AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗಾ ಕಣ್ಣಿಗೆ ಕಾಣಿಸಿದ ಅಂಬಿಕಾ ಆತ್ಮ; ‘ನಾ ನಿನ್ನ ಬಿಡಲಾರೆ’ಯಲ್ಲಿ ದೊಡ್ಡ ಟ್ವಿಸ್ಟ್

Na Ninna Bidalare serial: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್ ಹಾಗೂ ಮಾಯಾ ಮದುವೆ ನಡೆಯುವುದರಲ್ಲಿತ್ತು. ಆ ಸಂದರ್ಭದಲ್ಲಿ ದುರ್ಗಾಳ ದೇಹ ಸೇರಿದ್ದ ಅಂಬಿಕಾ ಆತ್ಮ ಮದುವೆಯಲ್ಲಿ ಭಾಗಿ ಆಗಿತ್ತು. ಈ ಮದುವೆ ನಡೆದಿದ್ದು ಹೇಗೆ ಎಂಬುದು ಯಾರಿಗೂ ಗೊತ್ತಾಗಲಿಲ್ಲ. ದುರ್ಗಾಳ ಒಪ್ಪಿಗೆ ಇಲ್ಲದೆ ಅವಳ ದೇಹ ಸೇರಿದ್ದರಿಂದ ಅಂಬಿಕಾ ಆತ್ಮವು ದುರ್ಗಾ ಕಣ್ಣಿಗೆ ಕಾಣುತ್ತಿರಲಿಲ್ಲ. ಆದರೆ...

ದುರ್ಗಾ ಕಣ್ಣಿಗೆ ಕಾಣಿಸಿದ ಅಂಬಿಕಾ ಆತ್ಮ; ‘ನಾ ನಿನ್ನ ಬಿಡಲಾರೆ’ಯಲ್ಲಿ ದೊಡ್ಡ ಟ್ವಿಸ್ಟ್
Na Ninna Bidalare
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 11, 2025 | 8:51 PM

Share

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ (Serial) ದೊಡ್ಡ ತಿರುವು ಒಂದು ಎದುರಾಗಿದೆ. ಈ ಧಾರಾವಾಹಿಯಲ್ಲಿ ಇಷ್ಟು ದಿನ ದುರ್ಗಾ ಕಣ್ಣಿಗೆ ಅಂಬಿಕಾ ಕಾಣುತ್ತಲೇ ಇರಲಿಲ್ಲ. ಇದಕ್ಕೆ ಅಂಬಿಕಾ ಮಾಡಿದ ತಪ್ಪೇ ಕಾರಣ ಆಗಿತ್ತು. ಆದರೆ, ಈಗ ದೊಡ್ಡ ಬದಲಾವಣೆಯಲ್ಲಿ ದುರ್ಗಾ ಕಣ್ಣಿಗೆ ಅಂಬಿಕಾ ಕಾಣಿಸಿದ್ದಾಳೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಟ್ವಿಸ್ಟ್​ಗಳನ್ನು ನಾವು ನಿರೀಕ್ಷಿಬಹುದಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್ ಹಾಗೂ ಮಾಯಾ ಮದುವೆ ನಡೆಯುವುದರಲ್ಲಿತ್ತು. ಆ ಸಂದರ್ಭದಲ್ಲಿ ದುರ್ಗಾಳ ದೇಹ ಸೇರಿದ್ದ ಅಂಬಿಕಾ ಆತ್ಮ ಮದುವೆಯಲ್ಲಿ ಭಾಗಿ ಆಗಿತ್ತು. ಈ ಮದುವೆ ನಡೆದಿದ್ದು ಹೇಗೆ ಎಂಬುದು ಯಾರಿಗೂ ಗೊತ್ತಾಗಲಿಲ್ಲ. ದುರ್ಗಾಳ ಒಪ್ಪಿಗೆ ಇಲ್ಲದೆ ಅವಳ ದೇಹ ಸೇರಿದ್ದರಿಂದ ಅಂಬಿಕಾ ಆತ್ಮವು ದುರ್ಗಾ ಕಣ್ಣಿಗೆ ಕಾಣುತ್ತಿರಲಿಲ್ಲ. ಆದರೆ, ಈಗ ದೊಡ್ಡ ಟ್ವಿಸ್ಟ್ ಎದುರಾಗಿದೆ.

ದುರ್ಗಾ ಹಾಗೂ ಶರತ್ ಇಬ್ಬರೂ ಒಪ್ಪಿ ಮತ್ತೊಮ್ಮೆ ಮದುವೆ ಆಗಿದ್ದಾರೆ. ಈ ಮದುವೆ ಬಳಿಕ ದುರ್ಗಾ ಕಣ್ಣಿಗೆ ಅಂಬಿಕಾ ಆತ್ಮ ಕಾಣಿಸಿದಂತೆ ತೋರಿಸಲಾಗಿದೆ. ಅಂಬಿಕಾ ಕಾಣುತ್ತಿದ್ದಂತೆ ದುರ್ಗಾ ಕಣ್ಣಲ್ಲಿ ಸಂತೋಷದ ಕಣ್ಣೀರು ಹರಿದಿದೆ. ಶರತ್ ಹಾಗೂ ದುರ್ಗಾ ವಿವಾಹ ನಡೆದಿದ್ದರಿಂದ ಈ ರೀತಿ ಆತ್ಮ ಕಾಣಿಸಿರಬಹುದು ಎಂಬುದು ಅನೇಕರ ಊಹೆ.

ಇದನ್ನೂ ಓದಿ:‘ಸಂಬರಾಲ ಏಟಿಗಟ್ಟು’ ಗ್ಲಿಂಪ್ಸ್ ಮೂಲಕ ಕನ್ನಡದಲ್ಲೂ ಅಬ್ಬರಿಸಿದ ಸಾಯಿ ದುರ್ಗಾ ತೇಜ್‌

ದುರ್ಗಾ ಹಾಗೂ ಅಂಬಿಕಾ ಅಕ್ಕ-ತಂಗಿ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ದುರ್ಗಾಗೇ ಈ ವಿಚಾರ ಗೊತ್ತಿಲ್ಲ. ರಕ್ತ ಸಂಬಂಧದ ಕಾರಣಕ್ಕೆ ಅಂಬಿಕಾ ಆತ್ಮ ದುರ್ಗಾ ಹಾಗೂ ಆಕೆಯ ತಂದೆಗೆ ಮಾತ್ರ ಕಾಣಿಸುತ್ತದೆ. ಅಂಬಿಕಾ ಕಾಣಿಸುತ್ತಾಳೆ ಎಂದು ಹೇಳಿದರೂ ಯಾರೊಬ್ಬರೂ ಅವರ ಮಾತನ್ನು ನಂಬಿಲ್ಲ. ಈಗ ಮತ್ತೆ ಅಂಬಿಕಾ ಆತ್ಮ ದುರ್ಗಾಗೆ ಕಾಣಿಸಲು ಪ್ರಾರಂಭಿಸಿದರೆ ಹಿತಾಳ ಮನಸ್ಸು ಗೆಲ್ಲಲು ಇದು ಸಹಕಾರಿ ಆಗಬಹುದು.

ಈ ಮೊದಲು ಹಿತಾಳು ಪದೇ ಪದೇ ಬಂದು ದುರ್ಗಾಳ ಬಳಿ, ‘ಅಮ್ಮ ಏನು ಹೇಳುತ್ತಾಳೆ’ ಎಂದು ಕೇಳಿದ್ದಳು. ಆಗ ದುರ್ಗಾ ಸುಳ್ಳು ಉತ್ತರಗಳನ್ನು ನೀಡಿದ್ದಳು. ಈಗ ಅಂಬಿಕಾ ಕಾಣಿಸೋಕೆ ಆರಂಭಿಸಿದರೆ ಹಿತಾ ಹಾಗೂ ದುರ್ಗಾ ಮತ್ತಷ್ಟು ಹತ್ತಿರ ಆಗಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Tue, 11 November 25

ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?