AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಧಿ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟ ಕರ್ಣ; ದೊಡ್ಡ ಟ್ವಿಸ್ಟ್

ಕರ್ಣ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ. ಕರ್ಣ ನಿಧಿಗೆ ಸತ್ಯ ಬಯಲು ಮಾಡಿದ್ದಾನೆ. ತಾನು ನಿತ್ಯಾಳನ್ನು ಮದುವೆಯಾಗಿಲ್ಲ, ನಿತ್ಯಾಳ ಮಗು ತೇಜಸ್‌ನದ್ದು ಎಂದು ಕರ್ಣ ಹೇಳಿದ್ದಾನೆ. ಇದರಿಂದ ಬೇಸರದಲ್ಲಿದ್ದ ನಿಧಿಗೆ ಖುಷಿಯಾಗಿದೆ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಈ ಘಟನೆ ನಿಧಿ ಅಭಿಮಾನಿಗಳಿಗೆ ಸಂತಸ ತಂದಿದೆ. ಕರ್ಣ-ನಿಧಿ ಮದುವೆಗೆ ದಾರಿ ಸುಗಮವಾಗಿದೆ.

ನಿಧಿ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟ ಕರ್ಣ; ದೊಡ್ಡ ಟ್ವಿಸ್ಟ್
ಭವ್ಯಾ-ಕಿರಣ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 01, 2025 | 8:04 AM

Share

‘ಕರ್ಣ’ ಧಾರಾವಾಹಿಯಲ್ಲಿ (Karna Serial) ಯಾರೂ ಊಹಿಸದ ಘಟನೆ ಒಂದು ನಡೆದಿತ್ತು. ಕರ್ಣ ಪ್ರೀತಿ ಮಾಡಿದ್ದು ನಿಧಿಯನ್ನು. ಆದರೆ, ಆತ ಮದುವೆ ಆಗಿದ್ದು ನಿತ್ಯಾಳನ್ನು. ಇದಕ್ಕೆ ಕರ್ಣನ ತಂದೆ ರಮೇಶ್ ಕಾರಣ. ನಿತ್ಯಾ ಹಾಗೂ ಕರ್ಣನ ಮದುವೆ ನಂತರದಲ್ಲಿ ನಿಧಿ ಸಾಕಷ್ಟು ಬೇಸರ ಮಾಡಿಕೊಂಡಿದ್ದಳು. ಆದರೆ, ಈಗ ನಿಧಿಗೆ ಸತ್ಯ ಗೊತ್ತಾಗುವ ಸಮಯ. ನಿಧಿಗೆ ಕರ್ಣನು ಸತ್ಯ ಹೇಳಿ ಬಿಟ್ಟಿದ್ದಾನೆ. ಈ ಪ್ರೋಮೋನ ಜೀ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನಿಧಿ ಅಭಿಮಾನಿಗಳಿಗೆ ನಿಜಕ್ಕೂ ಖುಷಿ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ನಿಧಿಯು ಗಂಭಿರವಾಗಿ ಕರ್ಣನ ಪ್ರೀತಿ ಮಾಡಿದ್ದಳು. ಪ್ರೀತಿ ಹೊಸ ತಿರುವು ಪಡೆದುಕೊಳ್ಳುತ್ತಿದೆ ಎನ್ನುವಾಗಲೇ ನಿರ್ದೇಶಕರು ಯಾರೂ ಊಹಿಸದ ಟ್ವಿಸ್ಟ್ ಕೊಟ್ಟರು. ನಿತ್ಯಾ ಪ್ರೀತಿ ಮಾಡುತ್ತಿದ್ದ ತೇಜಸ್ ಮದುವೆಯಿಂದ ಓಡಿ ಹೋಗಿದ್ದ. ಈ ಕಾರಣದಿಂದ ನಿತ್ಯಾಳು ಕರ್ಣನ ಮದುವೆ ಆಗಬೇಕಾಯಿತು. ಇದು ನಿಧಿಗೆ ಹಾಗೂ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಈಗ ಕರ್ಣನ ನಿಜ ಹೇಳುವ ಸಮಯ ಬಂದಿದೆ.

ನಿತ್ಯಾಳ ಹೊಟ್ಟೆಯಲ್ಲಿ ಮಗು ಇದೆ. ಇದಕ್ಕೆ ತಂದೆ ತೇಜಸ್. ಅಕ್ಕ ಪ್ರೆಗ್ನೆಂಟ್ ಎಂಬ ವಿಷಯ ನಿಧಿಗೆ ಗೊತ್ತಾಗಿದ್ದು, ಆಕೆ ಶಾಕ್ಗೆ ಒಳಗಾಗಿದ್ದಾಳೆ. ಆಕೆ ಸಾಕಷ್ಟು ಬೇಸರ ಮಾಡಿಕೊಳ್ಳುತ್ತಾ ಇದ್ದಾಳೆ. ಇದರ ಬಳಿಕವೂ ಕರ್ಣನಿಗೆ ಸತ್ಯ ಮುಚ್ಚಿಡಲು ಸಾಧ್ಯವಾಗಲೇ ಇಲ್ಲ. ಹೀಗಾಗಿ, ಆತ ನಿಜ ಹೇಳುವ ಕೆಲಸ ಮಾಡಿದ್ದಾನೆ. ನಿತ್ಯಾಳ ಬಳಿ ಒಪ್ಪಿಗೆ ಪಡೆದೇ ಈ ಕೆಲಸ ಮಾಡಿದ್ದಾನೆ.

View this post on Instagram

A post shared by Zee Kannada (@zeekannada)

‘ನಾನು ನಿತ್ಯಾಗೆ ತಾಳಿ ಕಟ್ಟಲೇ ಇಲ್ಲ. ಆಕೆಯ ಹೊಟ್ಟೆಯಲ್ಲಿರೋದು ನನ್ನ ಮಗು ಅಲ್ಲ. ಅದಕ್ಕೆ ತಂದೆ ತೇಜಸ್ ಕಾರಣ’ ಎಂದು ಕರ್ಣನು ನಿಧಿಗೆ ಹೇಳುತ್ತಾನೆ. ಈ ವಿಷಯ ಕೇಳಿ ನಿಧಿಗೆ ಸಂಭ್ರಮ ತಾರಕಕ್ಕೇರಿದೆ. ಸದ್ಯದಲ್ಲೇ ಈ ವಿಷಯವನ್ನು ಧಾರಾವಾಹಿಯಲ್ಲಿ ತೋರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಅಣ್ಣಯ್ಯ’-‘ಕರ್ಣ’ ‘ಮಹಾಸಂಗಮ’ದಲ್ಲಿ ಮಹಾ ತಿರುವು; ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿದೋಯ್ತು

ಇಷ್ಟು ದಿನ ನಿಧಿ ಅಭಿಮಾನಿಗಳು ಬೇಸರದಲ್ಲಿ ಇದ್ದರು. ಕರ್ಣ ಹಾಗೂ ನಿಧಿ ಮದುವೆ ಆಗಬೇಕು ಎಂದು ಎಲ್ಲರೂ ಬಯಸಿದ್ದರು. ಆ ಘಟನೆ ಶೀಘ್ರವೇ ನಡೆಯುವ ಸಾಧ್ಯತೆ ಇದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ