ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯಲ್ಲಿ ತಾವು ಹೇಳಿದ್ದೇ ರೂಲ್ಸ್ ಎಂಬ ರೀತಿಯಲ್ಲಿ ಆಡುತ್ತಿದ್ದಾರೆ. ಅವರ ಆಟಕ್ಕೆ ಎಲ್ಲ ಕಡೆಗಳಿಂದ ಟೀಕೆ ವ್ಯಕ್ತವಾಗಿದೆ. ಅಕ್ಟೋಬರ್ 29ರ ಎಪಿಸೋಡ್ನಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್ನಲ್ಲೂ ಅವರು ಕೆಟ್ಟ ಆಟ ಆಡಿ ಔಟ್ ಆಗಿದ್ದಾರೆ. ನ್ಯಾಯಯುತವಾಗಿ ಆಡಿದ ಹನುಮಂತ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಈ ಮಧ್ಯೆ ಮಂಜು ಹಾಗೂ ಮೋಕ್ಷಿತಾ ಮಧ್ಯೆ ಕಿತ್ತಾಟ ಶುರುವಾಗಿದೆ.
ಕ್ಯಾಪ್ಟನ್ ಆಗಲು ಒಂದು ಟಾಸ್ಕ್ ನೀಡಲಾಗಿತ್ತು. ಇದರ ಅನುಸಾರ ಒಂದು ಬಲೆ ಆಕಾರದ ವೇದಿಕೆ ಸಿದ್ಧಪಡಿಸಲಾಗಿತ್ತು. ಒಳಗೆ ಬಾಕ್ಸ್ನಲ್ಲಿ ವಿವಿಧ ಸ್ಪರ್ಧಿಯ ಫೋಟೋ ಇಡಲಾಗಿತ್ತು. ಪ್ರತಿ ಸ್ಪರ್ಧಿ ಬೇರೆಯವರ ಫೋಟೋನ ಹೊರಕ್ಕೆ ತರಬೇಕು. ಅಂತಿಮವಾಗಿ ಯಾರ ಫೋಟೋ ಇರುತ್ತದೆಯೋ ಅವರು ಆಟದಿಂದ ಹೊರಕ್ಕೆ ಇರುತ್ತಾರೆ.
ಈ ವೇಳೆ ಮಂಜು ಒಂದು ಪ್ಲ್ಯಾನ್ ಮಾಡಿದರು. ತಮ್ಮ ಗ್ಯಾಂಗ್ನ ಎಲ್ಲರನ್ನೂ ಸೇರಿಸಿದರು. ಈ ವೇಳೆ ಗ್ಯಾಂಗ್ನವರ ಬಳಿ ಒಪ್ಪಂದವನ್ನೂ ಮಾಡಿಕೊಂಡರು. ತಮ್ಮ ಗುಂಪಿನವರನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಬೇಕು ಎಂದು ಅವರು ಡೀಲ್ ಮಾಡಿಕೊಂಡರು. ಆ ಬಳಿಕ ಆಟದಲ್ಲಿ ಎಲ್ಲರ ವಿರುದ್ಧ ಅವರು ತಿರುಗಿ ಬಿದ್ದರು. ಉಸ್ತುವಾರಿ ಹೇಳಿದ ಮಾತನ್ನು ಮೀರಿ ನಡೆದುಕೊಂಡರು. ಅವರು ಉದ್ದೇಶ ಪೂರ್ವಕವಾಗಿ ಪೌಲ್ ಕೂಡ ಮಾಡಿದರು. ಹೀಗಾಗಿ ಅವರನ್ನು ಆಟದಿಂದ ಹೊರಕ್ಕೆ ಇಡಲಾಯಿತು.
ಈ ವೇಳೆ ಮಂಜುಗೆ ಕ್ಲೋಸ್ ಎನಿಸಿಕೊಂಡಿರುವ ಮೋಕ್ಷಿತಾ ಅವರು ಬುದ್ಧಿವಾದ ಹೇಳಲು ಬಂದರು. ಇದರಿಂದ ಸಿಟ್ಟಿಗೆದ್ದ ಮಂಜು, ‘ನಿಮಗೆ ಸಂಬಂಧವೇ ಇಲ್ಲ ಈ ವಿಚಾರ. ದಯವಿಟ್ಟು ಈ ವಿಚಾರಕ್ಕೆ ಬರಬೇಡ’ ಎಂದು ಆವಾಜ್ ಹಾಕಿದರು. ಆ ಬಳಿಕ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ: ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಇತ್ತ ಹನುಮಂತ ಯಾವುದೇ ಒಪ್ಪಂದ ಮಾಡಿಕೊಳ್ಳದೆ ತಮ್ಮ ಪಾಡಿಗೆ ತಾವು ಆಡುತ್ತಾ ಬಂದರು. ಕೊನೆಯಲ್ಲಿ ಅವರು ಕ್ಯಾಪ್ಟನ್ ಆದರು. ಉಸ್ತುವಾರಿ ವಹಿಸಿಕೊಂಡಿದ್ದ ತ್ರಿವಿಕ್ರಂ ಕೂಡ ಇದೇ ಮಾತನ್ನು ಹೇಳಿದರು. ‘ನ್ಯಾಯಯುತವಾಗಿ ಆಡಿದ ವ್ಯಕ್ತಿ ಅಲ್ಲಿದ್ದಾನೆ (ಕ್ಯಾಪ್ಟನ್ ರೂಂನಲ್ಲಿ)’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.