
ಕನ್ನಡದ ನಟಿ ಸಂಜನಾ ಗಲ್ರಾನಿ (Sanjana Galrani) ತೆಲುಗು ಬಿಗ್ಬಾಸ್ ಮನೆ ಸೇರಿಕೊಂಡಿದ್ದಾರೆ. 12 ವರ್ಷಗಳ ಹಿಂದೆ ಕನ್ನಡದ ಮೊದಲ ಬಿಗ್ಬಾಸ್ಗೆ ಸ್ಪರ್ಧಿಯಾಗಿ ಹೋಗಿದ್ದ ನಟಿ ಸಂಜನಾ ಈಗ ಒಂದು ದಶಕಕ್ಕೂ ಹೆಚ್ಚು ಸಮಯದ ಬಳಿಕ ತೆಲುಗು ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ. ಸಂಜನಾ, ಇದೀಗ ತೆಲುಗು ಬಿಗ್ಬಾಸ್ನಲ್ಲಿ ತಮ್ಮ ವಿಶ್ವರೂಪ ದರ್ಶನ ಮಾಡಿಸುತ್ತಿದ್ದಾರೆ. ಮನೆ ಮಂದಿಯ ಮೇಲೆ ಹಾರಿ ಬಿದ್ದಿದ್ದು, ಹಲವರೊಟ್ಟಿಗೆ ಜಗಳ ಮಾಡಿದ್ದಾರೆ. ಖ್ಯಾತ ನಟಿಯನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ದು, ನಟಿ ಕಣ್ಣೀರು ಹಾಕಿದ್ದಾರೆ.
ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸೂಪರ್ ಸ್ಟಾರ್ ನಟರುಗಳೊಟ್ಟಿಗೆ ನಟಿಸಿರವ ಫ್ಲೋರಾ ಸೈನಿ ಅವರಿಗೆ ಮೊದಲ ವಾರ ಬಾತ್ರೂಂ ಸ್ವಚ್ಛ ಮಾಡುವ ಜವಾಬ್ದಾರಿ ನೀಡಲಾಗಿದೆ. ಫ್ಲೋರಾ ಸೈನಿ ಅದನ್ನು ಶ್ರದ್ಧೆಯಿಂದಲೇ ಮಾಡುತ್ತಿದ್ದಾರೆ. ಆದರೆ ಅವರಿಗೆ ಸಂಜನಾ ಪದೇ ಪದೇ ಕಿರಿ-ಕಿರಿ ನೀಡುತ್ತಿದ್ದಾರೆ. ಇದರಿಂದಾಗಿ ಈ ಇಬ್ಬರ ನಡುವೆ ದೊಡ್ಡ ಜಗಳವೇ ಆಗಿದೆ. ಇದು ಮನೆಯ ಇತರೆ ಸದಸ್ಯರ ಮೇಲೂ ಸಹ ಪರಿಣಾಮ ಬೀರಿದೆ.
ನಿನ್ನೆಯ ಎಪಿಸೋಡ್ನಲ್ಲಿ ನಟಿ ಸಂಜನಾ ಗಲ್ರಾನಿ, ಮನೆಯ ಸಹ ಸ್ಪರ್ಧಿ ಖ್ಯಾತ ಹಿರಿಯ ನಟಿ ಫ್ಲೋರಾ ಸೈನಿ ವಿರುದ್ಧ ಹರಿಹಾಯ್ದಿದ್ದಾರೆ. ಅದೂ ಶಾಂಪು ಬಾಟಲಿ ವಿಷಯಕ್ಕೆ ಜೋರು ಜಗಳ ಮಾಡಿದ್ದಾರೆ. ಫ್ಲೋರಾ ಸೈನಿ, ಮೃದು ಸ್ವಭಾವದ ಮಹಿಳೆಯಾಗಿದ್ದು, ಸಂಜನಾರ ಆರ್ಭಟಕ್ಕೆ ಪೆಚ್ಚಾಗಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ:10ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಸೇರಿದ ಸಂಜನಾ ಗಲ್ರಾನಿ
ಸಂಜನಾ ಗಲ್ರಾನಿ ತಮ್ಮ ಶಾಂಪು, ಕಂಡಿಷನರ್ ಬಾಟಿಗಳನ್ನು ಬಾತ್ರೂಂನಲ್ಲಿ ಬಿಟ್ಟಿದ್ದರು. ಇದು ಬಾತ್ರೂಂ ಸ್ವಚ್ಛ ಮಾಡುವ ಜವಾಬ್ದಾರಿ ಹೊತ್ತುಕೊಂಡಿರುವ ಫ್ಲೋರಾ ಸೈನಿಗೆ ಸಿಟ್ಟು ತರಿಸಿದೆ. ಈ ವಿಷಯವಾಗಿ ಸಂಜನಾ ಬಳಿ ಹೇಳಿದ್ದಾರೆ. ‘ಪ್ರತಿ ಬಾರಿಯೂ ಬಾತ್ರೂಂ ಸ್ವಚ್ಛ ಮಾಡಲು ಹೋದಾಗಲೂ ನಾನು ಆ ಬಾಟಲಿಗಳನ್ನು ಎತ್ತಿಡಬೇಕಾ? ಅವು ನಿಮ್ಮ ವಸ್ತುಗಳನ್ನು ಅವನ್ನು ನೀವೇ ಸರಿಯಾಗಿ ಇಟ್ಟುಕೊಳ್ಳಬೇಕು’ ಎಂದು ಫ್ಲೋರಾ ಹೇಳಿದ್ದಾರೆ. ಆದರೆ ಅದನ್ನು ಸಂಜನಾ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ಆಗಿವೆ. ಸಂಜನಾರ ವಾಗ್ದಾಳಿಗೆ ಎದುರುತ್ತರ ಕೊಡಲಾಗದೆ ನಟಿ ಫ್ಲೋರಾ ಸೈನಿ ಕಣ್ಣೀರು ಹಾಕಿದ್ದಾರೆ.
‘ಮನೆಯ ಕ್ಯಾಪ್ಟನ್ ಬಂದು ಸಂಜನಾಗೆ ಆ ಶಾಂಪು ಬಾಟಲಿ ಇನ್ನಿತರೆಗಳನ್ನು ನಿಗದಿತ ಪ್ರದೇಶದಲ್ಲಿ ಇಡುವಂತೆ ಹೇಳಿದರೂ ಸಹ ಸಂಜನಾ ಅವರ ಮಾತನ್ನು ಕೇಳಿಲ್ಲ. ನೇರವಾಗಿ ‘ಇಲ್ಲ ನಾನು ಇರುವುದೇ ಹೀಗೆ ನಾನು ಇಡುವುದಿಲ್ಲ’ ಎಂದು ಖಾರವಾಗಿ ಉತ್ತರಿಸಿದ್ದಾರೆ. ಆ ನಂತರ ನಾಮಿನೇಷನ್ನಲ್ಲಿ ಶುರುವಾದಾಗ ಸಾಮಾನ್ಯರೆಲ್ಲ ಸೇರಿ ಸಂಜನಾರನ್ನೇ ನಾಮಿನೇಟ್ ಮಾಡಿದ್ದಾರೆ. ಆ ಮೂಲಕ ಸಂಜನಾ ಗಲ್ರಾನಿ ಮೊದಲ ವಾರದಲ್ಲಿಯೇ ನಾಮಿನೇಟ್ ಆಗಿದ್ದು ಡೇಂಜರ್ ಜೋನ್ನಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ