Bigg Boss: ಬಿಗ್​ಬಾಸ್ ತೆಲುಗು ಪ್ರಾರಂಭ, ಇಲ್ಲಿದೆ ಸ್ಪರ್ಧಿಗಳ ಪೂರ್ಣ ಪಟ್ಟಿ

|

Updated on: Sep 03, 2023 | 11:14 PM

Bigg Boss 7: ಬಿಗ್​ಬಾಸ್ ತೆಲುಗು ಸೀಸನ್ 7 ಆರಂಭವಾಗಿದೆ. ಈ ಬಾರಿಯ ಬಿಗ್​ಬಾಸ್ ಸಾಮಾನ್ಯವಾಗಿರುವುದಿಲ್ಲ ಎಂದು ನಟ, ನಿರೂಪಕ ನಾಗಾರ್ಜುನ ಹೇಳುತ್ತಲೇ ಬಂದಿದ್ದಾರೆ. ಬಿಗ್​ಬಾಸ್ ಮನೆಗೆ ನಟಿ ಶಕೀಲಾ, ಹಿರಿಯ ನಟ ಶಿವಾಜಿ ಸೇರಿದಂತೆ ಹಲವರನ್ನು ಸೇರಿಸಲಾಗಿದೆ.

Bigg Boss: ಬಿಗ್​ಬಾಸ್ ತೆಲುಗು ಪ್ರಾರಂಭ, ಇಲ್ಲಿದೆ ಸ್ಪರ್ಧಿಗಳ ಪೂರ್ಣ ಪಟ್ಟಿ
ಬಿಗ್​ಬಾಸ್ 7
Follow us on

ಮತ್ತೆ ಬಿಗ್​ಬಾಸ್ (Bigg Boss) ಸೀಸನ್ ಪ್ರಾರಂಭವಾಗಿದೆ. ಹಿಂದಿ ಬಿಗ್​ಬಾಸ್ ಕೆಲವು ದಿನಗಳ ಹಿಂದೆಯಷ್ಟೆ ಮುಗಿದಿದೆ. ತಮಿಳು ಬಿಗ್​ಬಾಸ್ ಕೆಲವು ದಿನಗಳಲ್ಲಿಯೇ ಪ್ರಾರಂಭವಾಗಲಿದೆ. ಕನ್ನಡದ ಬಿಗ್​ಬಾಸ್ ಮೊದಲ ಪ್ರೋಮೋ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಇವುಗಳ ನಡುವೆ ಇಂದು (ಸೆಪ್ಟೆಂಬರ್ 03) ತೆಲುಗು ಬಿಗ್​ಬಾಸ್ ಸೀಸನ್ 7 ಪ್ರಾರಂಭವಾಗಿದೆ. ನಟ ನಾಗಾರ್ಜುನ (Akkineni Nagarjuna)ಮತ್ತೊಮ್ಮೆ ಬಿಗ್​ಬಾಸ್ ಹೊಸ ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. ಇಂದು ಕಾರ್ಯಕ್ರಮದ ಉದ್ಘಾಟನೆ ಆಗಿದ್ದು, ಸ್ಪರ್ಧಿಗಳಾಗಿ ಮನೆ ಒಳಗೆ ಸೇರಿದವರ ಪಟ್ಟಿ ಇಲ್ಲಿದೆ.

ಸಿನಿಮಾ ನಟರು, ಸಾಫ್ಟ್ ಪಾರ್ನ್ ನಟಿ, ಯೂಟ್ಯೂಬರ್, ಫಿಟ್​ನೆಸ್ ಫ್ರೀಕ್, ರೈತ, ನಿರೂಪಕಿ, ಸಾಮಾನ್ಯ ವ್ಯಕ್ತಿ, ವಿವಾದಾತ್ಮಕ ವ್ಯಕ್ತಿಗಳು ಹೀಗೆ ಹಲವರನ್ನು ಹುಡುಕಿ ಬಿಗ್​ಬಾಸ್ ಮನೆಯ ಒಳಗೆ ಕಳಿಸಲಾಗಿದೆ. ಬಿಗ್​ಬಾಸ್ 7ರ ಎಲ್ಲ ಪ್ರೋಮೋಗಳಲ್ಲಿ ನಾಗಾರ್ಜುನ ಹೇಳಿರುವುದು, ಈ ಬಾರಿಯ ಬಿಗ್​ಬಾಸ್ ಸಾಮಾನ್ಯವಾಗಿರುವುದಿಲ್ಲ ಎಂದು. ಅಂತೆಯೇ ಭಿನ್ನ-ಭಿನ್ನ ವ್ಯಕ್ತಿಗಳನ್ನೇ ಮನೆಯ ಒಳಗೆ ಕಳಿಸಲಾಗಿದೆ. ಆಟ ಇಂದಿನಿಂದ (ಸೆಪ್ಟೆಂಬರ್ 3) ಶುರುವಾಗಿದೆ.

ಬಿಗ್​ಬಾಸ್ ಫಿನಾಲೆಯಲ್ಲಿ ಒಂದು ಸೂಟ್​ಕೇಸ್ ತುಂಬಾ ಹಣ ಕೊಟ್ಟು, ಈ ಸೂಟ್​ಕೇಸ್ ಅನ್ನು ತೆಗೆದುಕೊಂಡು ಸ್ಪರ್ಧೆಯಿಂದ ಹೊರ ಬರಬಹುದು ಎಂಬ ಷರತ್ತು ಹಾಕಲಾಗುತ್ತದೆ. ಅದೇ ರೀತಿ ಈ ಬಾರಿ ಮೊದಲ ದಿನವೇ ಅಂಥಹದ್ದೊಂದು ಸೂಟ್​ಕೇಸ್ ಅನ್ನು ನಾಗಾರ್ಜುನ ಬಿಗ್​ಬಾಸ್ ಮನೆಯ ಒಳಗೆ ಕಳಿಸಿದ್ದರು. ಆ ಸೂಟ್​ಕೇಸ್​ಗಾಗಿ ಮೊದಲ ದಿನವೇ ಸ್ಪರ್ಧಿಗಳು ಕಿತ್ತಾಡಿಕೊಂಡರು. ಅಂದಹಾಗೆ ಸ್ಪರ್ಧಿಗಳಾಗಿ ಬಿಗ್​ಬಾಸ್ ಮನೆ ಸೇರಿದವರ ಪಟ್ಟಿ ಇಲ್ಲಿದೆ.

ಇದನ್ನೂ ಓದಿ:ಮಾಜಿ ಸೊಸೆಯ ನೆನಪಿಸಿಕೊಂಡ ನಾಗಾರ್ಜುನ, ‘ಸಮಂತಾ ಎಲ್ಲಿ’ ಎಂದು ಪ್ರಶ್ನೆ?

ಹಿರಿಯ ನಟ ಶಿವಾಜಿ
ನಟಿ ಶಕೀಲಾ
ದಾಮಿನಿ
ಫರ್ಜಾನಾ
ಆಟ ಸಂದೀಪ್
ಗೌತಮ್
ಶಾವಲಿ
ಅಂಜಲಿ
ಜಬರ್ದಸ್ತ್ ಭಾಸ್ಕರ್
ಅಮರ್​ದೀಪ್ ಚೌಧರಿ
ಪ್ರಿಯಾಂಕಾ
ಶೋಭಾ ಶೆಟ್ಟಿ
ಪ್ರತ್ಯುಶ
ಅರ್ಜುನ್ ಅಂಬಾಟಿ
ಪೂಜಾ
ಪ್ರಶಾಂತ್
ಶುಭಶ್ರೀ
ಟೇಸ್ಟಿ ತೇಜ
ಯಾವರ್

ಉದ್ಘಾಟನೆ ಕಾರ್ಯಕ್ರಮಕ್ಕೆ ನಟ ವಿಜಯ್ ದೇವರಕೊಂಡ ಹಾಗೂ ನಟ ನವೀನ್ ಪೋಲಿಶೆಟ್ಟಿ ಅವರುಗಳು ಅತಿಥಿಗಳಾಗಿ ಆಗಮಿಸಿದ್ದರು. ವಿಜಯ್ ದೇವರಕೊಂಡ ತಮ್ಮ ‘ಖುಷಿ’ ಸಿನಿಮಾ ಪ್ರಚಾರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಮಂತಾ ಬರಲಿಲ್ಲವೇ ಎಂದು ನಾಗಾರ್ಜುನ ಕೇಳಿದರು. ನವೀನ್ ಪೋಲಿಶೆಟ್ಟಿ, ತಮ್ಮ ನಟನೆಯ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಪ್ರಚಾರಕ್ಕೆ ಆಗಮಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ