ಪರಸ್ಪರ ಜಗಳ ಮಾಡಿಕೊಂಡ ಧನರಾಜ್-ರಜತ್​ಗೆ ಶಿಕ್ಷೆ ನೀಡಿದ ಕಿಚ್ಚ

|

Updated on: Dec 15, 2024 | 8:54 AM

Bigg Boss Kannada: ಬಿಗ್​ಬಾಸ್ ಕನ್ನಡದಲ್ಲಿ ಧನರಾಜ್ ಮತ್ತು ರಜತ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಧನರಾಜ್ ಮೇಲೆ ಹಲ್ಲೆ ಮಾಡಲು ರಜತ್ ಮುಂದಾಗಿದ್ದರು. ಆದರೆ ಮನೆಯವರು ಇಬ್ಬರನ್ನೂ ತಡೆದರು. ಶನಿವಾರದ ಎಪಿಸೋಡ್​ಗೆ ಬಂದಿದ್ದ ಸುದೀಪ್, ಇಬ್ಬರಿಗೂ ಶಿಕ್ಷೆ ನೀಡಿದ್ದಾರೆ. ಮುಂದಿನ ಆದೇಶ ಬರುವವರೆಗೆ ರಜತ್ ಜೈಲಿನಲ್ಲಿ ಇರಬೇಕಿದೆ.

ಪರಸ್ಪರ ಜಗಳ ಮಾಡಿಕೊಂಡ ಧನರಾಜ್-ರಜತ್​ಗೆ ಶಿಕ್ಷೆ ನೀಡಿದ ಕಿಚ್ಚ
ಬಿಗ್​ಬಾಸ್ ಕನ್ನಡ
Follow us on

ಬಿಗ್​ಬಾಸ್ ಮನೆಯಲ್ಲಿ ಕಳೆದ ವಾರ ಹಲವು ಘಟನೆಗಳು ನಡೆದಿವೆ. ಗೌತಮಿ ಕ್ಯಾಪ್ಟನ್ ಆಗಿದ್ದಾರೆ. ಗೌತಮಿ ಹಾಗೂ ಮಂಜು ಪರಸ್ಪರ ದೂರಾಗಿದ್ದಾರೆ. ತ್ರಿವಿಕ್ರಮ್-ಚೈತ್ರಾ ಜೈಲಿಗೆ ಹೋಗಿದ್ದಾರೆ. ಮನೆಯವರಿಗೆ ಶಿಕ್ಷೆ ಕೊಡಲು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಧನರಾಜ್ ಮತ್ತು ರಜತ್ ಸಖತ್ ಆಗಿ ಜಗಳ ಮಾಡಿಕೊಂಡಿದ್ದಾರೆ. ತನಗೆ ಕಳಪೆ ಕೊಟ್ಟಿದ್ದಕ್ಕೆ ಸಿಟ್ಟಾದ ರಜತ್, ಧನರಾಜ್​ಗೆ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕೊನೆಗೆ ಮನೆಯವರ ಮಧ್ಯ ಪ್ರವೇಶದಿಂದ ಜಗಳ ಅಷ್ಟಕ್ಕೆ ನಿಂತಿತು.

ನಿನ್ನೆ ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಈ ವಿಷಯವಾಗಿ ಮಾತನಾಡಿದರು. ‘ನೀವೇನು ಮನುಷ್ಯರಾಗಿ ಇರಲು ಮನೆಯ ಒಳಗೆ ಹೋಗಿದ್ದೀರೋ ಅಥವಾ ಪ್ರಾಣಿಗಳಾಗಿ ಇರಲು ಮನೆಗೆ ಹೋಗಿದ್ದೀರೋ?’ ಎಂದು ಪ್ರಶ್ನೆ ಮಾಡಿದರು. ಮಾತು ಮುಂದುವರೆಸಿ, ಧನರಾಜ್​ಗೆ, ‘ನೀವೇಕೆ ರಜತ್ ಕೆನ್ನೆ ತಟ್ಟಿ ಅವರಿಗೆ ಕೋಪ ಬರಿಸುವ ಪ್ರಯತ್ನ ಮಾಡಿದಿರಿ’ ಎಂದು ಪ್ರಶ್ನಿಸಿದರು. ಇನ್ನು ರಜತ್​ಗೆ ನಿಮ್ಮ ನಾಲಗೆ ಮೇಲೆ ಹಿಡಿತ ಇರಲಿ, ಚೆನ್ನಾಗಿ ಆಡುತ್ತಿದ್ದೀರಿ ಆದರೆ ಆಡುವ ಭಾಷೆ ಮೇಲೆ ಹಿಡಿತ ಇರಲಿ’ ಎಂದರು.

ಧನರಾಜ್ ಹಾಗೂ ರಜತ್​ ಗೆ ಪರಸ್ಪರ ಅಪ್ಪಿಕೊಂಡು ರಾಜಿ ಆಗುವಂತೆ ಹೇಳಿದ ಸುದೀಪ್, ಕೊನೆಗೆ ಇಬ್ಬರಿಗೂ ಶಿಕ್ಷೆಯೊಂದನ್ನು ನೀಡಿದರು. ಒಂದು ಚಕ್ರಗಳಿರುವ ಜೈಲು ತರಿಸಿ, ಅದರಲ್ಲಿ ರಜತ್ ಸೇರಿಕೊಳ್ಳುವಂತೆ ಹೇಳಿದರು. ಮುಂದಿನ ಆದೇಶ ಬರುವವರೆಗೆ ರಜತ್ ಆ ಜೈಲಿನಲ್ಲಿಯೇ ಇರಬೇಕು. ಆ ಚಕ್ರಗಳಿರುವ ಜೈಲನ್ನು ಧನರಾಜ್ ಮನೆಯಲ್ಲೆಲ್ಲ ತಳ್ಳಿಕೊಂಡು ಓಡಾಡಬೇಕು. ರಜತ್ ಎಲ್ಲಿ ಹೇಳುತ್ತಾರೋ ಅಲ್ಲಿಗೆ ಆ ಜೈಲನ್ನು ತಳ್ಳಬೇಕು.

ಇದನ್ನೂ ಓದಿ:ಬಿಗ್​ಬಾಸ್​ಗೆ ಯಾವ ಸ್ಪರ್ಧಿಯಿಂದ ಎಷ್ಟು ಟಿಆರ್​ಪಿ ಬರುತ್ತೆ?

ಆ ಮೂಲಕ ಇಬ್ಬರಿಗೂ ಶಿಕ್ಷೆ ನೀಡಿದರು ಸುದೀಪ್. ಆದರೆ ರಜತ್​ಗೆ ಇದು ಸಮಸ್ಯೆ ಆಯ್ತು. ಬಟ್ಟೆ ಬದಲಿಸುವುದು ನಿದ್ದೆ ಮಾಡುವುದು, ಟಾಯ್ಲೆಟ್​ಗೆ ಹೋಗುವುದು ಎಲ್ಲ ಹೇಗೆ ಎಂಬುದು ರಜತ್​ ಪ್ರಶ್ನೆ. ಆದರೆ ರಜತ್ ಪ್ರಶ್ನೆಗಳಿಗೆ ಸುದೀಪ್ ಉತ್ತರ ನೀಡಲಿಲ್ಲ. ಮುಂದಿನ ಆದೇಶ ಬರುವವರೆಗೆ ಧನರಾಜ್ ಆ ಪುಟ್ಟ ಜೈಲಿನಲ್ಲೇ ಇರಬೇಕಿದೆ. ಧನರಾಜ್​, ರಜತ್ ಹೇಳಿದಲ್ಲೆಲ್ಲ ಆ ಜೈಲನ್ನು ತಳ್ಳಿಕೊಂಡು ಓಡಾಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 am, Sun, 15 December 24