ಬಿಗ್ಬಾಸ್ ಮೇಲೆ ಕಣ್ಣು ಬಿದ್ದಿದೆ ಎಂದ ಸುದೀಪ್ ಧನ್ಯವಾದ ಹೇಳಿದ್ದು ಯಾರಿಗೆ?
Bigg Boss Kannada season 12: ಬಿಗ್ಬಾಸ್ ಕನ್ನಡ 12 ಶೋಗೆ ಸಣ್ಣ ಸಮಸ್ಯೆ ಎದುರಾಗಿತ್ತು. ಮನೆಯ ಸ್ಪರ್ಧಿಗಳನ್ನು ಮನೆಯಿಂದ ಸ್ಥಳಾಂತರ ಮಾಡಿ ರೆಸಾರ್ಟ್ನಲ್ಲಿ ಇಡಲಾಗಿತ್ತು. ಆದರೆ ಸುದೀಪ್ ಹಾಗೂ ಇನ್ನೂ ಕೆಲವರ ಪ್ರಯತ್ನದಿಂದ ಕೇವಲ 24 ಗಂಟೆಗಳಲ್ಲಿ ಮತ್ತೆ ಸ್ಪರ್ಧಿಗಳೆಲ್ಲ ಮನೆ ಸೇರಿದರು. ಆ ಘಟನೆಯ ಬಳಿಕ ಮೊದಲ ಬಾರಿಗೆ ಸುದೀಪ್ ವಾರದ ಪಂಚಾಯಿತಿ ನಡೆಸಿಕೊಡಲು ಬಂದಿದ್ದು ಘಟನೆಯ ಬಗ್ಗೆ ಮಾತನಾಡಿದರು.

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಪ್ರಾರಂಭವಾಗಿ ಎರಡು ವಾರಗಳಾಗಿವೆ. 12 ಸೀಸನ್ ಈ ವರೆಗೆ ನಡೆದಿದೆ. ಒಂದು ಒಟಿಟಿ ಶೋ ಸಹ ನಡೆದಿದೆ. ಆದರೆ ಕೋವಿಡ್ ಹೊರತಾಗಿ ಇನ್ಯಾವ ವರ್ಷವೂ ಸಹ ಬಿಗ್ಬಾಸ್ ನಿಂತಿಲ್ಲ. ಆದರೆ ಈ ವರ್ಷ ಒಂದು ದಿನದ ಮಟ್ಟಿಗೆ ಶೋ ನಿಂತಿತ್ತು. ಬಿಗ್ಬಾಸ್ ಮನೆಯ ಸ್ಪರ್ಧಿಗಳನ್ನು ಮನೆಯಿಂದ ಸ್ಥಳಾಂತರ ಮಾಡಿ ರೆಸಾರ್ಟ್ನಲ್ಲಿ ಇಡಲಾಗಿತ್ತು. ಆದರೆ ಸುದೀಪ್ ಹಾಗೂ ಇನ್ನೂ ಕೆಲವರ ಪ್ರಯತ್ನದಿಂದ ಕೇವಲ 24 ಗಂಟೆಗಳಲ್ಲಿ ಮತ್ತೆ ಸ್ಪರ್ಧಿಗಳೆಲ್ಲ ಮನೆ ಸೇರಿದರು. ಆ ಘಟನೆಯ ಬಳಿಕ ಮೊದಲ ಬಾರಿಗೆ ಸುದೀಪ್ ವಾರದ ಪಂಚಾಯಿತಿ ನಡೆಸಿಕೊಡಲು ಬಂದಿದ್ದು ಘಟನೆಯ ಬಗ್ಗೆ ಮಾತನಾಡಿದರು.
‘ಬಿಗ್ಬಾಸ್ ಕನ್ನಡಿಗರ ಹೆಮ್ಮೆಯ ಶೋ, 12 ಸೀಸನ್ಗಳಿಂದಲೂ ಇದನ್ನು ಕನ್ನಡಿಗರು ಬೆಳೆಸಿಕೊಂಡು ಬಂದಿದ್ದಾರೆ. ಇದನ್ನು ಹಾಳು ಮಾಡುವುದು ಸುಲಭದ ಕೆಲಸವಲ್ಲ. ಕನ್ನಡಿಗರ ಪ್ರೀತಿ ಇರುವವರೆಗೆ ನಾವು ಅಂದರೆ ಬಿಗ್ಬಾಸ್ ಮುನ್ನುಗ್ಗುತ್ತಲೇ ಇರುತ್ತದೆ. ಇತ್ತೀಚೆಗೆ ಎದುರಾದ ಸಮಸ್ಯೆಯ ಸಮಯದಲ್ಲಿ ಬಿಗ್ಬಾಸ್ ಜ್ಯೋತಿ ಆರದಂತೆ ಕಾಪಾಡಿದ ಎಲ್ಲರಿಗೂ ಧನ್ಯವಾದ’ ಎಂದರು.
ಮುಂದುವರೆದು, ‘ಕೆಲ ದಿನಗಳ ಹಿಂದೆ ಆದ ಸಮಸ್ಯೆಗೂ ಬಿಗ್ಬಾಸ್ಗೂ ಯಾವುದೇ ಸಂಬಂಧ ಇರಲಿಲ್ಲ. ಆದರೆ ಬಿಗ್ಬಾಸ್ ಎಂಬುದೇ ಒಂದು ಅಡ್ರೆಸ್ ಆಗಿಬಿಟ್ಟಿರುವಾಗ ಕೆಲವರು ಆ ಅಡ್ರೆಸ್ ಅನ್ನು ಕ್ಲೋಸ್ ಮಾಡುವ ಪ್ರಯತ್ನ ಮಾಡಿದರು. ಆದರೆ ಅದು ಸಾಧ್ಯವಿಲ್ಲ. 12 ಸೀಸನ್ಗಳಿಂದಲೂ ಈ ಶೋ ಕೇವಲ ಶೋ ಆಗಿ ಮಾತ್ರವೇ ಉಳಿದಿಲ್ಲ. ಇದು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದೆ, ಹಲವಾರು ಜನರ ಜೀವನವನ್ನೇ ಬದಲಾಯಿಸಿದೆ. ಹಾಗಾಗಿ ಕೆಲವರ ಕಣ್ಣು ನಮ್ಮ ಶೋ ಮೇಲೆ ಬಿದ್ದಿರಲೂ ಬಹುದು ಎಂದರು ಸುದೀಪ್.
ಇದನ್ನೂ ಓದಿ:ಗಂಭೀರತೆ ಇಲ್ಲ, ಸ್ಪರ್ಧಿಗಳ ಹೊರಗೆ ಕಳಿಸಲು ಬಿಗ್ಬಾಸ್ ಬಾಗಿಲು ತೆಗೆಸಿದ ಕಿಚ್ಚ
ಸಮಸ್ಯೆ ಒಂದು ಎದುರಾದಾಗ ನಮಗೆ ಬೆಂಬಲ ನೀಡಿದ, ಸಹಾಯ ನೀಡಿದವರ ಹೆಸರನ್ನು ನಾನು ತೆಗೆದುಕೊಳ್ಳಲೇ ಬೇಕು. ‘ನಮ್ಮ ಡಿಕೆ ಸಾಹೇಬರಿಗೆ ಹಾಗೂ ಆತ್ಮೀಯ ಗೆಳೆಯ ನಲಪಾಡ್ ಅವರಿಗೆ ಧನ್ಯವಾದಗಳು. ಜೊತೆಗೆ ಈ ವಿವಾದದಲ್ಲಿ ಬಿಗ್ಬಾಸ್ ಪಾತ್ರ ಏನಿಲ್ಲ. ಬಿಗ್ಬಾಸ್ ಕಡೆಯಿಂದ ತಪ್ಪು ಆಗಿಲ್ಲ ಎಂದು ಸ್ಪಷ್ಟಪಡಿಸಿದ, ಬಿಗ್ಬಾಸ್ ಮತ್ತೆ ಶುರುವಾಗಲು ನೆರವಾದ ಆಡಳಿತ ವಿಭಾಗದ ಅಧಿಕಾರಿಗಳಿಗೆ ಧನ್ಯವಾದಗಳು ಎಂದರು ಸುದೀಪ್.
ಬಿಗ್ಬಾಸ್ ಸೆಟ್ ನಿರ್ಮಿಸಲಾಗಿರುವ ಜಾಲಿವುಡ್ ಸ್ಟುಡಿಯೋಕ್ಕೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ನೊಟೀಸ್ ನೀಡಿದ್ದರು. ನೊಟೀಸ್ಗೆ ಸ್ಪಂದಿಸದ ಕಾರಣಕ್ಕೆ ಜಾಲಿವುಡ್ಗೆ ಜಿಲ್ಲಾಡಳಿತ ಬೀಗ ಜಡಿದಿತ್ತು, ಹಾಗಾಗಿ ಜಾಲಿವುಡ್ನ ಒಳಗೆ ಇದ್ದ ಬಿಗ್ಬಾಸ್ ಮನೆಯ ಸ್ಪರ್ಧಿಗಳನ್ನು ಸಹ ಹೊರಗೆ ಕಳಿಸಲಾಗಿತ್ತು. ಬಳಿಕ ಸುದೀಪ್ ಅವರು ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡ ತರುವಾಯ ಬಿಗ್ಬಾಸ್ಗೆ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಲಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




