‘ನನಗೆ ಇವರ ಮೇಲೆ ಫೀಲಿಂಗ್​ ಇದೆ’: ನಮ್ರತಾ ಮೇಲಿನ ಪ್ರೀತಿಯನ್ನು ನೇರವಾಗಿ ಹೇಳಿಕೊಂಡ ಸ್ನೇಹಿತ್​

|

Updated on: Dec 03, 2023 | 7:44 AM

ಆಟದ ವಿಚಾರದಲ್ಲಿ ಸ್ನೇಹಿತ್​ ಗೌಡ ಹಿಂದುಳಿದಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅವರು ನಿರೀಕ್ಷಿತ ಮಟ್ಟದಲ್ಲಿ ಪರ್ಫಾರ್ಮೆನ್ಸ್​ ನೀಡುತ್ತಿಲ್ಲ. ಸದ್ಯಕ್ಕಂತೂ ಅವರು ಡೇಂಜರ್​ ಜೋನ್​ನಲ್ಲಿ ಇದ್ದಾರೆ. ಹಾಗಿದ್ದರೂ ಕೂಡ ಪ್ರೀತಿ-ಪ್ರೇಮದ ಕಡೆಗೆ ಅವರು ಹೆಚ್ಚು ಗಮನ ನೀಡುತ್ತಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಅವರೀಗ ಓಪನ್​ ಆಗಿ ಹೇಳಿಕೊಂಡಿದ್ದಾರೆ.

‘ನನಗೆ ಇವರ ಮೇಲೆ ಫೀಲಿಂಗ್​ ಇದೆ’: ನಮ್ರತಾ ಮೇಲಿನ ಪ್ರೀತಿಯನ್ನು ನೇರವಾಗಿ ಹೇಳಿಕೊಂಡ ಸ್ನೇಹಿತ್​
ಸ್ನೇಹಿತ್​ ಗೌಡ, ನಮ್ರತಾ ಗೌಡ
Follow us on

ಬಿಗ್​ ಬಾಸ್​ ರಿಯಾಲಿಟಿ ಶೋನ ಪ್ರತಿ ಸೀಸನ್​ನಲ್ಲಿ ಪ್ರೇಮಕಥೆಗಳು ಹುಟ್ಟಿಕೊಳ್ಳುತ್ತವೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಕೂಡ ಇದಕ್ಕೆ ಹೊರತಾಗಿಲ್ಲ. ಸ್ನೇಹಿತ್​ ಗೌಡ ಅವರು ನಮ್ರತಾ ಗೌಡ (Namratha Gowda) ಮೇಲೆ ಫೀಲಿಂಗ್ಸ್​ ಇಟ್ಟುಕೊಂಡಿದ್ದಾರೆ. ಅದನ್ನು ಅವರು ನೇರವಾಗಿ ಹೇಳಿಕೊಂಡಿದ್ದಾರೆ. ಹಾಗೆ ನೋಡಿದರೆ, ನಮ್ರತಾ ಕಡೆಯಿಂದಲೇ ಇದಕ್ಕೆಲ್ಲ ಗ್ರೀನ್​ ಸಿಗ್ನಲ್​ ಸಿಕ್ಕಿಲ್ಲ. ಹಾಗಿದ್ದರೂ ಕೂಡ ತಮಗೆ ನಮ್ರತಾ ಗೌಡ ಮೇಲೆ ಇರುವ ಫೀಲಿಂಗ್​ ಯಾವ ರೀತಿಯದ್ದು ಎಂದು ಸ್ನೇಹಿತ್​ ಗೌಡ (Snehit Gowda) ಅವರು ವಿನಯ್​ ಗೌಡ ಬಳಿ ವಿವರಿಸಿದ್ದಾರೆ. ಅದನ್ನು ಕೇಳಿ ವಿನಯ್​ ಅವರು ಅಚ್ಚರಿಪಟ್ಟಿದ್ದಾರೆ.

ಸ್ನೇಹಿತ್​ ಗೌಡ ಹೇಳಿದ್ದೇನು?

‘ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕ್​ ಆಗಲಿಲ್ಲ. ಅದಾದ ಬಳಿಕ ಈಗಲೇ ಆಗಿರುವುದು. ಬಿಗ್​ ಬಾಸ್​ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜೊತೆ ನಾನು ಫ್ರೆಂಡ್​ಗಿಂತಲೂ ಚೂರು ಜಾಸ್ತಿ ಅಟ್ಯಾಚ್​ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು’ ಎಂದು ಸ್ನೇಹಿತ್​ ಗೌಡ ಹೇಳಿದ್ದಾರೆ.

ಇದನ್ನೂ ಓದಿ: ‘ವಿನಯ್​ಗೆ ಕ್ಯಾಪ್ಟನ್​ ಆಗುವ ಅರ್ಹತೆ ಇಲ್ಲ’; ನಮ್ರತಾ ಮಾತಿನಿಂದ ನೊಂದುಕೊಂಡ ವಿನಯ್​ ಗೌಡ

‘ಆಮೇಲೆ ಒಂದು ಹಂತದ ನಂತರ ಅನಿಸಿತು. ನನಗೆ ಇವರ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ. ಅದಾದ ಬಳಿಕ ಅವರಿಗೆ ನಾನು ಹೇಳಿದೆ. ಅವರ ಜೊತೆ ನನಗೆ ಮುಂದಿನ ಹತ್ತು ವರ್ಷಗಳು ಕಾಣುತ್ತಿವೆ. ನಮ್ಮ ಅಪ್ಪ-ಅಮ್ಮನ ಜೊತೆ ಅವರು ಕೂಡ ಕಾಣುತ್ತಾರೆ’ ಎಂದು ಸ್ನೇಹಿತ್​ ಹೇಳಿದ್ದಾರೆ. ಇದಕ್ಕೆಲ್ಲ ನಮ್ರತಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಬಿಗ್​ ಬಾಸ್​ನಲ್ಲಿ ಹುಟ್ಟುವ ಪ್ರೀತಿಯನ್ನು ಕೆಲವೊಮ್ಮೆ ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನೂ ಕೆಲವೊಮ್ಮೆ ಅದೇ ಪ್ರೀತಿಯು ಮದುವೆ ಹಂತಕ್ಕೆ ಹೋಗಿದ್ದು ಕೂಡ ಉಂಟು.

ಇದನ್ನೂ ಓದಿ: ತಂಡ ಸೋತರೂ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆಯಾದ ನಮ್ರತಾ ಗೌಡ; ಏನಿದು ಅದೃಷ್ಟ?

ನಮ್ರತಾ ಗೌಡ ಅವರ ಫೋಟೋ ಪಕ್ಕದಲ್ಲಿ ತಮ್ಮ ಫೋಟೋವನ್ನು ಇರಿಸಿ ಸ್ನೇಹಿತ್ ಗೌಡ ಖುಷಿಪಟ್ಟಿದ್ದಾರೆ. ಕಾರ್ತಿಕ್​ ಮಹೇಶ್​ ಮತ್ತು ಸಂಗೀತಾ ಶೃಂಗೇರಿ ನಡುವೆಯೂ ಆಪ್ತತೆ ಬೆಳೆದಿದೆ. ಹಾಗೆಯೇ ತನಿಶಾ ಕುಪ್ಪಂಡ ಮತ್ತು ವರ್ತೂರು ಸಂತೋಷ್​ ಸಹ ಕ್ಲೋಸ್​ ಆಗಿದ್ದಾರೆ. ಕಾರ್ತಿಕ್​ ಮತ್ತು ಸಂಗೀತಾ ಅವರ ಜೋಡಿಯನ್ನು ಡುಬಾಕ್​ ಜೋಡಿ ಎಂದು ವಿನಯ್​ ಗೌಡ ಕರೆದಿದ್ದಾರೆ. ಆದರೆ ನಮ್ರತಾ ಮತ್ತು ಸ್ನೇಹಿತ್​ ಜೋಡಿಯ ಬಗ್ಗೆ ಅವರು ಯಾವುದೇ ಕಮೆಂಟ್​ ಮಾಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.