ಆ ಒಂದು ಆರೋಪಕ್ಕೆ ಬಿಗ್​​ಬಾಸ್ ವೇದಿಕೆ ಮೇಲೆ ಉತ್ತರ ನೀಡಿದ ಕಿಚ್ಚ

Bigg Boss Kannada: ಧ್ರುವಂತ್ ಅವರು ಕಳೆದೊಂದು ವಾರದಿಂದ ತಾವು ಹೊರಗೆ ಹೋಗಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಈ ವಾರವೂ ಸಹ ಕ್ಯಾಮೆರಾ ಮುಂದೆ ಹೋಗಿ ತಾವು ಮನೆಗೆ ಹೋಗಬೇಕು ಎಂದು ಕೇಳಿ ಕೊಂಡರು. ಆದರೆ ಅದಾಗಿ ಸ್ವಲ್ಪವೇ ಹೊತ್ತಿಗೆ, ಈ ಬಾರಿ ನಾಮಿನೇಷನ್​​ನಿಂದ ಮೊದಲು ಬಚಾವ್ ಆಗಿದ್ದೆ ಧ್ರುವಂತ್ ಅವರು. ಆದರೆ ಧ್ರುವಂತ್ ಅವರು, ಸುದೀಪ್ ಎದುರು, ನನ್ನನ್ನು ಹೊರಗೆ ಕರೆಸಿಕೊಳ್ಳಿ’ ಎಂದು ಬೇಡಿಕೆ ಇಟ್ಟರು.

ಆ ಒಂದು ಆರೋಪಕ್ಕೆ ಬಿಗ್​​ಬಾಸ್ ವೇದಿಕೆ ಮೇಲೆ ಉತ್ತರ ನೀಡಿದ ಕಿಚ್ಚ
Kichcha Sudeep

Updated on: Dec 06, 2025 | 11:21 PM

ಶನಿವಾರ ಬಂತೆಂದರೆ ಸುದೀಪ್ (Sudeep), ಬಿಗ್​​ಬಾಸ್ ವೇದಿಕೆಯಲ್ಲಿ ಹಾಜರಾಗುತ್ತಾರೆ. ಆ ವಾರದ ಟಾಸ್ಕ್​​ಗಳನ್ನು ಪರಾಮರ್ಶಿಸಿ ಪ್ರತಿಯೊಬ್ಬರಿಗೂ ಅವರ ತಪ್ಪುಗಳನ್ನು ತಿಳಿಸಿ, ಬುದ್ಧಿ ಹೇಳಿ, ಕೆಲವು ಬಾರಿ ಗದರಿ, ನಗಿಸಿ, ನಕ್ಕು ಹೋಗುತ್ತಾರೆ. ಬಹಳ ಅಪರೂಪಕ್ಕೆ ಹೊರಗಿನ ವಿಷಯಗಳ ಬಗ್ಗೆ ಬಿಗ್​​ಬಾಸ್ ವೇದಿಕ ಮೇಲೆ ಪ್ರತಿಕ್ರಿಯೆ ನೀಡುತ್ತಾರೆ. ಈ ಶನಿವಾರ ಅಂಥಹುದೇ ಒಂದು ಸ್ಪಷ್ಟನೆಗೆ ಬಿಗ್​​ಬಾಸ್ ವೇದಿಕೆಯನ್ನು ಸುದೀಪ್ ಬಳಸಿಕೊಂಡರು. ಆದರೆ ಆ ಸ್ಪಷ್ಟನೆ ಬಿಗ್​​ಬಾಸ್ ಕುರಿತಾಗಿಯೇ ಆಗಿತ್ತು.

ಧ್ರುವಂತ್ ಅವರು ಕಳೆದೊಂದು ವಾರದಿಂದ ತಾವು ಹೊರಗೆ ಹೋಗಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಈ ವಾರವೂ ಸಹ ಕ್ಯಾಮೆರಾ ಮುಂದೆ ಹೋಗಿ ತಾವು ಮನೆಗೆ ಹೋಗಬೇಕು ಎಂದು ಕೇಳಿ ಕೊಂಡರು. ಆದರೆ ಅದಾಗಿ ಸ್ವಲ್ಪವೇ ಹೊತ್ತಿಗೆ, ಈ ಬಾರಿ ನಾಮಿನೇಷನ್​​ನಿಂದ ಮೊದಲು ಬಚಾವ್ ಆಗಿದ್ದೆ ಧ್ರುವಂತ್ ಅವರು. ಆದರೆ ಧ್ರುವಂತ್ ಅವರು, ಸುದೀಪ್ ಎದುರು, ನನ್ನನ್ನು ಹೊರಗೆ ಕರೆಸಿಕೊಳ್ಳಿ’ ಎಂದು ಬೇಡಿಕೆ ಇಟ್ಟರು.

ಅದಕ್ಕೆ ಸುದೀಪ್, ‘ಹೋಗಬೇಕಾದರೆ ನನ್ನನ್ನು ಕೇಳಿಕೊಂಡು ಹೋದಿರಾ ನೀವು? ನಿಮಗೆ ಮಾತ್ರವಲ್ಲ ಇನ್ನೂ ಕೆಲವರಿಗೆ ತಪ್ಪು ಅಭಿಪ್ರಾಯ ಇರುತ್ತವೆ, ಕೆಲವರು ಹೊರಗೆ ಕೂತುಕೊಂಡು ಉದ್ದುದ್ದ ಮಾತನಾಡುವವರು ಸಹ ಇದ್ದಾರೆ ಅವರಿಗೆಲ್ಲ ಸೇರಿ ಹೇಳುತ್ತೀನಿ. ನನ್ನ ಹುಡುಗುರು, ನನ್ನ ಶಿಷ್ಯ ಎಂದು ಇಷ್ಟು ಸೀಸನ್ ಅಲ್ಲಿ ಒಬ್ಬೇ ಒಬ್ಬನನ್ನು ಸಹ ನಾನು ಬಿಗ್​​ಬಾಸ್​​ಗೆ ಕಳಿಸಿಲ್ಲ. ಮೇಕಪ್ ಹಾಕುವ ಈ ವೇದಿಕೆ ಮೇಲೆ ನಿಂತು ಈ ಮಾತನ್ನು ಹೇಳುತ್ತಿದ್ದೀನಿ’ ಎಂದರು ಕಿಚ್ಚ.

ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್‌ ಮನೆ ಹೇಗಿದೆ ನೋಡಿ

‘ಬಿಗ್​​ಬಾಸ್​ ಸ್ಪರ್ಧೆ ಬಹಳ ಪ್ರಾಮಾಣಿಕವಾಗಿ ನಡೆಯುತ್ತದೆ. ವೇದಿಕೆ ಮೇಲೆ ನೀವು ನಡೆದುಕೊಂಡು ಬರುವವರೆಗೆ ಮುಂದಿನ ಸ್ಪರ್ಧಿ ಯಾರು ಎಂಬುದನ್ನು ಸಹ ನಾನು ತಿಳಿದುಕೊಳ್ಳುವುದಿಲ್ಲ. ಈ ಕಾರ್ಯಕ್ರಮ ಬಹಳ ದೊಡ್ಡ ಕಾರ್ಯಕ್ರಮ, ನಿಮಗೆ ಅನುಕೂಲ ಆಗುವಂತೆ ಬಳಸಿಕೊಳ್ಳಿ. ಆದರೆ ಇಲ್ಲಿ, ನಿಮ್ಮನ್ನು ಒಳಗೆ ಕಳಿಸುವವನೂ ನಾನಲ್ಲ, ನಿಮ್ಮನ್ನು ಹೊರಗೆ ಕರೆಸಿಕೊಳ್ಳುವ ಅಧಿಕಾರವೂ ನನಗೆ ಇಲ್ಲ’ ಎಂದರು ಸುದೀಪ್.

ಇತ್ತೀಚೆಗಷ್ಟೆ ಮಾಜಿ ಬಿಗ್​​ಬಾಸ್ ಸ್ಪರ್ಧಿಯೊಬ್ಬರು, ಸುದೀಪ್ ತಮ್ಮ ಶಿಷ್ಯರನ್ನೇ ಬಿಗ್​​ಬಾಸ್​​ಗೆ ಕಳಿಸುತ್ತಾರೆ. ಉಗ್ರಂ ಮಂಜು, ತ್ರಿವಿಕ್ರಮ್, ವಿನಯ್, ರಜತ್ ಇಂಥವರನ್ನೇ ಕಳಿಸಲಾಗುತ್ತದೆ. ಅವರಿಗೆ ಮೈಲೇಜ್ ಕೊಡಲಾಗುತ್ತದೆ’ ಎಂಬ ಮಾತುಗಳನ್ನು ಹೇಳಿದ್ದರು. ಅದಕ್ಕೆ ಇದೀಗ ಸುದೀಪ್ ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ