ತೆಲುಗು ಬಿಗ್​​ಬಾಸ್ ಸೇರಿದ ಕನ್ನಡದ ನಟಿ, ಯಾರು ಈ ತನುಜಾ ಗೌಡ?

Bigg Boss Telugu season 09: ತೆಲುಗು ಬಿಗ್​​ಬಾಸ್ ಸೀಸನ್ 9 ಇಂದಿನಿಂದ (ಸೆಪ್ಟೆಂಬರ್ 07) ಪ್ರಾರಂಭ ಆಗುತ್ತಿದೆ. ನಟ ಅಕ್ಕಿನೇನಿ ನಾಗಾರ್ಜುನ ಅವರು ಬಿಗ್​​ಬಾಸ್ ಸೀಸನ್ 9ರ ಪ್ರಾರಂಭ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ತೆಲುಗು ಬಿಗ್​​ಬಾಸ್​​ನಲ್ಲಿ ಕನ್ನಡದ ನಟಿಯರು ಸೀಸನ್​​ಗೆ ಒಬ್ಬರಾದರೂ ಕಾಣಿಸಿಕೊಳ್ಳುತ್ತಾರೆ. ಈ ಸೀಸನ್​​ನ ಮೊದಲ ಸ್ಪರ್ಧಿಯಾಗಿ ಕನ್ನಡದ ನಟಿಯೇ ಬಿಗ್​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ.

ತೆಲುಗು ಬಿಗ್​​ಬಾಸ್ ಸೇರಿದ ಕನ್ನಡದ ನಟಿ, ಯಾರು ಈ ತನುಜಾ ಗೌಡ?
Tanuja Gowda1

Updated on: Sep 07, 2025 | 8:06 PM

ತೆಲುಗು ಬಿಗ್​​ಬಾಸ್ ಸೀಸನ್ 9 (Bigg Boss Telugu) ಇಂದಿನಿಂದ (ಸೆಪ್ಟೆಂಬರ್ 07) ಪ್ರಾರಂಭ ಆಗುತ್ತಿದೆ. ನಟ ಅಕ್ಕಿನೇನಿ ನಾಗಾರ್ಜುನ ಅವರು ಬಿಗ್​​ಬಾಸ್ ಸೀಸನ್ 9ರ ಪ್ರಾರಂಭ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಕಾರ್ಯಕ್ರಮ ಪ್ರಾರಂಭವಾಗಿ ಕೆಲವೇ ಗಂಟೆಗಳಾಗಿವೆ. ಬಿಗ್​​ಬಾಸ್ ಮನೆಗೆ ಹೋಗಲು ಸ್ವತಃ ನಾಗಾರ್ಜುನ ಅವರು ಕೆಲವು ಟಾಸ್ಕ್​​​ಗಳನ್ನು ಪೂರ್ತಿ ಮಾಡಿದ್ದು ಈ ಬಾರಿಯ ವಿಶೇಷ. ಅಂದಹಾಗೆ ಬಿಗ್​​ಬಾಸ್ ತೆಲುಗು ಸೀಸನ್ 9ರ ಮೊದಲ ಸ್ಪರ್ಧಿಯಾಗಿ ನಾಗಾರ್ಜುನ ಆಹ್ವಾನಿಸಿರುವುದು ಕನ್ನಡದ ನಟಿಯನ್ನು ಎಂಬುದು ವಿಶೇಷ.

ಬಿಗ್​​ಬಾಸ್ ತೆಲುಗು ಸೀಸನ್ 9ರ ಮನೆಗೆ ಮೊದಲು ಎಂಟ್ರಿ ಕೊಟ್ಟಿರುವುದು ಕನ್ನಡದ ನಟಿ ತನುಜಾ ಗೌಡ. ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಆದ ಹಾರರ್ ಸಿನಿಮಾ ‘6-5=3’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ತನುಜಾ ಗೌಡ ಅವರು ಈಗ ತೆಲುಗು ಹಾಗೂ ತಮಿಳು ಟಿವಿ ಲೋಕದ ಜನಪ್ರಿಯ ತಾರೆ ಆಗಿದ್ದಾರೆ. ಇದೇ ಕಾರಣಕ್ಕೆ ಈಗ ತನುಜಾ ಗೌಡ ಅಲಿಯಾಸ್ ತನುಜಾ ಪುಟ್ಟಸ್ವಾಮಿ ಅವರನ್ನು ಬಿಗ್​​ಬಾಸ್ ಸೀಸನ್ 9ಕ್ಕೆ ಕರೆಸಲಾಗಿದೆ.

ತನುಜಾ ಗೌಡ ಅವರು ತೆಲುಗು ಟಿವಿ ಕ್ಷೇತ್ರದಲ್ಲಿ ತನುಜಾ ಪುಟ್ಟಸ್ವಾಮಿ ಎಂದೇ ಚಿರಪರಿಚಿತರು. ಕನ್ನಡದ ‘6-5=3’ ಸಿನಿಮಾದ ಭಾರಿ ಯಶಸ್ಸಿನ ಬಳಿಕ ಅವರು ಕನ್ನಡದ ‘ದಂಧೆ ಬಾಯ್ಸ್’ ಹೆಸರಿನ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಹಿಟ್ ಎನಿಸಿಕೊಳ್ಳಲಿಲ್ಲ. ತನುಜಾ ಅವರ ‘6-5=3’ ಸಿನಿಮಾ ತೆಲುಗಿನಲ್ಲಿ ‘ಚಿತ್ರಂ ಕಾದು ನಿಜಂ’ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆ ಆಗಿ ಅಲ್ಲಿಯೂ ಹಿಟ್ ಆಯ್ತು.

ಇದನ್ನೂ ಓದಿ:ಕಿಚ್ಚ ಸುದೀಪ್ ಸ್ಟೈಲ್​​ನಲ್ಲಿ ಬಿಗ್ ಬಾಸ್ ನಿರೂಪಣೆ ಮಾಡಲು ನಿರ್ಧರಿಸಿದ ನಟ ನಾಗಾರ್ಜುನ?

ಬಳಿಕ ತನುಜಾ ಅವರು ‘ಅಂದಾಲ ರಾಕ್ಷಸಿ’ ಹೆಸರಿನ ಧಾರಾವಾಹಿ ಮೂಲಕ ತೆಲುಗು ಟಿವಿ ಲೋಕಕ್ಕೆ ಎಂಟ್ರಿ ನೀಡಿದರು. ಅದಾದ ಬಳಿಕ ಬಂದ ‘ಮುದ್ದು ಮಂದಾರಮ್’ ತೆಲುಗು ಧಾರಾವಾಹಿ ಭಾರಿ ದೊಡ್ಡ ಯಶಸ್ಸು ಗಳಿಸಿತು. ಆ ಧಾರಾವಾಹಿಯ 1500 ಎಪಿಸೋಡ್​ಗಳು ಪ್ರಸಾರ ಆಗಿದ್ದವು. ಪವನ್ ಸಾಯಿ ಮತ್ತು ತನುಜಾ ಜೋಡಿ ಭಾರಿ ತೆಲುಗು ರಾಜ್ಯಗಳಲ್ಲಿ ಭಾರಿ ಜನಪ್ರಿಯವಾಗಿತ್ತು.

ಅದಾದ ಬಳಿಕ ತಮಿಳು ಟಿವಿ ಕ್ಷೇತ್ರಕ್ಕೆ ಕಾಲಿಟ್ಟ ತನುಜಾ, ತಮಿಳಿನ ‘ಶಿವ ಮನುಸಲ ಶಕ್ತಿ’ ಧಾರಾವಾಹಿಯಲ್ಲಿ ನಟಿಸಿದರು. ಅದಾದ ಬಳಿಕ ತೆಲುಗಿನ ‘ಅಗ್ನಿಪರೀಕ್ಷ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗ ಬಿಗ್​​ಬಾಸ್ ತೆಲುಗು ಸೀಸನ್ 9ರಲ್ಲಿ ಪಾಲ್ಗೊಂಡಿದ್ದಾರೆ.

ಬಿಗ್​​ಬಾಸ್ ಮನೆಗೆ ತಮ್ಮ ತಂದೆಯ ಒಪ್ಪಿಗೆ ಇಲ್ಲದೆ ಬಂದಿರುವುದಾಗಿ ವೇದಿಕೆ ಮೇಲೆ ತನುಜಾ ಹೇಳಿಕೊಂಡರು. ಬಳಿಕ ನಟ ನಾಗಾರ್ಜುನ ಅವರು ತನುಜಾ ಅವರ ತಂದೆ ಪುಟ್ಟಸ್ವಾಮಿ ಗೌಡ ಅವರಿಗೆ ಕರೆ ಮಾಡಿ ಮಗಳ ಪರವಾಗಿ ಒಪ್ಪಿಗೆ ಕೇಳಿ ಪಡೆದುಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ