‘ಬಿಗ್ ಬಾಸ್ ಕನ್ನಡ ಸೀಸನ್ 9’ರ (BBK 9) ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಇಂದು (ಅಕ್ಟೋಬರ್ 23) ನಡೆದಿದೆ. ಸುದೀಪ್ ಅವರು ವಿದೇಶ ಪ್ರವಾಸದಲ್ಲಿರುವ ಕಾರಣ ಬೇರೆ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ವಿವಿಧ ಹಂತಗಳಲ್ಲಿ ಈ ಪ್ರಕ್ರಿಯೆ ನಡೆದಿದೆ. ಸುದೀಪ್ ಇಲ್ಲದೆ ವೀಕೆಂಡ್ ಕಾರ್ಯಕ್ರಮ ನಡೆದಿದ್ದು ಈ ಸೀಸನ್ನಲ್ಲಿ ಇದೇ ಮೊದಲು. ಬಿಗ್ ಬಾಸ್ನಲ್ಲಿ ಈ ವಾರ ಮಯೂರಿ ಔಟ್ ಆಗಿದ್ದಾರೆ.
ಈ ವಾರ ಮಯೂರಿ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರ್ಗಿ, ಕಾವ್ಯಶ್ರೀ ಗೌಡ, ನೇಹಾ ಗೌಡ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ ಹಾಗೂ ದಿವ್ಯಾ ಉರುಡುಗ ನಾಮಿನೇಟ್ ಆಗಿದ್ದರು. ಈ ಪೈಕಿ ದಿವ್ಯಾ ಉರುಡುಗ ಅವರು ಮೊದಲು ಸೇವ್ ಆದರು. ನಂತರ, ರೂಪೇಶ್ ಶೆಟ್ಟಿ, ಪ್ರಶಾಂತ್, ಆರ್ಯವರ್ಧನ್, ಸಾನ್ಯಾ, ಕಾವ್ಯಶ್ರೀ ಸೇವ್ ಆದರು. ಕೊನೆಯ ರೌಂಡ್ನಲ್ಲಿ ಮಯೂರಿ ಹಾಗೂ ನೇಹಾ ಇದ್ದರು. ಆ ಪೈಕಿ ಮಯೂರಿ ಔಟ್ ಆದರು. ಅವರು ಸದಾ ಮಗುವಿನ ಚಿಂತೆಯಲ್ಲಿ ಇದ್ದರು. ಮನೆಯಿಂದ ಹೊರಹೋಗಬೇಕು ಎಂಬುದು ಅವರ ಆಸೆ ಆಗಿತ್ತು. ಇದು ಅವರಿಗೆ ಮುಳುವಾಗಿದೆ.
ಕಿಚ್ಚ ಸುದೀಪ್ ಅವರು ಪತ್ನಿ ಪ್ರಿಯಾ ಜತೆ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇಂದು (ಅಕ್ಟೋಬರ್ 23) ಭಾರತ ಹಾಗೂ ಪಾಕಿಸ್ತಾನ ನಡುವಣ ಮ್ಯಾಚ್ ವೀಕ್ಷಿಸಿದ್ದಾರೆ ಈ ದಂಪತಿ. ಇಂದಿನ ಎಪಿಸೋಡ್ ಆರಂಭಕ್ಕೂ ಮೊದಲು ಸುದೀಪ್ ಬರುವುದಿಲ್ಲ ಎಂಬ ವಿಚಾರವನ್ನು ಘೋಷಿಸಲಾಯಿತು. ‘ಸುದೀಪ್ ಅವರು ವಿದೇಶ ಪ್ರಯಾಣದಲ್ಲಿ ಇದ್ದಾರೆ. ಹೀಗಾಗಿ, ಅವರು ಇಂದಿನ ಕಾರ್ಯಕ್ರಮ ನಡೆಸುವುದಿಲ್ಲ. ಆದರೆ, ಎಲಿಮಿನೇಷನ್ ಪ್ರಕ್ರಿಯೆ ಇರುತ್ತದೆ’ ಎಂದು ಘೋಷಿಸಲಾಯಿತು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮಯೂರಿ ಎಲಿಮಿನೇಟ್; ನಟಿ ಹೊರಹೋಗಲು ಇದುವೇ ಕಾರಣ
ಸುದೀಪ್ ಬರುತ್ತಿಲ್ಲ ಎಂಬ ವಿಚಾರ ಕೇಳಿ ಮನೆ ಮಂದಿ ಬೇಸರಗೊಂಡರು. ವಿಡಿಯೋ ಕಾಲ್ ಮೂಲಕ ಅವರು ಜಾಯಿನ್ ಆಗಬಹುದು ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡರು. ಕಳೆದ ಸೀಸನ್ಲ್ಲಿ ಸುದೀಪ್ಗೆ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಅವರು ಕೆಲ ಎಪಿಸೋಡ್ ನಡೆಸಿಕೊಟ್ಟಿರಲಿಲ್ಲ. ಕಳೆದ ಸೀಸನ್ನ ಸ್ಪರ್ಧಿಗಳಾದ ಪ್ರಶಾಂತ್ ಸಂಬರ್ಗಿ ಹಾಗೂ ದಿವ್ಯಾ ಉರುಡುಗ ಈ ಬಗ್ಗೆ ಸ್ಪಷ್ಟನೆ ನೀಡಿದರು. ‘ಸುದೀಪ್ ಬರದೇ ಹಲವು ಎಪಿಸೋಡ್ ನಡೆದಿದೆ. ಈ ವಾರ ಅವರು ಬರಲ್ಲ ಅಂದ್ರೆ ಬರಲ್ಲ’ ಅಂದ್ರು ದಿವ್ಯಾ.
Published On - 9:49 pm, Sun, 23 October 22