AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ: ಚಾಪ್ಟರ್ 1’ ಸಾವಿರ ಕೋಟಿ ರೂಪಾಯಿ ಗಳಿಸುತ್ತಾ? ಈ ಪ್ರಮುಖ ದಿನದಂದೇ ನಿರ್ಧಾರ

‘ಕಾಂತಾರ: ಚಾಪ್ಟರ್ 1’ ಕೇವಲ ಎಂಟೇ ದಿನಗಳಲ್ಲಿ 500 ಕೋಟಿ ಗಳಿಸಿದೆ. ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಸುತ್ತದೆಯೇ ಎಂಬ ಪ್ರಶ್ನೆಗೆ ದೀಪಾವಳಿ ಹಬ್ಬದ ಕಲೆಕ್ಷನ್ ನಿರ್ಣಾಯಕ ಆಗಲಿದೆ. ಅಕ್ಟೋಬರ್ 20-22ರ ದೀಪಾವಳಿ ಸಮಯದಲ್ಲಿ ವಿಶ್ವ ಮಟ್ಟದಲ್ಲಿ 200 ಕೋಟಿ ಗಳಿಸಿದರೆ, 1000 ಕೋಟಿ ಗುರಿ ತಲುಪುವ ನಿರೀಕ್ಷೆಯಿದೆ.

‘ಕಾಂತಾರ: ಚಾಪ್ಟರ್ 1’ ಸಾವಿರ ಕೋಟಿ ರೂಪಾಯಿ ಗಳಿಸುತ್ತಾ? ಈ ಪ್ರಮುಖ ದಿನದಂದೇ ನಿರ್ಧಾರ
ರುಕ್ಮಿಣಿ
ರಾಜೇಶ್ ದುಗ್ಗುಮನೆ
|

Updated on: Oct 11, 2025 | 12:30 PM

Share

‘ಕಾಂತಾರ: ಚಾಪ್ಟರ್ 1’ ಸಿನಿಮಾ (Kantara: Chapter 1) ಕೇವಲ ಎಂಟೇ ದಿನಕ್ಕೆ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕನ್ನಡ ಮಾತ್ರವಲ್ಲದೆ, ಪರಭಾಷೆಯ ಜನರು ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಇದರಿಂದ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಸಲು ಸಾಧ್ಯವಾಯಿತು. ಈ ಚಿತ್ರದ ಕಲೆಕ್ಷನ್ ಮುಂದಿನ ಕೆಲ ವಾರ ಭರ್ಜರಿಯಾಗಿ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ, ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುತ್ತದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.

ಕೇವಲ 15 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಗಳಿಕೆ ಮಾಡಿತು. ಈಗ ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ‘ಕಾಂತಾರ: ಚಾಪ್ಟರ್ 1’ ಚಿತ್ರ ಕೇವಲ ಒಂದೇ ವಾರಕ್ಕೆ 500 ಕೋಟಿ ರೂಪಾಯಿ ಗಡಿ ತಲುಪಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಆ ಒಂದು ದಿನ ಸಿನಿಮಾಗೆ ನಿರ್ಣಾಯಕವಾಗಲಿದೆ.

ಯಾವುದೇ ವಿಶೇಷ ಹಬ್ಬಗಳು ಬಂದಾಗ ಸಿನಿಮಾ ನೋಡಲು ತೆರಳುವವರ ಸಂಖ್ಯೆ ಹೆಚ್ಚಲಿದೆ. ಈಗ ದೀಪಾವಳಿ ಸಮೀಪಿಸಿದೆ. ಕೆಲವೇ ದಿನಗಳಲ್ಲಿ ಹಿಂದೂಗಳ ಈ ಪ್ರಮುಖ ಹಬ್ಬ ಆಗಮಿಸಲಿದೆ. ಆ ಸಮಯದಲ್ಲಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಸುತ್ತದೆ ಎಂಬುದರ ಆಧಾರದ ಮೇಲೆ ಸಿನಿಮಾದ ಒಟ್ಟಾರೆ ಕಲೆಕ್ಷನ್ ನಿರ್ಧಾರವಾಗಲಿದೆ. ದೀಪಾವಳಿ ಹಬ್ಬವನ್ನು ಅಕ್ಟೋಬರ್ 20, 21 ಹಾಗೂ 22ರಂದು ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಸಿನಿಮಾ ವಿಶ್ವ ಮಟ್ಟದಲ್ಲಿ ಕನಿಷ್ಠ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಬೇಕು. ಒಂದೊಮ್ಮೆ ಇದು ಸಂಭವಿಸಿದಲ್ಲಿ ಸಿನಿಮಾದ ಒಟ್ಟಾರೆ ಕಲೆಕ್ಷನ್ 1000 ಕೋಟಿ ರೂಪಾಯಿ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ
Image
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
Image
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ
Image
‘ಕಾಂತಾರ: ಚಾಪ್ಟರ್ 1’; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು

ಇದನ್ನೂ ಓದಿ: ಹಿಂದಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಭರ್ಜರಿ ಕಲೆಕ್ಷನ್; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ

‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ರಿಷಬ್ ಅವರು ದೈವದ ಕಥೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ‘ಕಾಂತಾರ: ಚಾಪ್ಟರ್ 2’ ಸಿನಿಮಾ ಕೂಡ ಮಾಡೋದಾಗಿ ಘೋಷಿಸಿದ್ದಾರೆ. ಆ ಸಿನಿಮಾ ಸಿದ್ಧವಾದರೆ ಅದರ ಬಜೆಟ್ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.