ಎರಡು ದಿನಕ್ಕೆ 51 ಕೋಟಿ ಗಳಿಸಿದ ‘ಖುಷಿ’: ಸಿನಿಮಾದ ಬಜೆಟ್ ಎಷ್ಟು?

ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದ 'ಖುಷಿ' ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ ಎರಡು ದಿನದಲ್ಲಿದ್ದೇ 51 ಕೋಟಿ ಗಳಿಸಿಕೊಂಡಿದೆ. ಆದರೆ ಸಿನಿಮಾದ ಬಜೆಟ್ ಬಗ್ಗೆ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ ಈ ಸಿನಿಮಾದ ಬಜೆಟ್ ಬಗ್ಗೆ ಕೆಲ ಮಾಹಿತಿಗಳು ಹೊರಬಿದ್ದಿದೆ.

ಎರಡು ದಿನಕ್ಕೆ 51 ಕೋಟಿ ಗಳಿಸಿದ 'ಖುಷಿ': ಸಿನಿಮಾದ ಬಜೆಟ್ ಎಷ್ಟು?
ವಿಜಯ್-ಸಮಂತಾ
Follow us
| Updated By: ಮಂಜುನಾಥ ಸಿ.

Updated on:Sep 03, 2023 | 5:06 PM

ತೆಲುಗಿನ ಬಹುನೀರಿಕ್ಷಿತ ಸಿನಿಮಾ ‘ಖುಷಿ’ (Kushi) ಸೆಪ್ಟೆಂಬರ್ 1 ರಂದು ತೆರೆಕಂಡಿದೆ. ಸಮಂತಾ ರುತ್ ಪ್ರಭು (Samantha), ವಿಜಯ್ ದೇವರಕೊಂಡ (Vijay Deverakonda) ಅಭಿನಯದ ಈ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಕನ್ನಡ ಸೇರಿದಂತೆ 4 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಗೊಂಡಿದೆ. ಶಿವ ನಿರ್ವಾಣ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಅನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಉತ್ತಮ ಪ್ರದರ್ಶನ ಕಾಣುತ್ತಿರುವ ‘ಖುಷಿ’ ಸಿನಿಮಾ ಎರಡು ದಿನದಲ್ಲಿ 51 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭರ್ಜರಿ ಗಳಿಕೆ ಮಾಡಿರುವ ಈ ಸಿನಿಮಾದ ಬಜೆಟ್ ಬಗ್ಗೆ ಇದ್ದ ಗೊಂದಲ ಈಗ ತಕ್ಕ ಮಟ್ಟಿಗೆ ಬಗೆಹರಿದಿದೆ.

‘ಖುಷಿ’ ಸಿನಿಮಾವನ್ನು ‘ಮೈತ್ರಿ ಮೂವಿ ಮೇಕರ್ಸ್’ನಿರ್ಮಾಣ ಮಾಡಿದೆ. ಆದರೆ ಇದವರೆಗೂ ಸಿನಿಮಾದ ಬಜೆಟ್ ಬಗ್ಗೆ ಯಾವುದೇ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ಬಿಟ್ಟುಕೊಟ್ಟಿಲ್ಲ. ಆದರೆ ಕೆಲ ಮೂಲಗಳ ಪ್ರಕಾರ ಈ ಸಿನಿಮಾ 40 ರಿಂದ 50 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಸಿನಿಮಾದ ಬಜೆಟ್​ನ ದೊಡ್ಡ ಪಾಲು ನಟರ ಸಂಭಾವನೆ ಎನ್ನಲಾಗಿದೆ. ನಟ ವಿಜಯ್ ದೇವರಕೊಂಡ ‘ಖುಷಿ’ ಸಿನಿಮಾಕ್ಕಾಗಿ 21 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಿನಿಮಾದ ನಟಿ ಸಮಂತಾ 4.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಸಿನಿಮಾದಲ್ಲಿ ಅನುಭವಿ ಕಲಾವಿದರಾದ ಸಚಿನ್ ಖೇಡೆಕರ್, ಮುರಳಿ ಶರ್ಮಾ, ಲಕ್ಷ್ಮೀ, ಶರನ್ಯ ಪೊನ್ವನ್ನನ್ ಇನ್ನಿತರರು ಭಾಗಿಯಾಗಿರುವುದರಿಂದ ಸಿನಿಮಾದ ಬಜೆಟ್ ನಲ್ಲಿ ನಟರ ಸಂಭಾವನೆಯೇ ಹೆಚ್ಚಿದೆ ಎನ್ನಲಾಗಿದೆ. ಟರ್ಕಿ, ಕಾಶ್ಮೀರ, ಹಾಗೂ ಅಲಪ್ಪಿಗಳಲ್ಲಿ ಸಿನಿಮಾದ ಕೆಲ ದೃಶ್ಯಗಳನ್ನು ಶೂಟ್ ಮಾಡಲಾಗಿದೆ.

ಇದನ್ನೂ ಓದಿ:‘ಖುಷಿ’ ಚಿತ್ರದ ಬೆಡ್​ ರೂಮ್​ ದೃಶ್ಯ ವೈರಲ್: ಸಮಂತಾ, ವಿಜಯ್ ದೇವರಕೊಂಡ ಬಗ್ಗೆ ಜನರ ಕಮೆಂಟ್​ ಏನು?

ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿರುವುದರಿಂದ ವಿಜಯ್ ದೇವರುಕೊಂಡ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದಿನ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲು ವಿಫಲವಾದ್ದರಿಂದ ‘ಖುಷಿ’ ಸಿನಿಮಾದ ಯಶಸ್ಸು ಅಗತ್ಯವಾಗಿತ್ತು. ಈ ಸಿನಿಮಾ ನಿರೀಕ್ಷೆಯನ್ನು ಸುಳ್ಳಾಗಿಸದೆ ಉತ್ತಮ ಪ್ರಕ್ರಿಯೆ ಪಡೆದುಕೊಳ್ಳುತ್ತಿದ್ದೆ. ಎರಡು ವಿಭಿನ್ನ ಆದರ್ಶಗಳನ್ನು ಪಾಲಿಸುವ ಭಿನ್ನ ಸಂಪ್ರದಾಯಗಳ ಮನೆತನದ ಯುವಕ ಯುವತಿ ಪ್ರೀತಿಸಿ ಮದುವೆಯಾದಾಗ ಎದುರಿಸುವ ಸಮಸ್ಯೆಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಇದಾಗಿದ್ದು, ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದೆ. ಸಂಗೀತ ನಿರ್ದೇಶಕ ಹೇಶಾಮ್ ಅಬ್ದುಲ್ ವಾಹಾಬ್ ಹಾಡುಗಳು ಪದೇ ಪದೇ ಗುನುಗುವಂತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Sun, 3 September 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ