ಬಿಗ್‌ಬಾಸ್ ಗೆದ್ದ ಟಿವಿ ನಟಿ ಅನುಮೋಲ್, ಸಿಕ್ಕ ಬಹುಮಾನವೆಷ್ಟು?
Bigg Boss Malayalam: ಬಿಗ್‌ಬಾಸ್ ಶೋನಲ್ಲಿ ಮಲಯಾಳಂ ಟಿವಿ ನಟಿ ಅನುಮೋಲ್ ಅವರು ವಿಜೇತರಾಗಿದ್ದಾರೆ. ಸಾಮಾನ್ಯರಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ್ದ ಅನೀಶ್ ತಾರಾಯಿಲ್ ಅವರು ರನ್ನರ್ ಅಪ್ ಎನಿಸಿಕೊಂಡಿದ್ದಾರೆ. ಬಿಗ್‌ಬಾಸ್ ಶೋ ಗೆದ್ದ ಅನುಮೋಲ್ಗೆ ಭರ್ಜರಿ ನಗದು ಬಹುಮಾನ ಹಾಗೂ ದುಬಾರಿ ಉಡುಗೊರೆಗಳು ದೊರೆತಿವೆ. ವಿಜೇತರಿಗೆ ಸಿಕ್ಕ ನಗದು ಬಹುಮಾನ ಎಷ್ಟು?

ಬಿಗ್‌ಬಾಸ್ ಕನ್ನಡ ಸೀಸನ್ 12 (Bigg Boss Kannada) ಇನ್ನೂ ಚಾಲ್ತಿಯಲ್ಲಿದೆ. ಶೋ ಶುರುವಾಗಿ ಕೆಲವೇ ವಾರಗಳಷ್ಟೆ ಆಗಿದೆ. ಆದರೆ ನೆರೆಯ ಮಲಯಾಳಂನಲ್ಲಿ ಬಿಗ್‌ಬಾಸ್ ಶೋ ನಿನ್ನೆಯಷ್ಟೆ ಮುಕ್ತಾಯವಾಗಿದೆ. ಬಿಗ್‌ಬಾಸ್ ಶೋನಲ್ಲಿ ಮಲಯಾಳಂ ಟಿವಿ ನಟಿ ಅನುಮೋಲ್ ಅವರು ವಿಜೇತರಾಗಿದ್ದಾರೆ. ಸಾಮಾನ್ಯರಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ್ದ ಅನೀಶ್ ತಾರಾಯಿಲ್ ಅವರು ರನ್ನರ್ ಅಪ್ ಎನಿಸಿಕೊಂಡಿದ್ದಾರೆ. ಬಿಗ್‌ಬಾಸ್ ಶೋ ಗೆದ್ದ ಅನುಮೋಲ್ಗೆ ಭರ್ಜರಿ ನಗದು ಬಹುಮಾನ ಹಾಗೂ ದುಬಾರಿ ಉಡುಗೊರೆಗಳು ದೊರೆತಿವೆ.
ಬಿಗ್‌ಬಾಸ್ ಮಲಯಾಳಂ ವಿಜೇತರಾದ ಅನುಮೋಲ್ ಅವರಿಗೆ 42.55 ಲಕ್ಷ ರೂಪಾಯಿ ನಗದನ್ನು ಬಹುಮಾನವಾಗಿ ನೀಡಲಾಯ್ತು. ಅಸಲಿಗೆ ಶೋನ ಒಟ್ಟು ಬಹುಮಾನದ ಮೊತ್ತ 50 ಲಕ್ಷ ರೂಪಾಯಿಗಳಾಗಿತ್ತು, ಆದರೆ ಬಿಗ್ ಬ್ಯಾಂಕ್ ಟಾಸ್ಕ್ನ ವೇಳೆ 7.50 ಲಕ್ಷ ಮೊತ್ತವನ್ನು ಇತರೆ ಸ್ಪರ್ಧಿಗಳಿಗೆ ಹಂಚಲಾಯ್ತು. ಹಾಗಾಗಿ ವಿಜೇತರಿಗೆ 42.55 ಲಕ್ಷ ರೂಪಾಯಿಗಳು ಮಾತ್ರವೇ ದೊರಕಿದವು. ನಗದು ಬಹುಮಾನ ಮಾತ್ರವೇ ಅಲ್ಲದೆ ಹೊಚ್ಚ ಹೊಸ ಎಸ್ಯುವಿ ಕಾರೊಂದನ್ನು ಸಹ ಬಹುಮಾನವಾಗಿ ನಟಿ ಅನುಮೋಲ್ ಅವರಿಗೆ ನೀಡಲಾಯ್ತು.
ಇಡೀ ಸೀಸನ್ನಲ್ಲಿ ಅದ್ಭುತವಾಗಿ ಆಡಿದ್ದ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಸ್ಪರ್ಧಿ ಅನೀಶ್ ರನ್ನರ್ ಅಪ್ ಆದರು. ಅನೀಶ್, ಸಾಮಾನ್ಯರಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಆದರೆ ಬಿಗ್‌ಬಾಸ್ ಮನೆಯಲ್ಲಿ ಅದ್ಭುತವಾಗಿ ಅವರು ಆಟವಾಡಿದರು. ಅವರ ಹಾಗೂ ಅನುಮೋಲ್ ನಡುವೆ ಮೊದಲ ಸ್ಥಾನಕ್ಕೆ ಪೈಪೋಟಿ ಶುರುವಾಗಿತ್ತು. ಅಂತಿಮವಾಗಿ ನಟಿ ಅನುಮೋಲ್ ವಿಜೇತರಾದರು.
ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್ ಮನೆ ಹೇಗಿದೆ ನೋಡಿ
ಅನುಮೋಲ್, ಮಲಯಾಳಂ ಜನಪ್ರಿಯ ಟಿವಿ ತಾರೆಯರಲ್ಲಿ ಒಬ್ಬರಾಗಿದ್ದಾರೆ. ಕೆಲವಾರು ಸಿನಿಮಾಗಳಲ್ಲಿಯೂ ಅನುಮೋಲ್ ನಟಿಸಿದ್ದಾರೆ. 29 ವರ್ಷ ವಯಸ್ಸಿನ ಅನುಮೋಲ್ ಅವರು ಸೋಷಿಯಲ್ ಮೀಡಿಯಾ ಇನ್ಫ್ಲಯೆನ್ಸರ್ ಸಹ ಆಗಿದ್ದು, ಅಲ್ಲಿಯೂ ಸಹ ಅವರಿಗೆ ದೊಡ್ಡ ಸಂಖ್ಯೆಯ ಫಾಲೋವರ್ಗಳು ಇದ್ದಾರೆ.
ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಅನುಮೋಲ್, ‘ನನಗೆ ಆ ಕ್ಷಣದಲ್ಲಿ ಬ್ಲಾಂಕ್ ಆದಂತೆ ಅನ್ನಿಸಿತು. ನನಗೆ ಇದು ನಿಜವೇನಾ ಅನ್ನಿಸಿತು. ಈ ಗೆಲುವಿಗೆ ನಾನು ದೇವರಿಗೆ, ಅಭಿಮಾನಿಗಳಿಗೆ ಮತ್ತು ನನ್ನ ಕುಟುಂಬದವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




