ಒಂದೆಡೆ ಸುದೀಪ್​, ಇನ್ನೊಂದೆಡೆ ಸಲ್ಮಾನ್​; ಒಟ್ಟಿಗೆ ಅನೌನ್ಸ್​ ಆಯ್ತು ಕನ್ನಡ-ಹಿಂದಿ ಬಿಗ್​ ಬಾಸ್​

ಪ್ರತಿ ಸೀಸನ್​ನಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಬಿಗ್​ ಬಾಸ್​ ಶೋ ನಡೆಸಲಾಗುತ್ತದೆ. ಹಿಂದಿ ಬಿಗ್​ ಬಾಸ್​ 17ನೇ ಸೀಸನ್​ನಲ್ಲೂ ಒಂದಷ್ಟು ಹೊಸ ಅಂಶಗಳನ್ನು ಪರಿಚಯಿಸಲಾಗುತ್ತಿದೆ. ಈ ಬಗ್ಗೆ ಸಲ್ಮಾನ್​ ಖಾನ್​ ಅವರು ಪ್ರೋಮೋ ಮೂಲಕ ಮಾಹಿತಿ ನೀಡಿದ್ದಾರೆ. ಕಿಚ್ಚ ಸುದೀಪ್​ ಕಾಣಿಸಿಕೊಂಡಿರುವ ಕನ್ನಡದ ಪ್ರೋಮೋ ಕೂಡ ಗಮನ ಸೆಳೆಯುತ್ತಿದೆ.

ಒಂದೆಡೆ ಸುದೀಪ್​, ಇನ್ನೊಂದೆಡೆ ಸಲ್ಮಾನ್​; ಒಟ್ಟಿಗೆ ಅನೌನ್ಸ್​ ಆಯ್ತು ಕನ್ನಡ-ಹಿಂದಿ ಬಿಗ್​ ಬಾಸ್​
ಸಲ್ಮಾನ್​ ಖಾನ್​, ಕಿಚ್ಚ ಸುದೀಪ್​

Updated on: Sep 15, 2023 | 12:07 PM

ಕಿರುತೆರೆ ರಿಯಾಲಿಟಿ ಶೋಗಳಲ್ಲಿ ‘ಬಿಗ್​ ಬಾಸ್​’ ಕಾರ್ಯಕ್ರಮಕ್ಕೆ ಹೆಚ್ಚು ಜನಪ್ರಿಯತೆ ಇದೆ. ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿ ಇರುವ ಈ ಕಾರ್ಯಕ್ರಮ ಹಲವು ಭಾಷೆಗಳಲ್ಲಿ ಮೂಡಿಬರುತ್ತಿದೆ. ಕನ್ನಡ ಮತ್ತು ಹಿಂದಿಯಲ್ಲಿ 2023ರ ಹೊಸ ಸೀಸನ್​ ಕೂಡ ಆರಂಭ ಆಗುತ್ತಿದೆ. ಹಿಂದಿಯಲ್ಲಿ ಸಲ್ಮಾನ್​ ಖಾನ್​ ಹಾಗೂ ಕನ್ನಡದಲ್ಲಿ ಸುದೀಪ್​ (Kichcha Sudeep) ಅವರು ಈ ಶೋ ನಡೆಸಿಕೊಡಲಿದ್ದಾರೆ. ವಿಶೇಷ ಏನೆಂದರೆ, ಈ ಎರಡೂ ಭಾಷೆಯ ಹೊಸ ಸೀಸನ್​ನ ಪ್ರೋಮೋಗಳು ಏಕಕಾಲಕ್ಕೆ ಬಿಡುಗಡೆ ಆಗಿವೆ. ಒಂದೆಡೆ ಕಿಚ್ಚ ಸುದೀಪ್​, ಇನ್ನೊಂದೆಡೆ ಸಲ್ಮಾನ್​ ಖಾನ್ (Salman Khan)​ ಅವರು ಮಿಂಚಿದ್ದಾರೆ. ಈ ಪ್ರೋಮೋಗಳ ಮೂಲಕ ಕುತೂಹಲ ಕೆರಳಿಸುವ ಪ್ರಯತ್ನ ಮಾಡಲಾಗಿದೆ. ಕನ್ನಡದಲ್ಲಿ 10ನೇ ಸೀಸನ್​ ಹಾಗೂ ಹಿಂದಿಯಲ್ಲಿ 17ನೇ ಸೀಸನ್​ (Bigg Boss Season 17) ಆರಂಭಕ್ಕೆ ಸಿದ್ಧತೆ ನಡೆದಿದೆ.

ಪ್ರತಿ ಸೀಸನ್​ನಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಬಿಗ್​ ಬಾಸ್​ ಶೋ ನಡೆಸಲಾಗುತ್ತದೆ. ‘ಹಿಂದಿ ಬಿಗ್​ ಬಾಸ್​’ 17ನೇ ಸೀಸನ್​ನಲ್ಲೂ ಒಂದಷ್ಟು ಹೊಸ ಅಂಶಗಳನ್ನು ಪರಿಚಯಿಸಲಾಗುತ್ತಿದೆ. ಈ ಬಗ್ಗೆ ಸಲ್ಮಾನ್​ ಖಾನ್​ ಅವರು ಪ್ರೋಮೋ ಮೂಲಕ ಮಾಹಿತಿ ನೀಡಿದ್ದಾರೆ. ‘ಇದುವರೆಗೂ ನೀವು ಕೇವಲ ಬಿಗ್​ ಬಾಸ್​ ಕಣ್ಣು ನೋಡಿದ್ದೀರಿ. ಈಗ ಬಿಗ್​ ಬಾಸ್​ನ ಮೂರು ಅವತಾರ ಕಾಣುತ್ತದೆ. ಹೃದಯ, ಬುದ್ಧಿ ಮತ್ತು ಬಲ’ ಎಂದು ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ಅವರು ಡೈಲಾಗ್​ ಹೊಡೆದಿದ್ದಾರೆ.

ಬಿಗ್​ ಬಾಸ್​ ಹಿಂದಿ ಪ್ರೋಮೋ:

ಈ ಬಾರಿ ಹಿಂದಿ ಬಿಗ್​ ಬಾಸ್​ ಶೋನಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬುದು ಇನ್ನೂ ರಿವೀಲ್​ ಆಗಿಲ್ಲ. ಅವರಿವರ ಹೆಸರುಗಳು ಓಡಾಡುತ್ತಿವೆ ಅಷ್ಟೇ. ಹೊಸ ಸೀಸನ್​ ಯಾವಾಗ ಶುರುವಾಗಲಿದೆ ಎಂಬುದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಎಂದಿನಂತೆ ಭಾರಿ ಉತ್ಸಾಹದಲ್ಲಿ ನಿರೂಪಣೆ ಮಾಡಲು ಸಲ್ಮಾನ್​ ಖಾನ್​ ಅವರು ಸಜ್ಜಾಗಿದ್ದಾರೆ. ‘ಕಲರ್ಸ್​’ ಟಿವಿ ಮತ್ತು ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಈ ಕಾರ್ಯಕ್ರಮ ಪ್ರಸಾರ ಆಗಲಿದೆ.

ಬಿಗ್​ ಬಾಸ್​ ಕನ್ನಡ ಪ್ರೋಮೋ:

ಕನ್ನಡದಲ್ಲಿ ಈ ವಾರಿ ಬಿಗ್​ ಬಾಸ್​ 10ನೇ ಸೀಸನ್​ ಆಗಿರುವುದರಿಂದ ಬಹಳ ಅದ್ದೂರಿಯಾಗಿ ಮಾಡುವ ಆಲೋಚನೆ ಇದೆ. ಈಗ ಬಿಡುಗಡೆ ಆಗಿರುವ ಪ್ರೋಮೋದಲ್ಲೂ ಆ ಅದ್ದೂರಿತನ ಕಾಣಿಸಿದೆ.

ಇದನ್ನೂ ಓದಿ: 9 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ ಕಿಚ್ಚ ಸುದೀಪ್: ಪೋಸ್ಟರ್ ಬಿಡುಗಡೆ

ಕಿಚ್ಚ ಸುದೀಪ್​ ಅವರು ‘ಮ್ಯಾಕ್ಸ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆ ಚಿತ್ರಕ್ಕೆ ಶೂಟಿಂಗ್​ ನಡೆಯುತ್ತಿದೆ. ಅದರ ನಡುವೆ ಅವರು ಬಿಗ್​ ಬಾಸ್​ ನಿರೂಪಣೆ ಸಲುವಾಗಿ ಬಿಡುವು ಮಾಡಿಕೊಡಲಿದ್ದಾರೆ. ಈ ಬಾರಿ ಯಾರಿಗೆಲ್ಲ ಬಿಗ್​ ಬಾಸ್​ ಮನೆಗೆ ಕಾಲಿಡುವ ಅವಕಾಶ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:42 am, Fri, 15 September 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us