AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ ಚಂದನಾ-ಹರಿ ಮದುವೆ; ವಿಶೇಷ ಪಾತ್ರದಲ್ಲಿ ರವಿ ಕಾಳೆ

ಕಲರ್ಸ್ ಕನ್ನಡದ 'ಶ್ರೀ ಗಂಧದಗುಡಿ' ಧಾರಾವಾಹಿಯಲ್ಲಿ ಮಹತ್ವದ ತಿರುವು ಎದುರಾಗಿದೆ. ನಟ ರವಿ ಕಾಳೆ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಪ್ರವೇಶಿಸಿದ್ದು, ಕತೆಗೆ ಹೊಸ ಆಯಾಮ ನೀಡಿದ್ದಾರೆ. ಚಂದನಾ ಹಾಗೂ ಹರಿ ಮದುವೆ ಪ್ರಸ್ತಾಪ ಇಡುತ್ತಾರೆ ಕಾಳೆ. ಚಂದನಾ ಸಾಹಸ, ಹರಿಯ ಬೆಂಬಲ, ಹಾಗೂ ಕುಟುಂಬದ ವಿರೋಧದ ನಡುವೆ ಮದುವೆ ಹೇಗೆ ನಡೆಯುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ ಚಂದನಾ-ಹರಿ ಮದುವೆ; ವಿಶೇಷ ಪಾತ್ರದಲ್ಲಿ ರವಿ ಕಾಳೆ
ಗಂಧಧ ಗುಡಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 07, 2025 | 10:13 AM

Share

ಕಲರ್ಸ್ ಕನ್ನಡದಲ್ಲಿ ‘ಶ್ರೀ ಗಂಧದಗುಡಿ’ (Shree Gandhadagudi) ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ ಈಗ ಪ್ರಮುಖ ಘಟ್ಟ ತಲುಪಿದೆ. ಈ ಧಾರಾವಾಹಿಯಲ್ಲಿ ಚಂದನಾ ಹಾಗೂ ಹರಿ ಮಧ್ಯೆ ಮದುವೆ ನಡೆಯಲಿದೆ. ಈ ಮಧ್ಯೆ ಕನ್ನಡ ಚಿತ್ರರಂಗದ ನಟ ರವಿ ಕಾಳೆ ಅವರು ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಅವರು ಈಗ ಈ ಧಾರಾವಾಹಿಯಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ.

ಧಾರಾವಾಹಿಯ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಚಂದನಾಗೆ ಮದುವೆ ಮಾಡಬೇಕು ಎಂಬ ಪ್ರಯತ್ನ ನಡೆದಿದೆ. ಆದರೆ, ಇದು ಸಾಧ್ಯ ಇಲ್ಲ, ಗುರಿ ಸಾಧಿಸಬೇಕು ಎಂದು ಬೆಂಗಳೂರಿಗೆ ಹೊರಡಲು ಸಿದ್ಧಳಾಗುತ್ತಾಳೆ. ಆಕೆ ಹರಿಯ ಸಹಾಯ ಕೇಳುತ್ತಾಳೆ. ಹರಿ ಆಕೆಗೆ ರಾತ್ರಿ ಹೋಗುವಂತೆ ಹೇಳುತ್ತಾನೆ ಮತ್ತು ತಾನೇ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡುತ್ತಾನೆ. ಆದರೆ ಬೆಂಗಳೂರಿಗೆ ಹೊರಡುವ ಮಾರ್ಗದಲ್ಲಿ ಚಂದನಾ ಮಾಡಿದ ಒಂದು ತಪ್ಪಿನಿಂದ ಕುಟುಂಬಕ್ಕೆ ಆಕೆ ಮನೆ ಬಿಟ್ಟಿರುವುದು ತಿಳಿದೇ ಹೋಗುತ್ತದೆ.

ಆ ಬಳಿಕ ಚಂದನಾಳ ಚೇಸ್ ಶುರುವಾಗುತ್ತದೆ. ಆಕೆಯ ತಂದೆ ಮಹಾಬಲ ತನ್ನ ಬಲ ಬಳಸಿ ಆಕೆಯನ್ನು ಹಿಡಿದು ಹಾಕುತ್ತಾನೆ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಆಕೆ ಪೊಲೀಸ್ ಠಾಣೆಗೆ ತೆರಳುತ್ತಾಳೆ. ಅಲ್ಲಿ ಪೊಲೀಸರಿಗೆ ಶರಣಾಗುತ್ತಾಳೆ. ಅಲ್ಲಿ ಇನ್‌ಸ್ಪೆಕ್ಟರ್ ಕಾಳೆ ಪ್ರತ್ಯಕ್ಷ ಆಗುತ್ತಾರೆ. ಕಾಳೆ ಈ ಧಾರಾವಾಹಿಯ ಕತೆಗೆ ಟರ್ನಿಂಗ್ ಪಾಯಿಂಟ್ ಆಗುತ್ತಾರೆ.

ಪೊಲೀಸ್ ಠಾಣೆಯಲ್ಲಿ ಒಂದು ದೊಡ್ಡ ಗೊಂದಲ ಏರ್ಪಟ್ಟಿರೋದು ಸ್ಪಷ್ಟವಾಗುತ್ತದೆ. ‘ಹರಿ ಹಾಗೂ ಚಂದನಾಳನ್ನೂ ಉಳಿಸುವ ಏಕೈಕ ಮಾರ್ಗ ಎಂದರೆ ಅವರಿಬ್ಬರೂ ಮದುವೆಯಾಗಬೇಕು’ ಎಂದು ಕಾಳೆ ಹೇಳುತ್ತಾರೆ. ಈ ಪರಿಸ್ಥಿತಿಯನ್ನು ಹರಿ ತನ್ನ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಾನೆ ಮತ್ತು ಹೇಗೆ ಅವರ ಮದುವೆ ನಡೆಯುತ್ತದೆ ಎಂಬುದಕ್ಕೆ ಧಾರಾವಾಹಿ ನೋಡಬೇಕು

ಇದನ್ನೂ ಓದಿ: ‘ನಿಮ್ಮಲ್ಲಿ ಸತ್ಯ ಇದೆ, ಅದಕ್ಕೆ ನಾನು ಬದುಕಿದೆ’; ‘ಗಂಧದಗುಡಿ’ ಫೈರಿಂಗ್ ಬಗ್ಗೆ ರಾಜ್​ಕುಮಾರ್ ಹೀಗೆ ಹೇಳಿದ್ದರು

ಈ ಕುತೂಹಲಕರ ರೋಮಾಂಚಕ ಎಪಿಸೋಡ್​ಗಳನ್ನು ಕಲರ್ಸ್ ಕನ್ನಡದಲ್ಲಿ ವೀಕ್ಷಿಸಬಹುದು. ವಾರದ ಏಳೂ ದಿನ ಪ್ರತಿ ರಾತ್ರಿ 8ಕ್ಕೆ ಈ ಧಾರಾವಾಹಿ ಪ್ರಸಾರ ಕಾಣುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.