ಮದುವೆ ಆಗ್ತೀಯ ಎಂದ ತ್ರಿವಿಕ್ರಮ್: ರಕ್ಷಿತಾ ಹೇಳಿದ್ದೇನು?

Bigg Boss Kannada season 12: ಬಿಗ್​​ಬಾಸ್ ಮನೆಗೆ ಅತಿಥಿಗಳಾಗಿ ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ, ಚೈತ್ರಾ ಕುಂದಾಪುರ ಅವರುಗಳು ಬಂದಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿ ಈ ವಾರ ಆಟ, ಊಟ, ಮನೊರಂಜನೆಗಳು ನಡೆಯುತ್ತಿವೆ. ಈ ನಡುವೆ ಅತಿಥಿಯಾಗಿ ಬಂದಿರುವ ತ್ರಿವಿಕ್ರಮ್, ರಕ್ಷಿತಾ ಶೆಟ್ಟಿಯನ್ನು ತನ್ನನ್ನು ಮದುವೆ ಆಗುವುದಾಗಿ ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಕೊಟ್ಟ ಉತ್ತರ ಏನು?

ಮದುವೆ ಆಗ್ತೀಯ ಎಂದ ತ್ರಿವಿಕ್ರಮ್: ರಕ್ಷಿತಾ ಹೇಳಿದ್ದೇನು?
Rakshita Trivikram

Updated on: Nov 28, 2025 | 7:54 AM

ಬಿಗ್​​ಬಾಸ್ (Bigg Boss) ಮನೆಗೆ ಅತಿಥಿಗಳು ಬಂದಿದ್ದಾರೆ. ಉಗ್ರಂ ಮಂಜು, ಮೋಕ್ಷಿತಾ, ತ್ರಿವಿಕ್ರಮ್, ರಜತ್ ಮತ್ತು ಚೈತ್ರಾ ಕುಂದಾಪುರ ಅವರುಗಳು ಅತಿಥಿಗಳಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಂದ ಅತಿಥಿಗಳನ್ನು ಮನರಂಜಿಸುವುದು ಮನೆ ಸದಸ್ಯರ ಕೆಲಸ ಆಗಿದೆ. ಮನೆ ಸದಸ್ಯರಿಗೆ ಅವರ ಸೇವೆಯ ಆಧಾರದಲ್ಲಿ ಪಾಯಿಂಟ್ಸ್​​ಗಳು ಸಿಗುತ್ತಿವೆ. ಮೊದಲ ದಿನ ಅತಿಥಿಗಳಿಗೂ ಮನೆ ಸದಸ್ಯರಿಗೂ ಸಾಕಷ್ಟು ವಿಷಯಗಳಲ್ಲಿ ಮನಸ್ಥಾಪ ಆಗಿತ್ತು. ಆದರೆ ಎರಡನೇ ದಿನ ಎಲ್ಲವೂ ಸರಿ ಹೋಗಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ.

ಅತಿಥಿಗಳು ಅವಕಾಶ ಸಿಕ್ಕಾಗೆಲ್ಲ ಮನೆ ಮಂದಿಯನ್ನು ಗೋಳು ಹೊಯ್ದುಕೊಂಡಿದ್ದಾರೆ. ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಆದರೆ ನಿನ್ನೆಯ ಎಪಿಸೋಡ್​​ನಲ್ಲಿ ಅಷ್ಟೇನೂ ಜಗಳಗಳು ನಡೆಯಲಿಲ್ಲ. ಆದರೆ ಕೆಲವು ವಿಷಯಗಳು ಗಮನ ಸೆಳೆದವು. ನಿನ್ನೆ ಎಪಿಸೋಡ್​​ನಲ್ಲಿ ರಕ್ಷಿತಾ ಶೆಟ್ಟಿ ಅವರು ತಾವು ಮದುವೆ ಆಗುವ ಹುಡುಗನ ಬಗ್ಗೆ ಅತಿಥಿಗಳೆದುರು ಮಾತನಾಡಿದ್ದು ವಿಶೇಷವಾಗಿತ್ತು. ತಾವು ಮದುವೆ ಆಗುವ ಹುಡುಗ ರೈತ ಆಗಿರಬೇಕು ಎಂದು ರಕ್ಷಿತಾ ಹೇಳಿದರು. ಆದರೆ ಅವನು ನನಗೆ ವ್ಲಾಗಿಂಗ್ ಮಾಡಲು ಅವಕಾಶ ಕೊಡಬೇಕು, ವ್ಲಾಗಿಂಗ್​​ಗೆ ಅವಕಾಶ ಕೊಡಲಿಲ್ಲ ಎಂದರೆ ಅವನು ಬಿಟ್ಟು ಹೋರಟು ಹೋಗಬಹುದು’ ಎಂದು ರಕ್ಷಿತಾ ಹೇಳಿದರು.

ನೀವು ವ್ಲಾಗಿಂಗ್ ಮಾಡಿದರೆ ಅವನ ಕೆಲಸಕ್ಕೆ ಡಿಸ್ಟರ್ಬ್ ಆಗೊಲ್ಲವಾ? ಎಂಬ ಪ್ರಶ್ನೆಗೆ ಅವನು ಅವನ ಪಾಡಿಗೆ ಕೆಲಸ ಮಾಡಿಕೊಂಡು ಇರಲಿ ನಾನು ವ್ಲಾಗಿಂಗ್ ಮಾಡಿಕೊಂಡಿರುತ್ತೇನೆ ನಾನು ಅವನಿಗೆ ಡಿಸ್ಟರ್ಬ್ ಮಾಡುವುದಿಲ್ಲ ಎಂದರು ರಕ್ಷಿತಾ. ಅದೆಲ್ಲ ಆದ ಬಳಿಕ ಮನೆ ಮಹಿಳೆಯರು ಫ್ಯಾಷನ್ ಶೋ ಮಾಡಲು ಸಜ್ಜಾಗುತ್ತಿದ್ದರು. ಈ ವೇಳೆ ತ್ರಿವಿಕ್ರಮ್, ‘ರಕ್ಷಿತಾ ನಾನು ನಿನಗೆ ವ್ಲಾಗ್ ಮಾಡಲು ಅವಕಾಶ ಮಾಡಿಕೊಡುತ್ತೇನೆ. ವ್ಲಾಗಿಂಗ್ ಬೇಡ ಅನ್ನೊಲ್ಲ’ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಅದು ರಕ್ಷಿತಾಗೆ ಸರಿಯಾಗಿ ಕೇಳಲಿಲ್ಲ. ಆ ಬಳಿಕ ತ್ರಿವಿಕ್ರಮ್, ‘ರಕ್ಷಿತಾ ನನ್ನನ್ನು ಮದುವೆ ಆಗಿ, ನಾನು ನಿಮಗೆ ವ್ಲಾಗಿಂಗ್ ಮಾಡಲು ಅವಕಾಶ ಮಾಡಿಕೊಡುತ್ತೇನೆ’ ಎಂದರು. ಆಗ ರಕ್ಷಿತಾ, ಮುಗ್ದವಾಗಿ, ‘ಹೌದ, ಒಳ್ಳೆಯದು, ನೀವು ನನ್ನ ಮದುವೆಗೆ ಬರಬೇಕು’ ಎಂದರು. ರಕ್ಷಿತಾರ ಉತ್ತರ ಕೇಳಿ ಅತಿಥಿಗಳೆಲ್ಲ ಬಿದ್ದು ಬಿದ್ದು ನಕ್ಕರು. ತ್ರಿವಿಕ್ರಮ್ ಸಹ ಜೋರಾಗಿ ನಕ್ಕರು.

ರಕ್ಷಿತಾ, ಬಿಗ್​​ಬಾಸ್ ಮನೆಯಲ್ಲಿ ಬಹಳ ಚಿಕ್ಕ ವಯಸ್ಸಿನವರು. ಹೊರಗೆ ಅವರು ತಮ್ಮ ಅಡುಗೆ ವ್ಲಾಗ್ ಇನ್ನಿತರೆ ವ್ಲಾಗ್​​​ಗಳಿಂದ ಜನಪ್ರಿಯ. ಅವರು ಕರ್ನಾಟಕ ಮೂಲದವರಾದರು ನೆಲೆಸಿರುವುದು ಮುಂಬೈನಲ್ಲಿ ಹಾಗಾಗಿ ಕನ್ನಡ ಸರಿಯಾಗಿ ಬಾರದು. ಆದರೆ ಕಷ್ಟಪಟ್ಟು ಕನ್ನಡ ಮಾತನಾಡುತ್ತಾರೆ. ಇದು ವೀಕ್ಷಕರಿಗೆ ಇಷ್ಟವಾಗಿದೆ. ಅಲ್ಲದೆ, ರಕ್ಷಿತಾ ಬಹಳ ಚೆನ್ನಾಗಿ ಬಿಗ್​​ಬಾಸ್ ಮನೆಯಲ್ಲಿ ಆಟವಾಡುತ್ತಿದ್ದಾರೆ. ಸರಿಯನ್ನು ಸರಿಯೆಂದು, ತಪ್ಪನ್ನು ತಪ್ಪೆಂದು ಹೇಳುತ್ತಿದ್ದಾರೆ. ರಕ್ಷಿತಾರ ಈ ಗುಣವೂ ಸಹ ಪ್ರೇಕ್ಷಕರಿಗೆ ಇಷ್ಟವಾಗಿದೆ. ಜೊತೆಗೆ ಅವರು ಮುಗ್ಧವಾಗಿ ಆಡುವ ಮಾತುಗಳು ಸಹ ಜನರಿಗೆ ಇಷ್ಟವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ