AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚಂದ್ರಮುಖಿ’ ಚಿತ್ರೀಕರಣದ ವೇಳೆ, ರಜನೀಕಾಂತ್ ನಟನೆಗೆ ದಂಗಾಗಿದ್ದ ನಿರ್ದೇಶಕ

ತಮಿಳು ಚಿತ್ರರಂಗದಲ್ಲಿ ಭಾರಿ ಯಶಸ್ಸು ಕಂಡ ‘ಚಂದ್ರಮುಖಿ’ ಸಿನಿಮಾದ ಚಿತ್ರೀಕರಣದ ಸಂದರ್ಭವನ್ನು ನಿರ್ದೇಶಕ ಪಿ.ವಾಸು ನೆನಪಿಸಿಕೊಂಡಿದ್ದಾರೆ. ಚಿತ್ರೀಕರಣದಲ್ಲಿ ರಜನೀಕಾಂತ್ ಕೆಲ ಬದಲಾವಣೆಗಳನ್ನು ಮಾಡಿದ್ದರಂತೆ ಇದನ್ನು ನೋಡಿ ನಿರ್ದೇಶಕರೇ ಬೆರಗಾಗಿದ್ದಾರೆ. ಈ ಕುರಿತು ಸಂದರ್ಶನ ಒಂದರಲ್ಲಿ ಪಿ.ವಾಸು ಮಾಹಿತಿ ಹಂಚಿಕೊಂಡಿದ್ದಾರೆ.

'ಚಂದ್ರಮುಖಿ' ಚಿತ್ರೀಕರಣದ ವೇಳೆ, ರಜನೀಕಾಂತ್ ನಟನೆಗೆ ದಂಗಾಗಿದ್ದ ನಿರ್ದೇಶಕ
ರಜನೀಕಾಂತ್
ಮಂಜುನಾಥ ಸಿ.
|

Updated on: Sep 03, 2023 | 9:09 PM

Share

ದಕ್ಷಿಣ ಭಾರತದ (South India) ಸಿನಿಮಾಗಳಲ್ಲಿ ನಾಗವಲ್ಲಿ ಕಥೆಯಾಧಾರಿತ ‘ಆಪ್ತಮಿತ್ರ’ ಸಿನಿಮಾ ಭಾರಿ ಸದ್ದು ಮಾಡಿತು. ಕನ್ನಡದಲ್ಲಿ ಸೂಪರ್ ಹಿಟ್ ಆದ ಬಳಿಕ ಬೇರೆ ಕೆಲವು ಭಾಷೆಗಳಲ್ಲಿ ರಿಮೇಕ್ ಕೂಡ ಆಯಿತು. ರೀಮೇಕ್ (Remake) ಆದ ಎಲ್ಲ ಭಾಷೆಗಳಲ್ಲಿಯೂ ಹಿಟ್ ಆಯಿತು. ‘ಆಪ್ತಮಿತ್ರ’ ಸಿನಿಮಾದ ಮೂಲ ಮಲಯಾಳಂನ ‘ಮಣಿಚಿತ್ರತಾಳ್’ ಎನ್ನಲಾಗುತ್ತದೆ. ಆ ಸಿನಿಮಾ ಸೇರಿದಂತೆ ಬಿಡುಗಡೆ ಆದ ಎಲ್ಲ ಭಾರತೀಯ ಭಾಷೆಗಳಲ್ಲಿಯೂ ಈ ಸಿನಿಮಾ ಸೂಪರ್ ಹಿಟ್ ಆಯಿತು. ಕನ್ನಡದಲ್ಲಿ ಡಾ.ವಿಷ್ಣುವರ್ಧನ್, ರಮೇಶ್ ಅರವಿಂದ್, ಸೌಂದರ್ಯ, ಪ್ರೇಮ ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿದ್ದರು. ಅದೇ ಸಿನಿಮಾ ತಮಿಳು ಆವೃತ್ತಿ ‘ಚಂದ್ರಮುಖಿ’ಯಲ್ಲಿ ರಜನಿಕಾಂತ್ (Rajinikanth), ಜ್ಯೋತಿಕಾ, ನಯನತಾರಾ ಅಭಿನಯಸಿದ್ದಾರೆ. ಈ ಚಿತ್ರದ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ.

ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲಿಯೂ ಪಿ. ವಾಸು ಸಿನಿಮಾ ನಿರ್ದೇಶಿಸಿದ್ದರು. ತಮಿಳಿನ ‘ಚಂದ್ರಮುಖಿ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ರಜನಿಕಾಂತ್ ಸೀನ್ ಒಂದರಲ್ಲಿ ಬದಲಾವಣೆ ಮಾಡಿರುವುದನ್ನು ಸಂದರ್ಶನ ಒಂದರಲ್ಲಿ ನೆನಪಿಸಿಕೊಂಡಿದ್ದಾರೆ. ಚಂದ್ರಮುಖಿ(ನಾಗವಲ್ಲಿ) ರಾಜನ ಪ್ರತಿಯನ್ನು ಸುಡುವ ದೃಶ್ಯ ಯಾರಿಗೆ ನೆನಪಿಲ್ಲ? ಚಿತ್ರದ ಕೊನೆಯಲ್ಲಿ ತಲೆಯನ್ನು ಒದೆಯುವ ದೃಶ್ಯ ಒಂದಿದೆ. ಈ ದೃಶ್ಯವನ್ನು ರಜನೀಕಾಂತ್ ನಟಿಸುವಾಗಲೇ ಬದಲಾಯಿಸಿಕೊಂಡಿದ್ದರಂತೆ. ಅವರ ಈ ನಟನೆಯನ್ನು ನೋಡಿ ಸ್ವತಃ ವಾಸುರವರೇ ಭಯಭೀತರಾಗಿದ್ದರು. ಪ್ರೇಕ್ಷಕರು ಈ ಸೀನ್​ಗೆ ವಿರೋಧ ವ್ಯಕ್ತಪಡಿಸಬಹುದು ಎಂದು ಹೆದರಿದ್ದರು. ವೀಕ್ಷಕರು ಈ ದೃಶ್ಯವನ್ನು ಬಹಳ ಇಷ್ಟಪಟ್ಟು ನೋಡುತ್ತಾರೆ ಎಂದು ರಜನಿಕಾಂತ್ ಹೇಳಿದ ಮೇಲೆ ಸಮಾಧಾನವಾಗಿತ್ತು ಎಂದು ಪಿ.ವಾಸು ನೆನಪಿಕೊಂಡಿದ್ದಾರೆ.

ಇವರ ನಿರ್ದೇಶನದ ‘ಚಂದ್ರಮುಖಿ 2’ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಆದರೆ ರಜನೀಕಾಂತ್ ಬದಲಿಗೆ ರಾಘವ ಲಾರೆನ್ಸ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಕಂಗನಾ ರನೌತ್, ಮಹಿಮಾ ನಂಬಿಯಾರ್ ಈ ಸಿನಿಮಾದಲ್ಲಿ ನಟಿದ್ದಾರೆ. ಪ್ರತಿಷ್ಠಿತ ‘ಲೈಕಾ ಪ್ರೋಡಕ್ಷನ್’ ಹಣ ಹೂಡಿದ್ದು, ಸೆಪ್ಟೆಂಬರ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ರಜನೀಕಾಂತ್ ಬಳಿಕ ಜೈಲರ್ ನಿರ್ದೇಶಕನಿಗೂ ಕಾರು, ಹಣ ಉಡುಗೊರೆ ಕೊಟ್ಟ ನಿರ್ಮಾಪಕ

ಮಲಯಾಳಂನ ‘ಮಣಿಚಚಿತ್ರತಾಳ್’ ಸಿನಿಮಾದಿಂದ ಕನ್ನಡ ಸೇರಿದಂತೆ ವಿವಿಧ ಭಾಷೆಗಳಿಗೆ ಈ ಸಿನಿಮಾ ರಿಮೇಕ್ ಆಗಿವೆ. ಕನ್ನಡದ ‘ಆಪ್ತಮಿತ್ರ’, ತಮಿಳಿನ ‘ಚಂದ್ರಮುಖಿ’ ಎರಡು ಸಿನಿಮಾವನ್ನು ಪಿ.ವಾಸುರವರೇ ನಿರ್ದೇಶಿಸಿದ್ದಾರೆ. ಈಗ ತಮಿಳಿನಲ್ಲಿ ‘ಚಂದ್ರಮುಖಿ 2’ ತೆರೆಗೆ ಬರಲು ಸಿದ್ಧವಾಗಿದ್ದು, ಭಾರಿ ಕೂತುಹಲ ಹುಟ್ಟುಹಾಕಿದೆ. ಹಿಂದಿಯಲ್ಲಿ ಇದೇ ಸಿನಿಮಾ ‘ಭೂಲ್ ಭುಲಯ್ಯ’ ಆಗಿ ರೀಮೇಕ್ ಆಗಿತ್ತು. ಅಲ್ಲಿ ‘ಭೂಲ್ ಭುಲಯ್ಯ 2’ ಸಿನಿಕಾ ಬಂತಾದರೂ ಅದು ‘ಆಪ್ತಮಿತ್ರ 2’ ಸಿನಿಮಾದ ರೀಮೇಕ್ ಆಗಿರಲಿಲ್ಲ. ಇದೀಗ ‘ಚಂದ್ರಮುಖಿ 2’ ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗಾನಾ ನಟಿಸಿದ್ದಾರೆ. ಹಿಂದಿನ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ರಜನೀಕಾಂತ್ ಈ ಸಿನಿಮಾದಿಂದ ದೂರಳಿದ್ದಾರೆ. ಆಗಸ್ಟ್ ನಲ್ಲಿ ಈ ಸಿನಿಮಾ ಆಡಿಯೋ ಲಾಂಚ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ