ಮತ್ತೊಬ್ಬರಿಗೆ ಛತ್ರಿ ಆಗಬೇಡಿ’: ಕಿಚ್ಚ ಖಾರವಾಗಿ ಹೇಳಿದ್ದು ಯಾರಿಗೆ?

Bigg Boss Kannada 12: ಮುಂದಿನ ವಾರ ಬಿಗ್​​ಬಾಸ್ ಫಿನಾಲೆ ಇದೆ. ಮನೆಯಲ್ಲಿರುವ ಸ್ಪರ್ಧಿಗಳಿಗೆ ಪ್ರತಿ ಕ್ಷಣವೂ ಮುಖ್ಯವಾಗಿರುತ್ತದೆ. ತಮ್ಮ ತನ ತೋರಿಸಲು, ತಮ್ಮ ಆಟ ಆಡಲು. ತಮ್ಮ ವ್ಯಕ್ತಿತ್ವದ ಪ್ರದರ್ಶನ ಮಾಡಲು. ಆದರೆ ಸ್ಪರ್ಧಿಗಳು ಬೇರೆಯವರಿಗಾಗಿ ಆಡಲು ಶುರು ಮಾಡಿದರೆ ಅಥವಾ ಬೇರೆಯವರ ನೆರಳಿನಲ್ಲಿ ಇರಲು ಶುರು ಮಾಡಿದರೆ. ಇದನ್ನು ‘ಮತ್ತೊಬ್ಬರಿಗೆ ಛತ್ರಿ ಆಗುವುದು’ ಎಂದು ಕರೆದಿದ್ದಾರೆ ಕಿಚ್ಚ ಸುದೀಪ್.

ಮತ್ತೊಬ್ಬರಿಗೆ ಛತ್ರಿ ಆಗಬೇಡಿ’: ಕಿಚ್ಚ ಖಾರವಾಗಿ ಹೇಳಿದ್ದು ಯಾರಿಗೆ?
Kichchana Sudeep

Updated on: Jan 10, 2026 | 11:23 PM

ಬಿಗ್​​ಬಾಸ್ (Bigg Boss) ಮನೆಯಲ್ಲಿ ಎಂಟು ಜನ ಸ್ಪರ್ಧಿಗಳಿದ್ದಾರೆ. ಭಾನುವಾರಕ್ಕೆ ಆ ಸಂಖ್ಯೆ 7ಕ್ಕೆ ಇಳಿಯಲಿದೆ. ಮುಂದಿನ ವಾರ ಫಿನಾಲೆ ವಾರವಾಗಿದ್ದು ಫಿನಾಲೆ ವಾರದ ಮಧ್ಯದಲ್ಲೊಬ್ಬರು ಮಿಡ್ ವೀಕ್ ಎಲಿಮಿನೇಷನ್ ಸಹ ಆಗಲಿದ್ದಾರೆ. ಹೀಗಿರುವಾಗ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳಿಗೆ ಪ್ರತಿ ಕ್ಷಣವೂ ಮುಖ್ಯವಾಗಿರುತ್ತದೆ. ತಮ್ಮ ತನ ತೋರಿಸಲು, ತಮ್ಮ ಆಟ ಆಡಲು. ತಮ್ಮ ವ್ಯಕ್ತಿತ್ವದ ಪ್ರದರ್ಶನ ಮಾಡಲು. ಆದರೆ ಸ್ಪರ್ಧಿಗಳು ಬೇರೆಯವರಿಗಾಗಿ ಆಡಲು ಶುರು ಮಾಡಿದರೆ ಅಥವಾ ಬೇರೆಯವರ ನೆರಳಿನಲ್ಲಿ ಇರಲು ಶುರು ಮಾಡಿದರೆ. ಇದನ್ನು ‘ಮತ್ತೊಬ್ಬರಿಗೆ ಛತ್ರಿ ಆಗುವುದು’ ಎಂದು ಕರೆದಿದ್ದಾರೆ ಕಿಚ್ಚ ಸುದೀಪ್.

ಶನಿವಾರದ ಎಪಿಸೋಡ್​​ ನಡೆಸಿಕೊಟ್ಟ ಸುದೀಪ್, ಬಿಗ್​ವಾಸ್​​ನಲ್ಲಿ ಸ್ಪರ್ಧಿಗಳು ಇಲ್ಲಿಯವರೆಗೆ ಆಡಿಕೊಂಡು ಬಂದಿರುವುದು, ಈ ವಾರ ಕೆಲವರು ಆಡಿದ ರೀತಿ, ಮುಂದಿನ ವಾರ ಆಡಬೇಕಿರುವ ರೀತಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲವು ಸ್ಪರ್ಧಿಗಳಿಗೆ ಸೂಕ್ಷ್ಮವಾಗಿ ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡಿದರು. ಈ ವೇಳೆ ‘ಮತ್ತೊಬ್ಬರಿಗೆ ಛತ್ರಿ ಆಗುವುದು’ ಎಂಬ ಸಲಹೆಯನ್ನು ಮುಖ್ಯವಾಗಿ ಒಬ್ಬ ಸ್ಪರ್ಧಿಗೆ ನೀಡಿದರು ಅದುವೇ ಕಾವ್ಯಾ.

ಕಾವ್ಯಾ ಅವರು ಬಿಗ್​​ಬಾಸ್ ಫಿನಾಲೆಯ ವಾರದ ವರೆಗೆ ಬಂದಿದ್ದಾರೆ ಆದರೆ ಈಗಲೂ ಸಹ ಅವರನ್ನು ಪ್ರೇಕ್ಷಕರು ಮಾತ್ರವಲ್ಲ ಮನೆಯ ಸದಸ್ಯರು ಸಹ ಗುರುತಿಸುವುದು ಗಿಲ್ಲಿಯ ಕಾರಣಕ್ಕೆ. ಗಿಲ್ಲಿ ಇಂದಾಗಿಯೇ ಕಾವ್ಯಾ ಅವರು ಇಷ್ಟು ದೂರ ಬಂದಿದ್ದಾರೆ. ಯಾರದ್ದಾದರೂ ನೆರವು ಇಲ್ಲದಿದ್ದರೆ ಅವರಿಗೆ ಸ್ವಂತವಾಗಿ ಆಡಲು ಬಾರದು ಎಂಬ ಅಭಿಪ್ರಾಯ ಮೂಡಿದೆ. ಈ ವಾರ ಅಶ್ವಿನಿ ಜೊತೆ ಟಾಸ್ಕ್ ಆಡುವಾಗ ಇಡೀ ಮನೆಯ ಮಂದಿ ಕಾವ್ಯಾಗೆ ಬೆಂಬಲ ನೀಡುತ್ತಿದ್ದರು. ಕಾವ್ಯಾ ಅದನ್ನು ಎಂಜಾಯ್ ಸಹ ಮಾಡಿದರು. ಈ ಬಗ್ಗೆ ಅಶ್ವಿನಿ ಅವರು ಸುದೀಪ್ ಎದುರು ಹೇಳಿದರು. ಆದರೆ ಕಾವ್ಯಾ ಅದನ್ನು ಅಲ್ಲಗಳೆದರು.

ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್​ಬಾಸ್ ರ್ಯಾಪ್ ಸಾಂಗ್

ಆಗ ಮಾತನಾಡಿದ ಕಿಚ್ಚ, ‘ಕಾವ್ಯಾ ನೀವು ಒಳ್ಳೆಯ ಆಟಗಾರ್ತಿ. ಆಡದೆ ಇಲ್ಲಿಯವರೆಗೆ ಬರಲು ಸಾಧ್ಯವಿಲ್ಲ. ಆದರೆ ನೀವು ಕಾಣಿಸಿಕೊಂಡಿಲ್ಲ ಅಥವಾ ನಿಮ್ಮನ್ನು ಕಾಣಿಸಿಕೊಳ್ಳಲು ಬಿಟ್ಟಿಲ್ಲ. ‘ಮತ್ತೊಬ್ಬರಿಗೆ ಛತ್ರಿ ಆಗೋದು ಬೇಡ’. ಎಲ್ಲವೂ ಸುಲಭವಾಗಿ ಇದ್ದಾಗ ನಿಮ್ಮತನ ಅದರಲ್ಲಿ ವ್ಯಕ್ತ ಆಗುವುದಿಲ್ಲ. ಅಸಲಿಗೆ ನೀವು ಅಶ್ವಿನಿ ಅವರಿಗೆ ಥ್ಯಾಂಕ್ಸ್ ಹೇಳಬೇಕು. ಏಕೆಂದರೆ ಅವರು ನಿಮಗೆ ಸವಾಲು ಹಾಕಿದರು. ನಿಮ್ಮತನ ಹೊರಗೆ ಬರುವಂತೆ ಮಾಡಿದರು. ಸವಾಲು ಸ್ವೀಕಾರ ಮಾಡುವಂತೆ ಮಾಡಿದರು. ನಿಮಗೆ ಚಾಲೆಂಜ್ ಕೊಟ್ಟರು’ ಎಂದರು ಸುದೀಪ್. ಧನುಶ್ ಅವರಿಗೂ ಇದೇ ಮಾತು ಅನ್ವಯ ಆಗುತ್ತದೆ ಎಂದರು ಕಿಚ್ಚ.

ರಕ್ಷಿತಾಗೂ ಸಹ ತುಸು ಕ್ಲಾಸ್ ತೆಗೆದ ಸುದೀಪ್, ‘ಬೇರೆಯವರ ಆಟವನ್ನು ನೀವು ಆಡುವುದು ಬೇಡ. ಅವರ ಆಟವನ್ನು ಅವರು ಆಡಲು ಬಲ್ಲರು’ ಎಂದರು. ರಕ್ಷಿತಾ, ಗಿಲ್ಲಿ ಮತ್ತು ರಘು ಬಗ್ಗೆ ಅತೀವ ಆತ್ಮೀಯತೆ ಬೆಳೆಸಿಕೊಂಡು, ಅದರಿಂದ ಬೇರೆಯವರನ್ನು ಅವರಿಂದ ದೂರ ಇಡಲು ಪ್ರಯತ್ನ ಮಾಡುತ್ತಿರುವ ಬಗ್ಗೆಯೂ ಸುದೀಪ್ ಟೀಕೆ ಮಾಡಿದರು. ತುಸು ಖಾರವಾಗಿಯೇ ರಕ್ಷಿತಾಗೆ ಬುದ್ಧಿ ಹೇಳಿದರು ಕಿಚ್ಚ. ಇನ್ನು ನಾಳೆ ಭಾನುವಾರ ಒಬ್ಬರು ಸದಸ್ಯರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಮುಂದಿನ ಭಾನುವಾರ ಫಿನಾಲೆ ನಡೆಯಲಿದೆ.