ಬಿಗ್​​ಬಾಸ್ ಗೆದ್ದ ಟಿವಿ ನಟಿ ಅನುಮೋಲ್, ಸಿಕ್ಕ ಬಹುಮಾನವೆಷ್ಟು?

Bigg Boss Malayalam: ಬಿಗ್​​ಬಾಸ್ ಶೋನಲ್ಲಿ ಮಲಯಾಳಂ ಟಿವಿ ನಟಿ ಅನುಮೋಲ್ ಅವರು ವಿಜೇತರಾಗಿದ್ದಾರೆ. ಸಾಮಾನ್ಯರಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ನೀಡಿದ್ದ ಅನೀಶ್ ತಾರಾಯಿಲ್ ಅವರು ರನ್ನರ್ ಅಪ್ ಎನಿಸಿಕೊಂಡಿದ್ದಾರೆ. ಬಿಗ್​​ಬಾಸ್ ಶೋ ಗೆದ್ದ ಅನುಮೋಲ್​​ಗೆ ಭರ್ಜರಿ ನಗದು ಬಹುಮಾನ ಹಾಗೂ ದುಬಾರಿ ಉಡುಗೊರೆಗಳು ದೊರೆತಿವೆ. ವಿಜೇತರಿಗೆ ಸಿಕ್ಕ ನಗದು ಬಹುಮಾನ ಎಷ್ಟು?

ಬಿಗ್​​ಬಾಸ್ ಗೆದ್ದ ಟಿವಿ ನಟಿ ಅನುಮೋಲ್, ಸಿಕ್ಕ ಬಹುಮಾನವೆಷ್ಟು?
Anumol

Updated on: Nov 11, 2025 | 5:20 PM

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಇನ್ನೂ ಚಾಲ್ತಿಯಲ್ಲಿದೆ. ಶೋ ಶುರುವಾಗಿ ಕೆಲವೇ ವಾರಗಳಷ್ಟೆ ಆಗಿದೆ. ಆದರೆ ನೆರೆಯ ಮಲಯಾಳಂನಲ್ಲಿ ಬಿಗ್​​ಬಾಸ್ ಶೋ ನಿನ್ನೆಯಷ್ಟೆ ಮುಕ್ತಾಯವಾಗಿದೆ. ಬಿಗ್​​ಬಾಸ್ ಶೋನಲ್ಲಿ ಮಲಯಾಳಂ ಟಿವಿ ನಟಿ ಅನುಮೋಲ್ ಅವರು ವಿಜೇತರಾಗಿದ್ದಾರೆ. ಸಾಮಾನ್ಯರಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ನೀಡಿದ್ದ ಅನೀಶ್ ತಾರಾಯಿಲ್ ಅವರು ರನ್ನರ್ ಅಪ್ ಎನಿಸಿಕೊಂಡಿದ್ದಾರೆ. ಬಿಗ್​​ಬಾಸ್ ಶೋ ಗೆದ್ದ ಅನುಮೋಲ್​​ಗೆ ಭರ್ಜರಿ ನಗದು ಬಹುಮಾನ ಹಾಗೂ ದುಬಾರಿ ಉಡುಗೊರೆಗಳು ದೊರೆತಿವೆ.

ಬಿಗ್​​ಬಾಸ್ ಮಲಯಾಳಂ ವಿಜೇತರಾದ ಅನುಮೋಲ್ ಅವರಿಗೆ 42.55 ಲಕ್ಷ ರೂಪಾಯಿ ನಗದನ್ನು ಬಹುಮಾನವಾಗಿ ನೀಡಲಾಯ್ತು. ಅಸಲಿಗೆ ಶೋನ ಒಟ್ಟು ಬಹುಮಾನದ ಮೊತ್ತ 50 ಲಕ್ಷ ರೂಪಾಯಿಗಳಾಗಿತ್ತು, ಆದರೆ ಬಿಗ್ ಬ್ಯಾಂಕ್ ಟಾಸ್ಕ್​​ನ ವೇಳೆ 7.50 ಲಕ್ಷ ಮೊತ್ತವನ್ನು ಇತರೆ ಸ್ಪರ್ಧಿಗಳಿಗೆ ಹಂಚಲಾಯ್ತು. ಹಾಗಾಗಿ ವಿಜೇತರಿಗೆ 42.55 ಲಕ್ಷ ರೂಪಾಯಿಗಳು ಮಾತ್ರವೇ ದೊರಕಿದವು. ನಗದು ಬಹುಮಾನ ಮಾತ್ರವೇ ಅಲ್ಲದೆ ಹೊಚ್ಚ ಹೊಸ ಎಸ್​​ಯುವಿ ಕಾರೊಂದನ್ನು ಸಹ ಬಹುಮಾನವಾಗಿ ನಟಿ ಅನುಮೋಲ್ ಅವರಿಗೆ ನೀಡಲಾಯ್ತು.

ಇಡೀ ಸೀಸನ್​​ನಲ್ಲಿ ಅದ್ಭುತವಾಗಿ ಆಡಿದ್ದ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಸ್ಪರ್ಧಿ ಅನೀಶ್ ರನ್ನರ್ ಅಪ್ ಆದರು. ಅನೀಶ್, ಸಾಮಾನ್ಯರಾಗಿ ಬಿಗ್​​ಬಾಸ್ ಮನೆ ಪ್ರವೇಶಿಸಿದ್ದರು. ಆದರೆ ಬಿಗ್​ಬಾಸ್ ಮನೆಯಲ್ಲಿ ಅದ್ಭುತವಾಗಿ ಅವರು ಆಟವಾಡಿದರು. ಅವರ ಹಾಗೂ ಅನುಮೋಲ್ ನಡುವೆ ಮೊದಲ ಸ್ಥಾನಕ್ಕೆ ಪೈಪೋಟಿ ಶುರುವಾಗಿತ್ತು. ಅಂತಿಮವಾಗಿ ನಟಿ ಅನುಮೋಲ್ ವಿಜೇತರಾದರು.

ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್‌ ಮನೆ ಹೇಗಿದೆ ನೋಡಿ

ಅನುಮೋಲ್, ಮಲಯಾಳಂ ಜನಪ್ರಿಯ ಟಿವಿ ತಾರೆಯರಲ್ಲಿ ಒಬ್ಬರಾಗಿದ್ದಾರೆ. ಕೆಲವಾರು ಸಿನಿಮಾಗಳಲ್ಲಿಯೂ ಅನುಮೋಲ್ ನಟಿಸಿದ್ದಾರೆ. 29 ವರ್ಷ ವಯಸ್ಸಿನ ಅನುಮೋಲ್ ಅವರು ಸೋಷಿಯಲ್ ಮೀಡಿಯಾ ಇನ್​​ಫ್ಲಯೆನ್ಸರ್ ಸಹ ಆಗಿದ್ದು, ಅಲ್ಲಿಯೂ ಸಹ ಅವರಿಗೆ ದೊಡ್ಡ ಸಂಖ್ಯೆಯ ಫಾಲೋವರ್​​ಗಳು ಇದ್ದಾರೆ.

ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಅನುಮೋಲ್, ‘ನನಗೆ ಆ ಕ್ಷಣದಲ್ಲಿ ಬ್ಲಾಂಕ್ ಆದಂತೆ ಅನ್ನಿಸಿತು. ನನಗೆ ಇದು ನಿಜವೇನಾ ಅನ್ನಿಸಿತು. ಈ ಗೆಲುವಿಗೆ ನಾನು ದೇವರಿಗೆ, ಅಭಿಮಾನಿಗಳಿಗೆ ಮತ್ತು ನನ್ನ ಕುಟುಂಬದವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ