ಬಿಗ್ ಬಾಸ್ ಸೂರಜ್​​ಗೆ ಸೀರಿಯಲ್ ಆಫರ್; ‘ಪವಿತ್ರ ಬಂಧನ’ದ ಕಥೆ ಏನು?

ಬಿಗ್ ಬಾಸ್ ಮೂಲಕ ಚಾಕೋಲೇಟ್ ಹೀರೋ ಆಗಿ ಮಿಂಚಿದ ಸೂರಜ್, ಈಗ 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾಗಿದ್ದಾರೆ. ಬಾಣಸಿಗರಾಗಿದ್ದ ಅವರು ಮಾಡೆಲಿಂಗ್ ನಂತರ ಬಿಗ್ ಬಾಸ್ ಪ್ರವೇಶಿಸಿ ಜನಪ್ರಿಯತೆ ಗಳಿಸಿದರು. ಮೂರುವರೆ ಲಕ್ಷ ಹಿಂಬಾಲಕರನ್ನು ಪಡೆದ ಸೂರಜ್, ಇದೀಗ ದೇವದತ್ ದೇಶ್​ಮುಖ್ ಪಾತ್ರದಲ್ಲಿ ಕಿರುತೆರೆ ಪ್ರವೇಶಿಸಲು ಸಜ್ಜಾಗಿದ್ದಾರೆ.

ಬಿಗ್ ಬಾಸ್ ಸೂರಜ್​​ಗೆ ಸೀರಿಯಲ್ ಆಫರ್; ‘ಪವಿತ್ರ ಬಂಧನ’ದ ಕಥೆ ಏನು?
ಸೂರಜ್

Updated on: Jan 12, 2026 | 7:55 AM

ಬಿಗ್ ಬಾಸ್​ ಅಲ್ಲಿ ಚಾಕೋಲೇಟ್ ಹೀರೋ ಆಗಿ ಮಿಂಚಿದವರು ಸೂರಜ್. ಅವರು ವೃತ್ತಿಯಲ್ಲಿ ಈ ಮೊದಲು ಬಾಣಸಿಗ ಆಗಿದ್ದರು. ಆ ಬಳಿಕ ಅವರು ಮಾಡೆಲಿಂಗ್ ಆರಂಭಿಸಿದರು. ನಂತರ ಬಿಗ್ ಬಾಸ್ ಆಫರ್ ಕೂಡ ಪಡೆದರು. ಇಷ್ಟೆಲ್ಲ ಸಾಧನೆ ಮಾಡಿದ ಸೂರಜ್ ಅವರಿಗೆ ಈಗ ಸೀರಿಯಲ್ ಆಫರ್ ಬಂದಿದೆ. ‘ಪವಿತ್ರ ಬಂಧನ’ ಅನ್ನೋದು ಧಾರಾವಾಹಿಯ ಹೆಸರು. ಶೀಘ್ರವೇ ಧಾರಾವಾಹಿ ಪ್ರಸಾರ ಕಾಣಲಿದೆ.

ಸೂರಜ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಹೈಲೈಟ್ ಆದರು. ಅವರು ಹೀರೋ ಎಂದೇ ಕೆಲವರು ಭಾವಿಸಿದ್ದು ಇದೆ. ಆದರೆ, ಅವರ ಕ್ಷೇತ್ರವೇ ಬೇರೆ. ಬಿಗ್ ಬಾಸ್​ಗೆ ಸೇರುವಾಗ ಅವರ ಹಿಂಬಾಲಕರ ಸಂಖ್ಯೆ ಕೇವಲ 18 ಸಾವಿರ ಇತ್ತು. ಈಗ ಮೂರುವರೆ ಲಕ್ಷಕ್ಕೆ ಏರಿಕೆ ಆಗಿದೆ. ಈ ಜನಪ್ರಿಯತೆಯಿಂದಲೇ ಅವರಿಗೆ ಸೀರಿಯಲ್ ಆಫರ್ ಸಿಕ್ಕಿದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್ ಸಿಂಗ್

‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಸೂರಜ್ ಅವರು ದೇವದತ್ ದೇಶ್​ಮುಖ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ತಿಲಕ್ ಗೌಡ ಪಾತ್ರದಲ್ಲಿ ಯಶಸ್ ಗೌಡ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಕಥೆಯ ನಾಯಕಿ. ದೇವದತ್ ಹಾಗೂ ತಿಲಕ್ ಅಣ್ಣ-ತಮ್ಮ. ಇಬ್ಬರೂ ತುಂಬಾನೇ ಕ್ಲೋಸ್. ತಿಲಕ್ ಹಾಗೂ ಕಥಾ ನಾಯಕಿ ಪವಿತ್ರಾ ಪ್ರೀತಿಸುತ್ತಿರುತ್ತಾರೆ. ಆದರೆ, ಆಕೆ ದೇವದತ್​​ನ ಮದುವೆ ಆಗೋ ಪರಿಸ್ಥಿತಿ ಬರುತ್ತದೆ. ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಕಂಡರೇ ಆಗೋದಿಲ್ಲ. ಆದಾರೂ ಮದುವೆ ಆಗುತ್ತಾರೆ. ಇದು ಧಾರಾವಾಹಿಯ ಕಥೆ.

ಸೂರಜ್ ಅವರಿಗೆ ಧಾರಾವಾಹಿ ಆಫರ್ ಸಿಕ್ಕಿರೋದಕ್ಕೆ ಅವರು ಖುಷಿಪಟ್ಟಿದ್ದಾರೆ. ಬಿಗ್ ಬಾಸ್ ಬಳಿಕ ಇಷ್ಟು ದೊಡ್ಡ ಆಫರ್ ಕೈ ಸೇರಿದೆ. ಧಾರಾವಾಹಿಯಲ್ಲಿ ಅವರು ಯಾವ ರೀತಿಯಲ್ಲಿ ನಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಅನೇಕರ ಬದುಕನ್ನು ಬದಲಾಯಿಸುತ್ತದೆ. ಸೂರಜ್ ಬದುಕನ್ನು ಕೂಡ ಈ ರಿಯಾಲಿಟಿ ಶೋ ಬದಲಿಸಿದೆ. ವೈಲ್ಡ್ ಕಾರ್ಡ್ ಮೂಲಕ ಅವರು ಎಂಟ್ರಿ ಕೊಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Mon, 12 January 26