
ತೆಲುಗು ಬಿಗ್ಬಾಸ್ ಆರಂಭವಾಗಿ ಕೆಲ ದಿನಗಳಾಗಿವೆ. ಒಂದೇ ವಾರಕ್ಕೆ ಮನೆಯಲ್ಲಿ ಗುಂಪುಗಳು ನಿರ್ಮಾಣವಾಗಿವೆ. ಮೊದಲ ಕೆಲ ದಿನಗಳಲ್ಲಿ ಕೆಲವರು ತಮ್ಮ ದೊಡ್ಡ ಗಂಟಲಿನಿಂದ ಸದ್ದು, ಸುದ್ದಿ ಮಾಡಿದ್ದಾರೆ. ಅವರಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಸಹ ಒಬ್ಬರು. 12 ವರ್ಷಗಳ ಹಿಂದೆ ಕನ್ನಡದ ಮೊದಲ ಬಿಗ್ಬಾಸ್ ಪ್ರಸಾರವಾದಾಗ ಅದರ ಭಾಗವಾಗಿದ್ದ ಸಂಜನಾ ಗಲ್ರಾನಿ, ಈಗ ತೆಲುಗು ಬಿಗ್ಬಾಸ್ ಸೀಸನ್ 9ರ ಭಾಗವಾಗಿದ್ದು, ಮೊದಲ ವಾರದಲ್ಲಿಯೇ ಮನೆಯ ಸದಸ್ಯರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಮೊದಲ ವಾರ ಸಾಕಷ್ಟು ಫುಟೇಜ್ ಪಡೆದುಕೊಂಡಿರುವ ಸಂಜನಾ, ದೊಡ್ಡ ಮೊತ್ತದ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಎಷ್ಟು ಗೊತ್ತೆ?
ಸಂಜನಾ ಗಲ್ರಾನಿ, ಕನ್ನಡದ ನಟಿ ಆದರೆ ತೆಲುಗಿನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ತೆಲುಗು ಪ್ರೇಕ್ಷಕರಿಗೂ ಸಹ ಸಾಕಷ್ಟು ಪರಿಚಿತರು. ಹಾಗಾಗಿ ಆಂಧ್ರ-ತೆಲಂಗಾಣದಲ್ಲಿ ಅವರು ಸೆಲೆಬ್ರಿಟಿ, ಹಾಗಾಗಿ ದೊಡ್ಡ ಮೊತ್ತದ ಸಂಭಾವನೆಯನ್ನೇ ಸಂಜನಾ ಗಲ್ರಾನಿ ಬಿಗ್ಬಾಸ್ ಸೀಸನ್ 9ಕ್ಕಾಗಿ ಪಡೆದುಕೊಳ್ಳುತ್ತಿದ್ದಾರೆ. ತೆಲುಗು ಬಿಗ್ಬಾಸ್ ಮನೆಯಲ್ಲಿ ಒಟ್ಟು 13 ಮಂದಿ ಸ್ಪರ್ಧಿಗಳಿದ್ದು, ಅತಿ ಹೆಚ್ಚು ಸಂಭಾವನೆ ಪಡೆವ ಎರಡನೇ ಸ್ಪರ್ಧಿ ಎನಿಸಿಕೊಂಡಿದ್ದಾರೆ ನಟಿ ಸಂಜನಾ ಗಲ್ರಾನಿ.
ಮೂಲಗಳ ಪ್ರಕಾರ ಸಂಜನಾ ಗಲ್ರಾನಿ ಅವರಿಗೆ ಒಂದು ವಾರಕ್ಕೆ 2.75 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಬಿಗ್ಬಾಸ್ ತೆಲುಗು ಆಯೋಜಕರು ನೀಡುತ್ತಿದ್ದಾರೆ. ಅಂದರೆ ಸಂಜನಾಗೆ ಒಂದು ದಿನಕ್ಕೆ 39,285 ರೂಪಾಯಿಗಳನ್ನು ನೀಡಲಾಗುತ್ತಿದೆ. ಮೊದಲ ವಾರ ಸಂಜನಾ ಆಡಿರುವುದು ನೋಡಿದರೆ ಕೊಟ್ಟ ಹಣಕ್ಕೆ ಮೋಸ ಮಾಡಿಲ್ಲ ಅನಿಸುತ್ತದೆ ಸಂಜನಾ. ಮೊದಲ ವಾರ ಸಾಕಷ್ಟು ಡ್ರಾಮಾ ಅನ್ನು ಮನೆಯಲ್ಲಿ ಕ್ರಿಯೇಟ್ ಮಾಡಿದ್ದು, ಎಲ್ಲ ಸ್ಪರ್ಧಿಗಳ ಬಾಯಲ್ಲೂ ಹೆಸರಿರುವಂತೆ ಮಾಡಿದ್ದಾರೆ. ಸಂಜನಾ ಆಡುತ್ತಿರುವ ರೀತಿ ನೋಡಿದರೆ ಕನಿಷ್ಟ ಒಂದು ತಿಂಗಳಾದರೂ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ. ಅಂದಹಾಗೆ ಈ ವಾರ ಅವರು ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ:ಸಂಜನಾ ಗಲ್ರಾನಿ ಆರ್ಭಟಕ್ಕೆ ಹೆದರಿದ ಮನೆ ಮಂದಿ, ಕಣ್ಣೀರು ಹಾಕಿದ ನಟಿ
ಇನ್ನು ಸಂಜನಾ ಗಲ್ರಾನಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿರುವುದು ನಟಿ ಫ್ಲೋರಾ ಸೈನಿ. ಕನ್ನಡದ ‘ಕೋದಂಡರಾಮ’, ಸುದೀಪ್ ನಟನೆಯ ‘ನಮ್ಮಣ್ಣ’, ‘ಗಿರಿ’, ‘ವಾರೆವಾ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ, ನಾಗಾರ್ಜುನ, ಚಿರಂಜೀವಿ ಇನ್ನೂ ಹಲವು ಸ್ಟಾರ್ ನಟರುಗಳೊಡನೆ ನಟಿಸಿರುವ ಫ್ಲೋರಾ ಸೈನಿಗೆ ಬಿಗ್ಬಾಸ್ ಮನೆಯಲ್ಲಿ ಇರಲು ಒಂದು ವಾರಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆ ಕೊಡಲಾಗುತ್ತಿದೆಯಂತೆ. ಫ್ಲೋರಾ ಸೈನಿ ಸಹ ಮೊದಲ ವಾರದಲ್ಲಿ ಚೆನ್ನಾಗಿಯೇ ಗಮನ ಸೆಳೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ