AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸೊಸೆಯ ನೆನಪಿಸಿಕೊಂಡ ನಾಗಾರ್ಜುನ, ‘ಸಮಂತಾ ಎಲ್ಲಿ’ ಎಂದು ಪ್ರಶ್ನೆ?

Samantha: ನಾಗ ಚೈತನ್ಯ ಜೊತೆಗೆ ಸಮಂತಾ ವಿಚ್ಛೇದನವಾಗಿ ಎರಡು ವರ್ಷಗಳಾಗಿವೆ. ಅಕ್ಕಿನೇನಿ ಕುಟುಂಬದೊಂದಿಗೆ ಸಂಬಂಧ ಕಡಿದುಕೊಂಡಿದ್ದಾರೆ ಸಮಂತಾ. ಆದರೆ ಅಕ್ಕಿನೇನಿ ನಾಗಾರ್ಜುನ ಈಗ ಅಚಾನಕ್ಕಾಗಿ 'ಸಮಂತಾ ಎಲ್ಲಿ' ಎಂದು ವಿಜಯ್ ದೇವರಕೊಂಡ ಬಳಿ ಕೇಳಿದ್ದಾರೆ.

ಮಾಜಿ ಸೊಸೆಯ ನೆನಪಿಸಿಕೊಂಡ ನಾಗಾರ್ಜುನ, 'ಸಮಂತಾ ಎಲ್ಲಿ' ಎಂದು ಪ್ರಶ್ನೆ?
ಸಮಂತಾ-ನಾಗಾರ್ಜುನ
ಮಂಜುನಾಥ ಸಿ.
|

Updated on:Sep 03, 2023 | 5:04 PM

Share

ವಿಜಯ್ ದೇವರಕೊಂಡ (Vijay Deverakonda) ಹಾಗೂ ಸಮಂತಾ ನಟನೆಯ ‘ಖುಷಿ‘ (Kushi) ಸಿನಿಮಾ ಹಿಟ್ ಎನಿಸಿಕೊಂಡಿದೆ. ವಿಜಯ್ ದೇವರಕೊಂಡ ಹಾಗೂ ಸಮಂತಾ ಇಬ್ಬರಿಗೂ ‘ಖುಷಿ’ ಸಿನಿಮಾದ ಗೆಲುವು ನೆಮ್ಮದಿ ನೀಡಿದೆ. ವಿಜಯ್ ದೇವರಕೊಂಡ ‘ಖುಷಿ’ ಸಿನಿಮಾಕ್ಕಾಗಿ ಭರಪೂರ ಪ್ರಚಾರದಲ್ಲಿ ತೊಡಗಿಕೊಂಡಿದ್ದರು, ಸಮಂತಾ ಸಹ ಆಗಾಗ್ಗೆ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿದ್ದರು. ವಿಜಯ್, ತೆಲುಗು ಬಿಗ್​ಬಾಸ್​ನಲ್ಲಿ ಸಿನಿಮಾದ ಪ್ರಚಾರ ಮಾಡಿದ್ದು, ಈ ಸಂದರ್ಭದಲ್ಲಿ ಬಿಗ್​ಬಾಸ್ ನಿರೂಪಕ, ಸಮಂತಾರ ಮಾಜಿ ಮಾವ ನಾಗಾರ್ಜುನ ಸಮಂತಾ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ?

ತೆಲುಗು ಬಿಗ್​ಬಾಸ್ 7 ಇಂದು (ಸೆಪ್ಟೆಂಬರ್ 03) ಅಧಿಕೃತವಾಗಿ ಪ್ರಾರಂಭವಾಗುತ್ತಿದೆ. ಬಿಗ್​ಬಾಸ್ ಸೀಸನ್ ಏಳರ ಉದ್ಘಾಟನೆ ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸ್ಪರ್ಧಿಗಳು ಮನೆ ಒಳಗೆ ಸೇರಿದ್ದಾರೆ. ಆ ಎಪಿಸೋಡ್​ನ ಪ್ರಸಾರ ಇಂದು (ಸೆಪ್ಟೆಂಬರ್ 3) ಆಗಲಿದೆ. ನಟ ವಿಜಯ್ ದೇವರಕೊಂಡ ‘ಖುಷಿ’ ಸಿನಿಮಾದ ಪ್ರಚಾರಕ್ಕೆ ಬಿಗ್​ಬಾಸ್ ವೇದಿಕೆಗೆ ಹೋಗಿದ್ದಾರೆ. ಅಲ್ಲಿ ನಾಗಾರ್ಜುನ ಅವರೊಟ್ಟಿಗೆ ತಮ್ಮ ಬಗ್ಗೆ, ‘ಖುಷಿ’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ, ಸಿನಿಮಾದ ನಾಯಕಿ ಸಮಂತಾ ಬಗ್ಗೆ ನಾಗಾರ್ಜುನ, ವಿಜಯ್ ದೇವರಕೊಂಡ ಅವರ ಬಳಿ ಪ್ರಶ್ನೆ ಮಾಡಿದ್ದಾರೆ.

ಬಿಗ್​ಬಾಸ್ ಓಪನಿಂಗ್​ನ ಪ್ರೋಮೋ ಅಷ್ಟೆ ಇದೀಗ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಓಪನಿಂಗ್​ ಕಾರ್ಯಕ್ರಮದ ಹಲವು ತುಣುಕುಗಳನ್ನು ಸೇರಿಸಲಾಗಿದೆ. ಅದರಲ್ಲಿ ವಿಜಯ್ ದೇವರಕೊಂಡ ಜೊತೆಗಿನ ನಾಗಾರ್ಜುನ ಮಾತುಕತೆ ತುಣುಕು ಸಹ ಇದೆ. ವಿಜಯ್ ಬಳಿ ಸಮಂತಾ ಬಗ್ಗೆ ನಾಗಾರ್ಜುನ ಕೇಳಿದ ಪ್ರಶ್ನೆಗೆ ವಿಜಯ್ ದೇವರಕೊಂಡ ಏನು ಉತ್ತರ ಕೊಟ್ಟರು, ಸಮಂತಾ ಬಗ್ಗೆ ನಾಗಾರ್ಜುನ ಇನ್ನೂ ಏನೇನು ಮಾತನಾಡಿದ್ದಾರೆ ಎಂಬಿತ್ಯಾದಿ ಮಾಹಿತಿ ಎಪಿಸೋಡ್ ಪ್ರಸಾರವಾದ ಬಳಿಕವಷ್ಟೆ ತಿಳಿಯಲಿದೆ.

ಇದನ್ನೂ ಓದಿ:ಪ್ರೇಕ್ಷಕರು ಮೆಚ್ಚಿದ ‘ಖುಷಿ’ ಸಿನಿಮಾಗೆ ‘ಬುಕ್ ಮೈ ಶೋ’, ‘ಐಎಂಡಿಬಿ’ಯಲ್ಲಿ ಸಿಕ್ಕ ರೇಟಿಂಗ್ ಎಷ್ಟು?

ಸಮಂತಾ ಹಾಗೂ ನಾಗ ಚೈತನ್ಯ ಹಲವು ವರ್ಷಗಳ ಪ್ರೀತಿಸಿದ ಬಳಿಕ 2017ರಲ್ಲಿ ವಿವಾಹವಾಗಿದ್ದರು. ಮದುವೆಯಾದ ನಾಲ್ಕನೇ ವರ್ಷಕ್ಕೆ ಈ ಜೋಡಿ ಪರಸ್ಪರ ದೂರಾದರು. ಪರಸ್ಪರ ದೂರ ಆದದ್ದೇಕೆ ಎಂಬ ಬಗ್ಗೆ ನಾಗ ಚೈತನ್ಯ ಆಗಲಿ ಸಮಂತಾ ಆಗಲಿ ಬಹಿರಂಗವಾಗಿ ಮಾತನಾಡಿಲ್ಲ. ನಾಗಾರ್ಜುನ ಸಹ, ಇದು ಅವರ ವೈಯಕ್ತಿಕ ವಿಷಯ ಎಂದಷ್ಟೆ ಹೇಳಿದ್ದರು. ಈಗ ನಾಗಾರ್ಜುನ, ಸಮಂತಾ ಎಲ್ಲಿ ಎಂದು ಕೇಳಿರುವುದು, ನಾಗ್​ಗೆ ಇನ್ನೂ ಮಾಜಿ ಸೊಸೆಯ ಬಗ್ಗೆ ಕಾಳಜಿ ಇದೆ ಎಂಬುದನ್ನು ತೋರಿಸುತ್ತಿದೆ. ಆದರೆ ವಿಚ್ಛೇದನ ಆದ ಸಮಯದಲ್ಲಿ ನಾಗಾರ್ಜುನ ಅಭಿಮಾನಿಗಳು, ನಾಗ ಚೈತನ್ಯ ಅಭಿಮಾನಿಗಳು ಸಮಂತಾರನ್ನು ವಿಪರೀತ ಟ್ರೋಲ್ ಮಾಡಿದ್ದರು, ಹಲವು ಸುಳ್ಳು ಸುದ್ದಿಗಳನ್ನು ಸಮಂತಾ ಬಗ್ಗೆ ಹಬ್ಬಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Sun, 3 September 23

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?