AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಖುಷಿ’ ಸಿನಿಮಾ ಹಿಟ್: ದೇವಾಲಯಕ್ಕೆ ಭೇಟಿ ಕೊಟ್ಟ ವಿಜಯ್ ದೇವರಕೊಂಡ

Vijay Deverakonda: 'ಖುಷಿ' ಸಿನಿಮಾ ಹಿಟ್ ಆದ ಬೆನ್ನಲ್ಲೆ ವಿಜಯ್ ದೇವರಕೊಂಡ ತಮ್ಮ ಕುಟುಂಬದ ಜೊತೆಗೆ ತೆಲಂಗಾಣದ ಯದಾದ್ರಿ ಭುವನಗಿರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ವಿಜಯ್ ದೇವರಕೊಂಡ ಸಹೋದರ, ನಟ ಆನಂದ್ ದೇವರಕೊಂಡ ಸಹ ಈ ಸಮಯದಲ್ಲಿ ಹಾಜರಿದ್ದರು.

'ಖುಷಿ' ಸಿನಿಮಾ ಹಿಟ್: ದೇವಾಲಯಕ್ಕೆ ಭೇಟಿ ಕೊಟ್ಟ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ
ಮಂಜುನಾಥ ಸಿ.
|

Updated on: Sep 03, 2023 | 5:42 PM

Share

ವಿಜಯ್ ದೇವರಕೊಂಡ (Vijay Deverakonda) ಹಾಗೂ ಸಮಂತಾ (Samantha) ಒಟ್ಟಿಗೆ ನಟಿಸಿರುವ ‘ಖುಷಿ’ ಪ್ಯಾನ್ ಇಂಡಿಯಾ ಸಿನಿಮಾ ಸೆಪ್ಟೆಂಬರ್ 1 ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಬಿಡುಗಡೆ ಆದ ಎರಡೇ ದಿನಕ್ಕೆ ವಿಶ್ವದಾದ್ಯಂತ 51 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಕಳೆದ ಕೆಲವು ವರ್ಷಗಳಿಂದ ಒಂದೊಳ್ಳೆ ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದ ವಿಜಯ್ ದೇವರಕೊಂಡ ‘ಖುಷಿ’ ಸಿನಿಮಾ ಹಿಟ್ ಆಗಿರುವುದನ್ನು ಸಂಭ್ರಮಿಸುತ್ತಿದ್ದು, ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಜಯ್ ದೇವರಕೊಂಡ ತಮ್ಮ ಕುಟುಂಬ ಸಮೇತರಾಗಿ ತೆಲಂಗಾಣದ ಯದಾದ್ರಿ ಭುವನಗಿರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಜಯ್ ದೇವರಕೊಂಡ ಸಹೋದರ, ನಟ ಆನಂದ್ ದೇವರಕೊಂಡ, ವಿಜಯ್ ಅವರ ತಂದೆ-ತಾಯಿ ಅವರು ಸಹ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ‘ಖುಷಿ’ ಸಿನಿಮಾದ ಕೆಲವು ಸದಸ್ಯರು ಸಹ ಹಾಜರಿದ್ದರು.

ದೇವಾಲಯಕ್ಕೆ ಭೇಟಿ ನೀಡಿದ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಕುಟುಂಬ ಹಾಗೂ ‘ಖುಷಿ’ ಕುಟುಂಬ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿರುವ ಚಿತ್ರಗಳನ್ನು ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ‘ಬ್ಲಾಕ್ ಬಸ್ಟರ್ ನೀಡಿರುವ ವಿಜಯ್ ದೇವರಕೊಂಡ ತಮ್ಮ ಕುಟುಂಬ ಹಾಗೂ ‘ಖುಷಿ’ ಸಿನಿಮಾ ತಂಡದೊಟ್ಟಿಗೆ ಯದಾದ್ರಿ ದೇವಾಲಯದಲ್ಲಿ ಆಶೀರ್ವಾದ ಪಡೆದಿದ್ದಾರೆ. ‘ಖುಷಿ’ ಸಿನಿಮಾ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು, ನೋಡಲು ಮರೆಯಬೇಡಿ” ಎಂದಿದೆ, ಜೊತೆಗೆ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದೆ.

ಇದನ್ನೂ ಓದಿ:‘ಖುಷಿ’ ಚಿತ್ರದ ಬೆಡ್​ ರೂಮ್​ ದೃಶ್ಯ ವೈರಲ್: ಸಮಂತಾ, ವಿಜಯ್ ದೇವರಕೊಂಡ ಬಗ್ಗೆ ಜನರ ಕಮೆಂಟ್​ ಏನು?

ವಿಜಯ್ ದೇವರಕೊಂಡ ಕುಟುಂಬಕ್ಕೆ ಈಗ ಡಬಲ್ ಖುಷಿ, ವಿಜಯ್ ಸಹೋದರ ಆನಂದ್ ದೇವರಕೊಂಡ ನಟಿಸಿರುವ ‘ಬೇಬಿ’ ಸಿನಿಮಾ ಸಹ ಸೂಪರ್ ಡೂಪರ್ ಹಿಟ್ ಆಗಿದೆ. ಅದರ ಬೆನ್ನಲ್ಲೆ ಈಗ ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಹಾಗಾಗಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲಾಗಿದೆ. ವಿಜಯ್, ತಮ್ಮ ಕುಟುಂಬದೊಟ್ಟಿಗೆ ದೇವಾಲಯಕ್ಕೆ ಬಂದಾಗ ಅಭಿಮಾನಿಗಳು ಅವರಿಗೆ ಮುತ್ತಿಕೊಂಡಿದ್ದಾರೆ. ದೇವಾಲಯದ ಆವರಣದಲ್ಲಿ ಕೆಲ ಕಾಲ ನೂಕಾಟ-ತಳ್ಳಾಟ ಸಹ ನಡೆದಿದೆ ಎನ್ನಲಾಗಿದೆ.

ವಿಜಯ್ ದೇವರಕೊಂಡ-ಸಮಂತಾ ನಟಿಸಿರುವ ‘ಖುಷಿ’ ಸಿನಿಮಾ ಪ್ರೇಮ, ಮದುವೆ, ಆಕ್ಷನ್, ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಪ್ಯಾಕೇಜ್ ಸಿನಿಮಾ ಆಗಿದೆ. ಸಿನಿಮಾದಲ್ಲಿ ಮುಖ್ಯ ನಟರ ಹೊರತಾಗಿ ಸಚಿನ್ ಖೇಡ್​ಕರ್, ಮುರಳಿ ಶರ್ಮಾ, ವೆನ್ನಿಲ ಕಿಶೋರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಫ್ಯಾಮಿಲಿ ಆಡಿಯೆನ್ಸ್ ಅನ್ನು ಬಹುವಾಗಿ ಸೆಳೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ