ಮಂಜ ಒಬ್ಬನನ್ನೆ ಹೊರಗೆ ಕಳಿಸಿದ್ದು ನನಗೆ ಇಷ್ಟ ಆಗ್ಲಿಲ್ಲ: ಸುದೀಪ್

ಮಂಜ, ಹೊರಗೆ ಹೋದ ಬಳಿಕ ಸುದೀಪ್ ಅವರ ವೀಕೆಂಡ್ ಪಂಚಾಯಿತಿ ಶುರುವಾಯ್ತು. ಶನಿವಾರ ಹೇಗೆ ಗಂಭೀರವಾಗಿ ಎಪಿಸೋಡ್ ನಡೆಸಿಕೊಟ್ಟಿದ್ದರೊ ಅದೇ ಗಂಭೀರತೆಯಿಂದ, ಶಿಸ್ತಿನಿಂದ ಭಾನುವಾರದ ಎಪಿಸೋಡ್ ಸಹ ಶುರು ಮಾಡಿದ ಸುದೀಪ್ ಅವರು, ಮಂಜನನ್ನು ಬಿಗ್​​ಬಾಸ್ ಹೊರಗೆ ಕಳಿಸಿದ್ದರ ಬಗ್ಗೆ ಮೊದಲಿಗೆ ಮಾತು ಆರಂಭಿಸಿದರು. ಈ ವೇಳೆ, ‘ಮಂಜ ಒಬ್ಬನನ್ನೇ ಮನೆಯಿಂದ ಹೊರಗೆ ಕಳಿಸಿದ್ದು ನನಗೆ ಇಷ್ಟವಾಗಲಿಲ್ಲ’ ಎಂದು ಸುದೀಪ್ ನೇರವಾಗಿ ಹೇಳಿದರು.

ಮಂಜ ಒಬ್ಬನನ್ನೆ ಹೊರಗೆ ಕಳಿಸಿದ್ದು ನನಗೆ ಇಷ್ಟ ಆಗ್ಲಿಲ್ಲ: ಸುದೀಪ್
Sudeep Manja

Updated on: Oct 11, 2026 | 9:50 PM

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಎಪಿಸೋಡ್
  • ಮಂಜನ ಹೊರಗೆ ಕಳಿಸಿದ ಬಿಗ್​​ಬಾಸ್
  • ಮಂಜನ ಎವಿಕ್ಷನ್ ಬಗ್ಗೆ ಸುದೀಪ್ ಅಭಿಪ್ರಾಯ

ಬಿಗ್​​ಬಾಸ್ ಮನೆಯಲ್ಲಿ ಅಚ್ಚರಿಯ ಬೆಳವಣಿಗೆ ಆಗಿದೆ. ಮಾಡರ್ನ್ ಮಹಾ ಕವಿ ಮಂಜನನ್ನು ಬಿಗ್​​ಬಾಸ್ ಮನೆಯಿಂದ ನೇರವಾಗಿ ಹೊರಗೆ ಕಳಿಸಿದ್ದಾರೆ. ಪದೇ ಪದೇ ಎಚ್ಚರಿಕೆ ನೀಡಿದ್ದರೂ ಸಹ ಸಹ ಸ್ಪರ್ಧಿಗಳನ್ನು ಅವಾಚ್ಯವಾಗಿ ಬೈದಿದ್ದಕ್ಕೆ, ಪದೇ ಪದೇ ನಿಯಮ ಮುರಿದಿದ್ದಕ್ಕೆ, ಸಹ ಸ್ಪರ್ಧಿಗಳ ಚಾರಿತ್ರ್ಯ ಹರಣ ಮಾಡಿದ್ದಕ್ಕೆ ಮಂಜನನ್ನು ಮನೆಯಿಂದ ನೇರವಾಗಿ ಹೊರಗೆ ಕಳಿಸಿದರು. ಸಾಮಾನ್ಯವಾಗಿ ಭಾನುವಾರದಂದು ಎಪಿಸೋಡಿನ ಕೊನೆಯಲ್ಲಿ ಸುದೀಪ್ ಅವರು ಎವಿಕ್ಷನ್ ಆಗುವ ಸ್ಪರ್ಧಿಯನ್ನು ಘೋಷಿಸುತ್ತಾರೆ. ಆದರೆ ಮಂಜನನ್ನು ಶನಿವಾರದ ಎಪಿಸೋಡ್ ಮುಗಿಸುತ್ತಿದ್ದಂತೆ ನೇರವಾಗಿ ಹೊರಗೆ ಹಾಕಿದರು.

ಮಂಜ, ಹೊರಗೆ ಹೋದ ಬಳಿಕ ಸುದೀಪ್ ಅವರ ವೀಕೆಂಡ್ ಪಂಚಾಯಿತಿ ಶುರುವಾಯ್ತು. ಶನಿವಾರ ಹೇಗೆ ಗಂಭೀರವಾಗಿ ಎಪಿಸೋಡ್ ನಡೆಸಿಕೊಟ್ಟಿದ್ದರೊ ಅದೇ ಗಂಭೀರತೆಯಿಂದ, ಶಿಸ್ತಿನಿಂದ ಭಾನುವಾರದ ಎಪಿಸೋಡ್ ಸಹ ಶುರು ಮಾಡಿದ ಸುದೀಪ್ ಅವರು, ಮಂಜನನ್ನು ಬಿಗ್​​ಬಾಸ್ ಹೊರಗೆ ಕಳಿಸಿದ್ದರ ಬಗ್ಗೆ ಮೊದಲಿಗೆ ಮಾತು ಆರಂಭಿಸಿದರು. ಈ ವೇಳೆ, ‘ಮಂಜ ಒಬ್ಬನನ್ನೇ ಮನೆಯಿಂದ ಹೊರಗೆ ಕಳಿಸಿದ್ದು ನನಗೆ ಇಷ್ಟವಾಗಲಿಲ್ಲ’ ಎಂದು ಸುದೀಪ್ ನೇರವಾಗಿ ಹೇಳಿದರು.

ಬಿಗ್​​ಬಾಸ್ ನಿರ್ಣಯ ತೆಗೆದುಕೊಂಡಿದ್ದಾರೆ. ಅವರಿಗೆ ಕೆಲವು ನಿಯಮಗಳಿವೆ, ಆ ನಿಯಮಗಳ ಪ್ರಕಾರ ಅವರು ನಿರ್ಣಯ ತೆಗೆದುಕೊಂಡಿದ್ದಾರೆ. ಆದರೆ ನನಗೆ ಮಂಜ ಒಬ್ಬನೇ ಹೊರಗೆ ಹೋಗಿದ್ದು ಇಷ್ಟ ಆಗಲಿಲ್ಲ. ಅವನ ಜೊತೆಗೆ ಇನ್ನೂ ಇಬ್ಬರು ಮೂವರು ಹೊರಗೆ ಹೋಗಬೇಕಿತ್ತು. ಒಂದು ವೇಳೆ ನನಗೆ ಅಧಿಕಾರ ಇದ್ದಿದ್ದರೆ, ಈ ವೇದಿಕೆಯೇ ನನ್ನ ನ್ಯಾಯಾಲಯ ಆಗಿದ್ದಿದ್ದರೆ ಮಂಜನ ಜೊತೆಗೆ ಇನ್ನೂ ಇಬ್ಬರನ್ನು ನಾನು ಹೊರಗೆ ಕಳಿಸುತ್ತಿದ್ದೆ’ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ

ನನ್ನ ಕೈಯಲ್ಲಿ ಏನೂ ಇಲ್ಲ. ಇದು ಬಿಗ್​​ಬಾಸ್ ನಿರ್ಣಯ, ನೀವುಂಟು ಬಿಗ್​​ಬಾಸ್ ಉಂಟು. ಅವರ ನಿಯಮಗಳುಂಟು. ನಾನು ಇಲ್ಲಿಗೆ ಬರುವುದು ಬಿಗ್​​ಬಾಸ್ ನನಗೆ ನೀಡಿದ ಹೆಸರನ್ನು ಘೋಷಣೆ ಮಾಡಲು ಮಾತ್ರ. ನಿಮಗೆ ಎಚ್ಚರಿಸಲು ಮಾತ್ರ. ನನ್ನ ಅಭಿಪ್ರಾಯಗಳಿಗೆ ಇಲ್ಲಿ ಬೆಲೆ ಇಲ್ಲ. ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ. ಆದರೂ ಕೆಲವರು ನಾನು ಆಟದ ಮೇಲೆ ಪ್ರಭಾವ ಬೀರುತ್ತೀನಿ ಎಂದು ಕೆಲವು ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಲೇ ಇರುತ್ತಾರೆ. ಅವರು ಹೇಳಿಕೊಂಡೇ ಇರಲಿ’ ಎಂದಿದ್ದಾರೆ ಸುದೀಪ್.

ಈ ಮನೆಯಲ್ಲಿ ತಪ್ಪುಗಳನ್ನು ಮಾಡಿರುವ, ಗಂಭೀರ ತಪ್ಪುಗಳನ್ನು ಮಾಡಿರುವ ಹಲವು ಜನರು ಇದ್ದಾರೆ. ಆದರೆ ಮಂಜನನ್ನು ಮಾತ್ರ ಹೊರಗೆ ಹಾಕಿದ್ದಾರೆ. ಹೌದು, ಮಂಜ ತಪ್ಪು ಮಾಡಿದ್ದ. ಅವನನ್ನು ತಿದ್ದಲು ಮಾಡಿದ ಪ್ರಯತ್ನವನ್ನು ಮೀರಿ ತಪ್ಪು ಮಾಡಿದ್ದ. ಆದರೆ ತಪ್ಪು ಮಾಡಿದ್ದು ಆತ ಮಾತ್ರ ಆಗಿರಲಿಲ್ಲ’ ಎಂದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:49 pm, Sun, 11 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us