AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ ಸೀಸನ್ 13: ಈ ವಾರ ನಾಮಿನೇಟ್ ಆದವರಿಗೆ ಕಾರಾಗೃಹ ಶಿಕ್ಷೆ

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈಗ 44 ದಿನಗಳು ಕಳೆದಿವೆ. ಈ ವಾರ ಸೋನಿಕಾ ಗೌಡ, ತಾಂಡವ್ ರಾಮ್, ಆಸಿಯಾ, ಸೌಂದರ್ಯಾ ಶೆಟ್ಟಿ, ಲಕ್ಷ್ಮಿ ಗೌಡ, ಕುಮಾರಿ ಅವರು ನಾಮಿನೇಟ್ ಆಗಿದ್ದಾರೆ. ಅವರ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13: ಈ ವಾರ ನಾಮಿನೇಟ್ ಆದವರಿಗೆ ಕಾರಾಗೃಹ ಶಿಕ್ಷೆ
Bbk 13 NominationImage Credit source: Colors Kannada
ಮದನ್​ ಕುಮಾರ್​
|

Updated on: Oct 20, 2026 | 10:42 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರದ (ಅ.20) ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಬಾರಿ ಡಿಫರೆಂಟ್ ಆಗಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಬೇರೆ ಸ್ಪರ್ಧಿಗಳ ಬೆಂಬಲದಿಂದ ತಾವು ಸೇಫ್ ಆಗಬೇಕಿತ್ತು. ಅದಕ್ಕಾಗಿ ಸ್ಪರ್ಧಿಗಳು ವಿವಿಧ ಬಗೆಯ ತಂತ್ರಗಾರಿಕೆ ಮಾಡಿದರು. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಕೆಲವರ ಲೆಕ್ಕಾಚಾರ ಕೈ ಕೊಟ್ಟಿತು. ಈ ವಾರ ಎಲಿಮಿನೇಟ್ ಆಗಲು ಆರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿದೆ.

ಸೋನಿಕಾ ಗೌಡ, ಆಸಿಯಾ, ತಾಂಡವ್ ರಾಮ್, ಸೌಂದರ್ಯಾ ಶೆಟ್ಟಿ, ಕುಮಾರಿ, ಲಕ್ಷ್ಮಿ ಗೌಡ ಅವರು ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆಗಿರುವ ಸದಸ್ಯರು ಬಿಗ್ ಬಾಸ್ ನೀಡುವ ಮುಂದಿನ ಆದೇಶದ ತನಕ ಕಾರಾಗೃಹದಲ್ಲಿ ಇರಬೇಕು ಎಂದು ತಿಳಿಸಲಾಗಿದೆ. ಕೈದಿಗಳ ರೀತಿ ಬಟ್ಟೆ ಕೊಟ್ಟು ಈ ಸ್ಪರ್ಧಿಗಳನ್ನು ಜೈಲಿಗೆ ಕಳಿಸಲಾಗಿದೆ.

ತಾವು ನಾಮಿನೇಟ್ ಆಗಿದ್ದಕ್ಕೆ ಆಸಿಯಾ ಅವರು ತುಂಬಾ ಬೇಸರ ಮಾಡಿಕೊಂಡರು. ‘ಕಳೆದ ವಾರ ಕೂಡ ನನಗೆ ಹೀಗೆಯೇ ಆಯಿತು’ ಎಂದು ಅವರು ಕಣ್ಣೀರು ಹಾಕಿದರು. ‘ಆದರೆ ಜನರು ನನ್ನ ಆಟ ನೋಡುತ್ತಾರೆ’ ಎಂದು ಅವರು ಭರವಸೆ ಕೂಡ ವ್ಯಕ್ತಪಡಿಸಿದರು. ಈ ವಾರ ಅವರು ಸೇಫ್ ಆಗುತ್ತಾರಾ ಅಥವಾ ಎಲಿಮಿನೇಟ್ ಆಗುತ್ತಾರಾ ಎಂಬುದನ್ನು ತಿಳಿಯುವ ಕೌತುಕ ಮನೆ ಮಾಡಿದೆ.

ಕುಮಾರಿ ಮತ್ತು ಲಕ್ಷ್ಮಿ ಗೌಡ ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದವರು. ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಅವರಿಗೆ ಇನ್ನೂ ಸೂಕ್ತವಾಗಿ ಸಮಯವೇ ಸಿಕ್ಕಿಲ್ಲ. ಈಗ ಅವರು ನಾಮಿನೇಟ್ ಆಗಿರುವುದರಿಂದ ಅವರು ಡೇಜಂರ್ ಝೋನ್​ನಲ್ಲಿ ಇದ್ದಾರೆ. ಹಾಗಾಗಿ ಅವರಿಗೆ ಢವಢವ ಶುರುವಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯ ಮೈಕ್ ಬೆಲೆ ಹೇಳಿದ ಸುದೀಪ್; ಈ ಪ್ರೈಸ್​ನಲ್ಲಿ ಬುಲೆಟ್ ಬೈಕ್ ಬರುತ್ತೆ

ಸೋನಿಕಾ ಕೂಡ ವೈಲ್ಡ್ ಕಾರ್ಡ್ ಸ್ಪರ್ಧಿ. ಅವರ ಆಟದ ಬಗ್ಗೆಯೂ ಕೆಲವು ಸ್ಪರ್ಧಿಗಳಿಗೆ ಅಸಮಾಧಾನ ಇದೆ. ಒಂದು ವೇಳೆ ಪ್ರೇಕ್ಷಕರಿಗೂ ಇದೇ ಅಭಿಪ್ರಾಯ ಹೆಚ್ಚಿದರೆ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗುವ ಸಾಧ್ಯತೆ ಇರುತ್ತದೆ. ಇನ್ನು, ಸೌಂದರ್ಯಾ ಶೆಟ್ಟಿ ಅವರು ಈಗತಾನೇ ತಮ್ಮ ಅಸಲಿ ಆಟ ಆರಂಭಿಸಿದ್ದಾರೆ. ಆದರೂ ಅವರ ಸ್ಥಾನ ಕೂಡ ಅಪಾಯದಲ್ಲೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ