
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada), ವಾರಕ್ಕೆ ಕಾಲಿರಿಸಿದೆ. ಮನೆಯಿಂದ ಕೆಲವಾರು ಮಂದಿ ಎಲಿಮಿನೇಟ್ ಆಗಿ ಮನೆಗೆ ಹೋಗಿದ್ದಾರೆ. ಒಟ್ಟು ಐದು ಮಂದಿ ಹೊಸಬರು ವೈಲ್ಡ್ ಕಾರ್ಡ್ ಮೂಲಕ ಹೊರಗೆ ಬಂದಿದ್ದಾರೆ. ಮೊದಲು ರಘು, ರಿಶಾ ಮತ್ತು ಸೂರಜ್ ಅವರು ಬಂದರು. ಈಗ ಅತಿಥಿಗಳ ಸೋಗಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಬಂದಿದ್ದಾರೆ. ಆದರೆ ರಜತ್ ಅವರು ಬಂದೊಡನೆ ಅವರೊಡನೆ ಇನ್ನೂ ಕೆಲವು ಸ್ಪರ್ಧಿಗಳು ಸೇರಿಕೊಂಡು ಸುದೀಪ್ ಎದುರು ಕೈ ಮುಗಿದು ಬೇಡಿಕೊಂಡಿದ್ದಾರೆ. ಆದರೆ ಕಾರಣವೇನು?
ಸುದೀಪ್ ಅವರು ಪ್ರತಿ ವಾರದಂತೆ ಭಾನುವಾರದ ಶೋ ಅನ್ನು ತಮಾಷೆಯಾಗಿ ನಡೆಸಿ ಕೊಡುತ್ತಿದ್ದರು. ಆರಂಭದಲ್ಲಿ ಫೋನ್ ಕೊಟ್ಟು ಸ್ಪರ್ಧಿಗಳಿಗೆ ಸಹ ಸ್ಪರ್ಧಿಗಳ ಮನೆಗೆ ನಕಲಿ ಕರೆ ಮಾಡುವಂತೆ ಹೇಳಿದರು. ಅದರಂತೆ ರಜತ್, ಗಿಲ್ಲಿ, ಕಾವ್ಯಾ ಇನ್ನೂ ಕೆಲವರು ಕರೆ ಮಾಡಿ ಮಾತನಾಡಿದರು. ಅದೆಲ್ಲ ಆದ ಬಳಿಕ ಇದ್ದಕ್ಕಿದ್ದಂತೆ ರಜತ್, ಮಾಳು, ಧನುಶ್ ಹಾಗೂ ಇನ್ನೂ ಕೆಲವರು ಎದ್ದವರೇ ಕಿವಿ ಹಿಡಿದುಕೊಂಡು ತಪ್ಪಾಯ್ತು ಎಂದು ಕೇಳುತ್ತಾ, ಸುದೀಪ್ ಅವರಿಗೆ ಕೈ ಮುಗಿದರು. ಸುದೀಪ್ ಮೊದಲಿಗೆ ಏಕೆ? ಏನಾಯ್ತು? ಎಂದು ಕೇಳಿದರಾದರೂ ಬಳಿಕ ಅವರಿಗೂ ಸಹ ವಿಷಯ ಅರ್ಥವಾಯ್ತು.
ಅಸಲಿಗೆ ಬಿಗ್ಬಾಸ್ ಮನೆಯಲ್ಲಿ ಸ್ಮೋಕಿಂಗ್ ಏರಿಯಾ ಅನ್ನು ಬಂದ್ ಮಾಡಲಾಗಿದೆ. ಸ್ಮೋಕಿಂಗ್ ಏರಿಯಾ ಬಂದ್ ಆಗಲು ಕಾರಣ ಆಗಿರುವುದು ಸುದೀಪ್ ಅವರೇ. ಕೆಲ ವಾರಗಳ ಹಿಂದೆ ಕಾಕ್ರೂಚ್ ಸುಧಿ ಅವರು ಗಿಲ್ಲಿಗೆ ಕಳಪೆ ನೀಡಿದ್ದರು. ಏಕೆ ಎಂದು ಕೇಳಿದಾಗ ಜೈಲಿಗೆ ಹೋದರೆ ಸಿಗರೇಟು ಸೇದಲು ಆಗುವುದಿಲ್ಲ ಹಾಗಾಗಿ ಗಿಲ್ಲಿಗೆ ಕಳಪೆ ಕೊಟ್ಟು ನಾನು ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಂಡೆ ಎಂದಿದ್ದರು. ಆಗ ಸುದೀಪ್ ಅವರು, ಕಾರಣವಲ್ಲದ ಕಾರಣಕ್ಕೆ ಕಳಪೆ ನೀಡಿದ್ದರಿಂದ ಸುಧಿ ಅವರಿಗೆ ಶಿಕ್ಷೆಯಾಗಿ ಮೂರು ವಾರಗಳ ಕಾಲ ಸ್ಮೋಕಿಂಗ್ ಏರಿಯಾ ಅನ್ನು ಬಂದ್ ಮಾಡಿಸಿದ್ದರು.
ಇದನ್ನೂ ಓದಿ:‘ದಮ್ಮಯ್ಯ ಬಿಟ್ಟುಬಿಡಿ’; ಸುದೀಪ್ ಎದುರು ಬೇಡಿಕೊಂಡ ರಜತ್
ಸುದೀಪ್ ಅವರ ಮಾತಿನಂತೆ ಸ್ಮೋಕಿಂಗ್ ಏರಿಯಾ ಅನ್ನು ಬಂದ್ ಮಾಡಲಾಗಿದ್ದು, ಇದೀಗ ರಜತ್ ಅವರು ಬಿಗ್ಬಾಸ್ ಮನೆಗೆ ಬಂದಿದ್ದು ಅವರಿಗೆ ಸ್ಮೋಕಿಂಗ್ ಏರಿಯಾ ಬೇಕಾಗಿದೆ. ಮಾತ್ರವಲ್ಲದೆ ಮಾಳು, ಧನುಶ್ ಇನ್ನೂ ಕೆಲವರೂ ಸ್ಮೋಕಿಂಗ್ ಏರಿಯಾ ಅನ್ನು ಬಳಸುತ್ತಾರೆ. ಅದನ್ನು ಮತ್ತೆ ತೆರೆಯುವಂತೆ ಇದೀಗ ಸುದೀಪ್ ಅವರ ಬಳಿ ಸ್ಪರ್ಧಿಗಳು ಮನವಿ ಮಾಡಿದರು. ಸ್ಪರ್ಧಿಗಳು ಮನವಿ ಮಾಡಿದಾಗ, ಸುದೀಪ್ ಅವರು, ‘ನಮಗೆ ನಿಮ್ಮ ಆರೋಗ್ಯ ಮುಖ್ಯ’ ಎಂದರು. ಬಳಿಕ, ಈ ಎಪಿಸೋಡ್ ಮುಗಿದ ಬಳಿಕ ಮಲಗುವ ಮುಂಚೆ ಎಲ್ಲ ಮಹಿಳಾ ಸ್ಪರ್ಧಿಗಳ ಬಳಿ ಹೋಗಿ ಅವರನ್ನು ಕೇಳಿ ಅವರು ವೋಟ್ ಹಾಕಲಿ ನಿಮ್ಮ ಪರವಾಗಿ ವೋಟ್ ಬಂದರೆ ಮತ್ತೆ ಸ್ಮೋಕಿಂಗ್ ಜೋನ್ ತೆಗೆಯುತ್ತೇವೆ ಎಂದರು. ನೋಡಬೇಕು ಮತ ಯಾರ ಕಡೆಗೆ ಬರುತ್ತದೆ ಎಂದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ