ಬಿಗ್​​ಬಾಸ್ ಮೇಲೆ ಕಣ್ಣು ಬಿದ್ದಿದೆ ಎಂದ ಸುದೀಪ್ ಧನ್ಯವಾದ ಹೇಳಿದ್ದು ಯಾರಿಗೆ?

Bigg Boss Kannada season 12: ಬಿಗ್​​ಬಾಸ್​​ ಕನ್ನಡ 12 ಶೋಗೆ ಸಣ್ಣ ಸಮಸ್ಯೆ ಎದುರಾಗಿತ್ತು. ಮನೆಯ ಸ್ಪರ್ಧಿಗಳನ್ನು ಮನೆಯಿಂದ ಸ್ಥಳಾಂತರ ಮಾಡಿ ರೆಸಾರ್ಟ್​​ನಲ್ಲಿ ಇಡಲಾಗಿತ್ತು. ಆದರೆ ಸುದೀಪ್ ಹಾಗೂ ಇನ್ನೂ ಕೆಲವರ ಪ್ರಯತ್ನದಿಂದ ಕೇವಲ 24 ಗಂಟೆಗಳಲ್ಲಿ ಮತ್ತೆ ಸ್ಪರ್ಧಿಗಳೆಲ್ಲ ಮನೆ ಸೇರಿದರು. ಆ ಘಟನೆಯ ಬಳಿಕ ಮೊದಲ ಬಾರಿಗೆ ಸುದೀಪ್ ವಾರದ ಪಂಚಾಯಿತಿ ನಡೆಸಿಕೊಡಲು ಬಂದಿದ್ದು ಘಟನೆಯ ಬಗ್ಗೆ ಮಾತನಾಡಿದರು.

ಬಿಗ್​​ಬಾಸ್ ಮೇಲೆ ಕಣ್ಣು ಬಿದ್ದಿದೆ ಎಂದ ಸುದೀಪ್ ಧನ್ಯವಾದ ಹೇಳಿದ್ದು ಯಾರಿಗೆ?
Bigg Boss Kannada 12

Updated on: Oct 11, 2025 | 10:19 PM

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಪ್ರಾರಂಭವಾಗಿ ಎರಡು ವಾರಗಳಾಗಿವೆ. 12 ಸೀಸನ್ ಈ ವರೆಗೆ ನಡೆದಿದೆ. ಒಂದು ಒಟಿಟಿ ಶೋ ಸಹ ನಡೆದಿದೆ. ಆದರೆ ಕೋವಿಡ್ ಹೊರತಾಗಿ ಇನ್ಯಾವ ವರ್ಷವೂ ಸಹ ಬಿಗ್​​ಬಾಸ್ ನಿಂತಿಲ್ಲ. ಆದರೆ ಈ ವರ್ಷ ಒಂದು ದಿನದ ಮಟ್ಟಿಗೆ ಶೋ ನಿಂತಿತ್ತು. ಬಿಗ್​​ಬಾಸ್ ಮನೆಯ ಸ್ಪರ್ಧಿಗಳನ್ನು ಮನೆಯಿಂದ ಸ್ಥಳಾಂತರ ಮಾಡಿ ರೆಸಾರ್ಟ್​​ನಲ್ಲಿ ಇಡಲಾಗಿತ್ತು. ಆದರೆ ಸುದೀಪ್ ಹಾಗೂ ಇನ್ನೂ ಕೆಲವರ ಪ್ರಯತ್ನದಿಂದ ಕೇವಲ 24 ಗಂಟೆಗಳಲ್ಲಿ ಮತ್ತೆ ಸ್ಪರ್ಧಿಗಳೆಲ್ಲ ಮನೆ ಸೇರಿದರು. ಆ ಘಟನೆಯ ಬಳಿಕ ಮೊದಲ ಬಾರಿಗೆ ಸುದೀಪ್ ವಾರದ ಪಂಚಾಯಿತಿ ನಡೆಸಿಕೊಡಲು ಬಂದಿದ್ದು ಘಟನೆಯ ಬಗ್ಗೆ ಮಾತನಾಡಿದರು.

‘ಬಿಗ್​​ಬಾಸ್ ಕನ್ನಡಿಗರ ಹೆಮ್ಮೆಯ ಶೋ, 12 ಸೀಸನ್​​ಗಳಿಂದಲೂ ಇದನ್ನು ಕನ್ನಡಿಗರು ಬೆಳೆಸಿಕೊಂಡು ಬಂದಿದ್ದಾರೆ. ಇದನ್ನು ಹಾಳು ಮಾಡುವುದು ಸುಲಭದ ಕೆಲಸವಲ್ಲ. ಕನ್ನಡಿಗರ ಪ್ರೀತಿ ಇರುವವರೆಗೆ ನಾವು ಅಂದರೆ ಬಿಗ್​​ಬಾಸ್ ಮುನ್ನುಗ್ಗುತ್ತಲೇ ಇರುತ್ತದೆ. ಇತ್ತೀಚೆಗೆ ಎದುರಾದ ಸಮಸ್ಯೆಯ ಸಮಯದಲ್ಲಿ ಬಿಗ್​​ಬಾಸ್ ಜ್ಯೋತಿ ಆರದಂತೆ ಕಾಪಾಡಿದ ಎಲ್ಲರಿಗೂ ಧನ್ಯವಾದ’ ಎಂದರು.

ಮುಂದುವರೆದು, ‘ಕೆಲ ದಿನಗಳ ಹಿಂದೆ ಆದ ಸಮಸ್ಯೆಗೂ ಬಿಗ್​​ಬಾಸ್​​ಗೂ ಯಾವುದೇ ಸಂಬಂಧ ಇರಲಿಲ್ಲ. ಆದರೆ ಬಿಗ್​​ಬಾಸ್ ಎಂಬುದೇ ಒಂದು ಅಡ್ರೆಸ್ ಆಗಿಬಿಟ್ಟಿರುವಾಗ ಕೆಲವರು ಆ ಅಡ್ರೆಸ್ ಅನ್ನು ಕ್ಲೋಸ್ ಮಾಡುವ ಪ್ರಯತ್ನ ಮಾಡಿದರು. ಆದರೆ ಅದು ಸಾಧ್ಯವಿಲ್ಲ. 12 ಸೀಸನ್​​ಗಳಿಂದಲೂ ಈ ಶೋ ಕೇವಲ ಶೋ ಆಗಿ ಮಾತ್ರವೇ ಉಳಿದಿಲ್ಲ. ಇದು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದೆ, ಹಲವಾರು ಜನರ ಜೀವನವನ್ನೇ ಬದಲಾಯಿಸಿದೆ. ಹಾಗಾಗಿ ಕೆಲವರ ಕಣ್ಣು ನಮ್ಮ ಶೋ ಮೇಲೆ ಬಿದ್ದಿರಲೂ ಬಹುದು ಎಂದರು ಸುದೀಪ್.

ಇದನ್ನೂ ಓದಿ:ಗಂಭೀರತೆ ಇಲ್ಲ, ಸ್ಪರ್ಧಿಗಳ ಹೊರಗೆ ಕಳಿಸಲು ಬಿಗ್​​ಬಾಸ್ ಬಾಗಿಲು ತೆಗೆಸಿದ ಕಿಚ್ಚ

ಸಮಸ್ಯೆ ಒಂದು ಎದುರಾದಾಗ ನಮಗೆ ಬೆಂಬಲ ನೀಡಿದ, ಸಹಾಯ ನೀಡಿದವರ ಹೆಸರನ್ನು ನಾನು ತೆಗೆದುಕೊಳ್ಳಲೇ ಬೇಕು. ‘ನಮ್ಮ ಡಿಕೆ ಸಾಹೇಬರಿಗೆ ಹಾಗೂ ಆತ್ಮೀಯ ಗೆಳೆಯ ನಲಪಾಡ್ ಅವರಿಗೆ ಧನ್ಯವಾದಗಳು. ಜೊತೆಗೆ ಈ ವಿವಾದದಲ್ಲಿ ಬಿಗ್​​ಬಾಸ್ ಪಾತ್ರ ಏನಿಲ್ಲ. ಬಿಗ್​​ಬಾಸ್ ಕಡೆಯಿಂದ ತಪ್ಪು ಆಗಿಲ್ಲ ಎಂದು ಸ್ಪಷ್ಟಪಡಿಸಿದ, ಬಿಗ್​​ಬಾಸ್ ಮತ್ತೆ ಶುರುವಾಗಲು ನೆರವಾದ ಆಡಳಿತ ವಿಭಾಗದ ಅಧಿಕಾರಿಗಳಿಗೆ ಧನ್ಯವಾದಗಳು ಎಂದರು ಸುದೀಪ್.

ಬಿಗ್​​ಬಾಸ್ ಸೆಟ್ ನಿರ್ಮಿಸಲಾಗಿರುವ ಜಾಲಿವುಡ್ ಸ್ಟುಡಿಯೋಕ್ಕೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ನೊಟೀಸ್ ನೀಡಿದ್ದರು. ನೊಟೀಸ್​​ಗೆ ಸ್ಪಂದಿಸದ ಕಾರಣಕ್ಕೆ ಜಾಲಿವುಡ್​​ಗೆ ಜಿಲ್ಲಾಡಳಿತ ಬೀಗ ಜಡಿದಿತ್ತು, ಹಾಗಾಗಿ ಜಾಲಿವುಡ್​​ನ ಒಳಗೆ ಇದ್ದ ಬಿಗ್​​ಬಾಸ್ ಮನೆಯ ಸ್ಪರ್ಧಿಗಳನ್ನು ಸಹ ಹೊರಗೆ ಕಳಿಸಲಾಗಿತ್ತು. ಬಳಿಕ ಸುದೀಪ್ ಅವರು ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡ ತರುವಾಯ ಬಿಗ್​​ಬಾಸ್​​ಗೆ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ