಂಡು ಹಿಡಿಯಲಾಗಿದೆ. ಸೌಂದರ್ಯ ಶೆಟ್ಟಿ ಅವರು ಹೆಸರು ಜೋರಾಗಿ ಚರ್ಚೆಯಲ್ಲಿದೆ. ಹಿಂದಿಯ ಎಂಟಿವಿ ಸ್ಪಿಟ್ಸ್​​ವಿಲ್ಲಾದಲ್ಲಿ ಸ್ಪರ್ಧಿಸಿದ್ದ ಅವರು, ಬಿಗ್ ಬಾಸ್​ಗೆ ಬರುತ್ತಿದ್ದಾರೆ. ದೇಹದ ಮೇಲಿರೋ ಮಚ್ಚೆ ನೋಡಿ ಅನೇಕರು ಅವರನ್ನು ಕಂಡು ಹಿಡಿದಿದ್ದಾರೆ. ಬಿಗ್ ಬಾಸ್​ಗೆ ಬರೋದಕ್ಕೂ ಮೊದಲೇ ಅವರಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ.

ಇನ್ನು ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಪಾತ್ರ ಮಾಡಿದ್ದ ಆಸಿಯಾ ಫಿರ್ದೋಸ್ ಅವರು ಕೂಡ ಪ್ರೋಮೋದಲ್ಲಿದ್ದಾರೆ. ಅವರ ಕಣ್ಣನ್ನು ನೋಡಿ ಎಲ್ಲರೂ ಕಂಡು ಹಿಡಿದಿದ್ದಾರೆ. ಸಿನಿಮಾಗಳ ಮೂಲಕ ಗಮನ ಸೆಳೆದ ಡ್ರ್ಯಾಗನ್ ಮಂಜು ಅವರ ಹೆಸರು ಕೂಡ ಮುಂಚೂಣಿಯಲ್ಲಿ ಇದೆ. ತಾಂಡವ್ ರಾಮ್, ಸಂಗೀತಾ ಭಟ್ ಹೆಸರು ಕೂಡ ಕೇಳಿ ಬಂದಿದೆ.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಅಂತ ಗೊತ್ತಾಯ್ತಾ?

ಈ ಬಾರಿಯ ಬಿಗ್ ಬಾಸ್ ಮತ್ತಷ್ಟು ರಂಗೇರುವ ಎಲ್ಲಾ ಲಕ್ಷಣ ಗೋಚರವಾಗಿದೆ. ಈ ಬಾರಿ ಫ್ಲೈಟ್ ಥೀಮ್​ನೊಂದಿಗೆ ಬಿಗ್ ಬಾಸ್ ಮೂಡಿ ಬರುತ್ತಿದೆ. ವಿವಿಧ ಹಂತಗಳಲ್ಲಿ ಸ್ಪರ್ಧಿಗಳನ್ನು ಇಡುವ ಸಾಧ್ಯತೆ ಇದೆ. ಕಳೆದ ವರ್ಷ ಒಂದೇ ತಿಂಗಳಿಗೆ ಬಿಗ್ ಬಾಸ್ ಫಿನಾಲೆ ಮಾಡಲಾಗಿತ್ತು. ಈ ಬಾರಿ ಐದು ಭಾಷೆಗಳಲ್ಲಿ ಒಟ್ಟಿಗೆ ಬಿಗ್ ಬಾಸ್ ಆರಂಭ ಆಗುತ್ತಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Sat, 5 September 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us