ಹೀಗೆ ಆದರೆ ಕಾವ್ಯಾ ಹೊರಗೆ ಹೋಗ್ತಾರೆ; ಗಿಲ್ಲಿಗೆ ಎಚ್ಚರಿಸಿದ ಸುದೀಪ್
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಕ್ಲೋಸ್ ಆಗಿದ್ದರು. ಜಾನ್ವಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಜೋಡಿ ಆಟ ಒಬ್ಬರ ಮೇಲೆ ಪ್ರಭಾವ ಬೀರಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮತ್ತು ರಾಶಿಕಾ ಶೆಟ್ಟಿ ಹಾಗೂ ಸೂರಜ್ ಜೋಡಿಯಾಗಿ ಇದ್ದಾರೆ. ಒಬ್ಬರ ಮೇಲೆ ಮತ್ತೊಬ್ಬರ ಆಟದ ಪ್ರಭಾವ ಬೀಳುತ್ತಲೇ ಇದೆ. ಈ ಬಗ್ಗೆ ಸುದೀಪ್ ಎಚ್ಚರಿಸಿದರು.

ಬಿಗ್ ಬಾಸ್ ಮನೆಯಲ್ಲಿರುವಾಗ ಹೊರಗಿನ ಜಗತ್ತಿನಿಂದ ದೂರ ಇರಬೇಕಾಗುತ್ತದೆ. ಹೀಗಾಗಿ ಬಿಗ್ ಬಾಸ್ ಮನೆಯ ಒಳಗೆ ಕೆಲವೊಮ್ಮೆ ಸಾಕಷ್ಟು ಫ್ರೆಂಡ್ಶಿಪ್ ಬೆಳೆಯುತ್ತದೆ. ಈ ಆಟ ಒಬ್ಬರ ಮೇಲೆ ಒಬ್ಬರಿಗೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಇದು ಅವರಿಗೆ ಗೊತ್ತಾಗುವುದೇ ಇಲ್ಲ. ಈಗ ಈ ಬಗ್ಗೆ ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ. ‘ಹೀಗೆ ಆದರೆ ಒಬ್ಬರು ಹೋಗ್ತೀರಿ’ ಎಂದರು.
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಕ್ಲೋಸ್ ಆಗಿದ್ದರು. ಜಾನ್ವಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಜೋಡಿ ಆಟ ಒಬ್ಬರ ಮೇಲೆ ಪ್ರಭಾವ ಬೀರಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮತ್ತು ರಾಶಿಕಾ ಶೆಟ್ಟಿ ಹಾಗೂ ಸೂರಜ್ ಜೋಡಿಯಾಗಿ ಇದ್ದಾರೆ. ಒಬ್ಬರ ಮೇಲೆ ಮತ್ತೊಬ್ಬರ ಆಟದ ಪ್ರಭಾವ ಬೀಳುತ್ತಲೇ ಇದೆ. ಈ ಬಗ್ಗೆ ಸುದೀಪ್ ಎಚ್ಚರಿಸಿದರು.
‘ಬಿಗ್ ಬಾಸ್ ಮನೆಯಲ್ಲಿ ಜೋಡಿ ಆಗಿರೋದು ತಪ್ಪಲ್ಲ. ಆದರೆ, ಒಬ್ಬರ ಪ್ರಭಾವ ಮತ್ತೊಬ್ಬರ ಆಟದ ಮೇಲೆ ಪ್ರಭಾವ ಬೀರುತ್ತಿದೆ ಎಂದಾಗ ಒಬ್ಬರು ಮನೆಯಿಂದ ಹೋಗಬಹುದು. ಅದಕ್ಕೆ ನೀವು ಕಾರಣ ಆಗಬಹುದು’ ಎಂದರು. ಜಾನ್ವಿ-ಅಶ್ವಿನಿ ಒಟ್ಟಾಗಿದ್ದರು. ಈಗ ಜಾನ್ವಿ ಹೋಗಿದ್ದಾರೆ. ಈ ಬಗ್ಗೆ ಮಾತನಾಡಿದ ಸುದೀಪ್. ‘ಅಂಚಲ್ಲಿ ಒಬ್ಬರೇ ಕೂತಿದ್ದಾರೆ ನೋಡಿ’ ಎಂದು ಅಶ್ವಿನಿ ಉದಾಹರಣೆ ಕೊಟ್ಟು ಹೇಳಿದರು.
ಗಿಲ್ಲಿ ಬಳಿಯೂ ಈ ವಿಷಯವನ್ನು ಸುದೀಪ್ ಚರ್ಚೆ ಮಾಡಿದರು. ‘ನಿಮ್ಮ (ಕಾವ್ಯಾ-ಗಿಲ್ಲಿ) ಮಧ್ಯೆ ಒಳ್ಳೆಯ ಗೆಳೆತನ ಇರಬಹುದು. ಆದರೆ, ಅವರ ಆಟವನ್ನು ಅವರಿಗೆ ಆಡೋಕೆ ಬಿಡಿ. ನಿಮ್ಮ ಪ್ರಭಾವದಿಂದ ಅವರು ಹೊರಗೆ ಹೋಗೋ ರೀತಿ ಆದರೆ, ‘ಕಾವು ಹೋಗಿ ಬಾ. ಹೊರಗೆ ಬಂದಮೇಲೆ ಸಿಕ್ತೀನಿ. ಈ ಫ್ರೆಂಡ್ಶಿಪ್ನ ಹೀಗೆಯೇ ಮುಂದುವರಿಸೋಣ ಎಂದು ಹೇಳ್ತೀರಾ?’ ಎಂದು ಸುದೀಪ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ‘ಸುದೀಪ್ ಸರ್ ಅದ್ನ ಹೇಳ್ತಿರ್ತಾನೆ’ ಎಂಬ ಹೇಳಿಕೆ; ವಿಡಿಯೋ ಹಾಕಿ ರಜತ್ಗೆ ಪ್ರಶ್ನೆ ಮಾಡಿದ ಕಿಚ್ಚ ‘ಕಳೆದ 11 ಸೀಸನ್ಗಳಲ್ಲಿ ಜೋಡಿ ಆಗಿ ಅನೇಕರು ಆಡಿದ್ದಾರೆ. ಆದರೆ, ಅವರೆಲ್ಲರೂ ಮನೆಯಿಂದ ಹೊರ ಹೋಗಿದ್ದಾರೆ. ಅವರಿಗೆ ಗೆಲ್ಲೋಕೆ ಆಗಿಲ್ಲ’ ಎಂದು ಸುದೀಪ್ ಹೇಳಿದರು. ರಾಶಿಕಾ ಹಾಗೂ ಸೂರಜ್ಗೂ ಈ ಬಗ್ಗೆ ಎಚ್ಚರಿಸಿದರು. ‘ನೀವು ಇಬ್ಬರೂ ಪ್ರತ್ಯೇಕವಾಗಿ ಆಡೋಣ ಎಂದು ಹೇಳ್ತೀರಾ. ಆ ಬಳಿಕ ಮತ್ತೆ ಒಂದಾಗುತ್ತಿರಾ’ ಎಂದರು ಸುದೀಪ್. ಎಲ್ಲರೂ ತಿದ್ದಿಕೊಳ್ಳುವ ಭರವಸೆ ಕೊಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.