AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಕ್ಷಿತಾ ಹೇಳಿಕೆ ಇಟ್ಟುಕೊಂಡು ಅಪಪ್ರಚಾರ? ನಟಿ ಹೇಳಿದ್ದೇನು, ಅರ್ಥೈಸಿಕೊಂಡಿದ್ದು ಹೇಗೆ?

ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಭಾವುಕವಾಗಿ ಹಂಚಿಕೊಂಡಿದ್ದಾರೆ. ಅವರು ಇನ್ನೂ ಮದುವೆಯಾಗಿಲ್ಲ ಎಂಬುದನ್ನು ಬಹಿರಂಗಪಡಿಸಿ, ವಿಕಲಾಂಗ ಸಹೋದರನ ಆರೈಕೆಯ ಹೊಣೆಗಾರಿಕೆಯಿಂದಾಗಿ ಮದುವೆ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. ಕುಟುಂಬದ ಒತ್ತಡ ಮತ್ತು ತಮ್ಮ ನಿರ್ಧಾರದಿಂದಾಗಿ ತಂದೆ-ತಾಯಿಗೆ ನೋವುಂಟಾಗಿದೆ ಎಂದು ಅವರು ಚಿಂತಿಸುತ್ತಿದ್ದಾರೆ.

ಮೋಕ್ಷಿತಾ ಹೇಳಿಕೆ ಇಟ್ಟುಕೊಂಡು ಅಪಪ್ರಚಾರ? ನಟಿ ಹೇಳಿದ್ದೇನು, ಅರ್ಥೈಸಿಕೊಂಡಿದ್ದು ಹೇಗೆ?
ಮೋಕ್ಷಿತಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 30, 2024 | 7:22 AM

Share

ಬಿಗ್ ಬಾಸ್ ಮನೆಯಲ್ಲಿರುವ ಮೋಕ್ಷಿತಾ ಪೈ ಅವರು ತುಂಬಾನೇ ಸಾಫ್ಟ್ ಎಂಬ ರೀತಿಯಲ್ಲಿ ಎಲ್ಲರೂ ನೋಡುತ್ತಿದ್ದರು. ಅವರು ಅಗತ್ಯ ಇದ್ದಾಗ ಮಾತ್ರ ಮಾತನಾಡುತ್ತಾರೆ ಎಂಬ ಕಲ್ಪನೆ ಅನೇಕರದ್ದಾಗಿತ್ತು. ಅಷ್ಟೇ ಅಲ್ಲ ಅವರು ಜೋರು ಧ್ವನಿಯಲ್ಲಿ ಮಾತನಾಡಿದ್ದೂ ಕಡಿಮೆ. ಆದರೆ, ಈಗ ಅವರು ಬದಲಾಗಿದ್ದಾರೆ. ಅವರು ಅಗ್ರೆಸ್ಸಿವ್ ಆಟಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಿರುವಾಗಲೇ ಮೋಕ್ಷಿತಾ ಅವರು ತೀರಾ ವೈಯಕ್ತಿಕ ವಿಚಾರವನ್ನು ಹೇಳಿಕೊಂಡಿದ್ದಾರೆ. ಇದನ್ನು ಕೆಲವರು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ.

ಪ್ರತಿ ವರ್ಷ ವಿಗ್ ಬಾಸ್​ನಲ್ಲಿ ಒಂದು ಚಟುವಟಿಕೆ ಇರುತ್ತದೆ. ತಮ್ಮ ವೈಯಕ್ತಿಕ ಜೀವನದಲ್ಲಿ ಈವರೆಗೆ ಹೇಳಿಕೊಳ್ಳದೇ ಇರುವ ವಿಚಾರವನ್ನು ಹೇಳಿಕೊಳ್ಳಲು ಅವಕಾಶ ಇರುತ್ತದೆ. ಈ ವರ್ಷವೂ ಅದು ನಡೆದಿದೆ. ಬಿಗ್ ಬಾಸ್​ನ ಕನ್ಫೆಷನ್​ ರೂಂಗೆ ಬಂದು ಎಲ್ಲರೂ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಮೋಕ್ಷಿತಾ ಪೈ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

ಮೋಕ್ಷಿತಾಗೆ ಈಗ 29 ವರ್ಷ. ಅವರು ಈವರೆಗೆ ಮದುವೆ ಆಗಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ದೊಡ್ಮನೆಯಲ್ಲಿ ವಿವರಿಸಿದ್ದಾರೆ. ಈ ವಿಚಾರದಲ್ಲಿ ತಂದೆ-ತಾಯಿಗೆ ಸಾಕಷ್ಟು ನೋವು ಕೊಟ್ಟೆ ಎನ್ನುವ ಭಾವನೆ ಅವರನ್ನು ಕಾಡಿದೆ.

‘ನನಗೆ ಮದುವೆ ಆಗಬೇಕು ಎಂದು ಕುಟುಂಬದವರು ಹೇಳುತ್ತಲೇ ಬರುತ್ತಿದ್ದರು. ಕಳೆದ ಒಂದು ವರ್ಷದಿಂದ ಈ ವಿಚಾರಲ್ಲಿ ಒತ್ತಡ ಹಾಕುತ್ತಿದ್ದಾರೆ. ಆದರೆ, ನಾನು ಮದುವೆ ಆಗಿಲ್ಲ. ಇದಕ್ಕೆ ಕಾರಣವೂ ಇದೆ. ನನಗೆ ವಿಕಲ ಚೇತನ ತಮ್ಮ ಇದ್ದಾನೆ. ಆತನಿಗೇ ನಾನೇ ಎಲ್ಲ. ನಾನು ಮದುವೆ ಆಗಿ ಹೋದರೆ ಆತನನ್ನು ನೋಡಿಕೊಳ್ಳೋದು ಯಾರು ಎಂಬ ಪ್ರಶ್ನೆ ನನ್ನದು’ ಎಂದಿದ್ದಾರೆ ಮೋಕ್ಷಿತಾ.

‘ನಾನು ಮದುವೆ ಆದರೆ, ಆ ಹುಡುಗ ನನ್ನನ್ನು ನನ್ನ ಕುಟುಂಬದಿಂದ ದೂರ ಮಾಡಿ ಬಿಡುತ್ತಾನೇನೋ ಎನ್ನುವ ಭಯ ಇದೆ. ಈ ಕಾರಣದಿಂದಲೇ ನನಗೆ ಮದುವೆ ಆಗೋಕೆ ಭಯ. ಈ ವಿಚಾರದಲ್ಲಿ ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೇನೆ. ದಯವಿಟ್ಟು ಕ್ಷಮಿಸಿ’ ಎಂದು ಮೋಕ್ಷಿತಾ ತಂದೆ-ತಾಯಿ ಬಳಿ ಕೋರಿಕೊಂಡಿದ್ದಾರೆ. ‘ಗಂಡಸರು ಕೆಟ್ಟವರು ಎಂದು ಮೋಕ್ಷಿತಾ ಹೇಳಿದ್ದಾರೆ’ ಎಂಬುದಾಗಿ ಕೆಲವರು ಅರ್ಥೈಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡುವ ಕೆಲಸವನ್ನು ಫ್ಯಾನ್ಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ತಡವಾಗುತ್ತಿದೆ ಮೋಕ್ಷಿತಾ ಮದುವೆ; ಕಣ್ಣೀರು ಹಾಕುತ್ತಾ ಕಾರಣ ತಿಳಿಸಿದ ಪಾರು

ನಟಿಯರು ಏಕೆ ಮದುವೆ ಆಗಿಲ್ಲ ಎಂಬ ವಿಚಾರವನ್ನು ಸಾಮಾನ್ಯವಾಗಿ ಮುಚ್ಚಿಡುತ್ತಾರೆ. ಆದರೆ, ಮೋಕ್ಷಿತಾ ಅವರು ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಅವರ ಆಟ ದಿನ ಕಳೆದಂತೆ ಇಷ್ಟ ವೀಕ್ಷಕರಿಗೆ ಇಷ್ಟ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
ಕಂಠ ಪೂರ್ತಿ ಕುಡಿದು ಬಂದು ಶಾಲೆಯಲ್ಲಿ ಮಲಗಿದ ಮುಖ್ಯ ಶಿಕ್ಷಕ: ವಿಡಿಯೋ ನೋಡಿ
ಕಂಠ ಪೂರ್ತಿ ಕುಡಿದು ಬಂದು ಶಾಲೆಯಲ್ಲಿ ಮಲಗಿದ ಮುಖ್ಯ ಶಿಕ್ಷಕ: ವಿಡಿಯೋ ನೋಡಿ
ವಿಮಾನಯಾನ ಸಚಿವರೊಂದಿಗೆ ನಡೆದ ಸಭೆ ಅತ್ಯಂತ ಫಲಪ್ರದವಾಗಿತ್ತು: ಪಾಟೀಲ್
ವಿಮಾನಯಾನ ಸಚಿವರೊಂದಿಗೆ ನಡೆದ ಸಭೆ ಅತ್ಯಂತ ಫಲಪ್ರದವಾಗಿತ್ತು: ಪಾಟೀಲ್
ಮಾಲ್ಡೀವ್ಸ್​​ನಲ್ಲಿ ಪ್ರಧಾನಿ ಮೋದಿಗೆ ಅಧ್ಯಕ್ಷ ಮುಯಿಝು ಅವರಿಂದ ಸ್ವಾಗತ
ಮಾಲ್ಡೀವ್ಸ್​​ನಲ್ಲಿ ಪ್ರಧಾನಿ ಮೋದಿಗೆ ಅಧ್ಯಕ್ಷ ಮುಯಿಝು ಅವರಿಂದ ಸ್ವಾಗತ
ನ್ಯಾಯಮೂರ್ತಿ ಕುನ್ಹಾ ವರದಿಯನ್ನು ಸರ್ಕಾರ ಅಂಗೀಕರಿಸಿದೆ: ಪರಮೇಶ್ವರ್
ನ್ಯಾಯಮೂರ್ತಿ ಕುನ್ಹಾ ವರದಿಯನ್ನು ಸರ್ಕಾರ ಅಂಗೀಕರಿಸಿದೆ: ಪರಮೇಶ್ವರ್
ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆಯುವ ಪ್ರಯತ್ನದಲ್ಲಿರುವ ಎಐಸಿಸಿ
ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆಯುವ ಪ್ರಯತ್ನದಲ್ಲಿರುವ ಎಐಸಿಸಿ
ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಣೆ ಈ ಮಳೆಗಾಲದಲ್ಲಿ ಹೆಚ್ಚುತ್ತಿದೆ!
ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಣೆ ಈ ಮಳೆಗಾಲದಲ್ಲಿ ಹೆಚ್ಚುತ್ತಿದೆ!
‘ಅವರನ್ನು ಕಳಿಸು’; ವೀರಪ್ಪನ್ ಬಳಿ ಅಂಗಲಾಚಿದ್ದ ರಾಜ್​ಕುಮಾರ್
‘ಅವರನ್ನು ಕಳಿಸು’; ವೀರಪ್ಪನ್ ಬಳಿ ಅಂಗಲಾಚಿದ್ದ ರಾಜ್​ಕುಮಾರ್
ರಾಜಸ್ಥಾನ: ಪ್ರಾರ್ಥನೆ ವೇಳೆ ಶಾಲೆಯ ಮೇಲ್ಛಾವಣಿ ಕುಸಿತ
ರಾಜಸ್ಥಾನ: ಪ್ರಾರ್ಥನೆ ವೇಳೆ ಶಾಲೆಯ ಮೇಲ್ಛಾವಣಿ ಕುಸಿತ